ಹಿಂದೂ ಯಾತ್ರೆ ಮೇಲೆ ಕಲ್ಲೆಸೆಯಲು ಬಳಸಿದ ಹೊಟೆಲ್ ಕಟ್ಟಡವನ್ನೇ ಧ್ವಂಸಗೊಳಿಸಿದ ಸರ್ಕಾರ!
ಹಿಂದೂಗಳ ಶೋಭಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಲು ನುಹ್ ಪಟ್ಟಣದ ಸಹಾರ ಹೊಟೆಲ್ ಕಟ್ಟಡವನ್ನು ಬಳಸಿಕೊಳ್ಳಲಾಗಿತ್ತು. ಕಟ್ಟಡ ಮೇಲಿಂದ ಕಿಡಿಗೇಡಿಗಳು ಶೋಭಯಾತ್ರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದೀಗ ಈ ಹೊಟೆಲ್ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ.
ನುಹ್(ಆ.06) ಹರ್ಯಾಣದ ನೂಹ್ ಜಿಲ್ಲೆಯಲ್ಲಿ ಆರಂಭಗೊಂಡ ಕೋಮುಸಂಘರ್ಷಕ್ಕೆ ಹರ್ಯಾಣ, ಗುರುಗಾಂವ್ ಸೇರಿದಂತೆ ಹಲವು ಭಾಗದಲ್ಲಿ ಭಾರಿ ಹಿಂಸಾಚಾರ ನಡೆದಿದೆ. ಇದೀಗ ಈ ಗಲಭೆ ತನಿಖೆ ನಡೆಯುತ್ತಿದ್ದು ಸರ್ಕಾರ ಬುಲ್ಡೋಜರ್ ಅಸ್ತ್ರ ಪ್ರಯೋಗಿಸಿದೆ. ಈಗಾಗಲೇ ಕೋಮುಸಂಘರ್ಷದ ಆರೋಪಿಗಳ ಅಕ್ರಮ ಮನೆಗಳು ನೆಲೆಸಮಗೊಂಡಿದೆ. ಇದೀಗ ಶೋಭಯಾತ್ರೆ ಮೇಲೆ ಕಲ್ಲೆಸೆಯಲು ಹೊಟೆಲ್ ಕಟ್ಟಡ ಬಳಸಿಕೊಳ್ಳಲಾಗಿತ್ತು. ಇದೀಗ ಈ ಅಕ್ರಮ ಕಟ್ಟಡವನ್ನು ಹರ್ಯಾಣ ಸರ್ಕಾರ ಧ್ವಂಸಗೊಳಿಸಿದೆ.
ಕೋಮುಸಂಘರ್ಷ ಪ್ರಮುಖ ಕೇಂದ್ರ ಬಿಂದು ನುಹ್ ಪಟ್ಟಣ. ವಿಶ್ವ ಹಿಂದೂ ಪರಿಷತ್ ಶೋಭಯಾತ್ರೆ ಮೇಲೆ ಕಲ್ಲುತೂರಾಟ ನಡೆಸಲಾಗಿತ್ತು. ಈ ಘಟನೆ ಭಾರಿ ಹಿಂಸಾಚಾರಕ್ಕೆ ತಿರುಗಿ ಕೋಮುಸಂಘರ್ಷಕ್ಕೆ ಕಾರಣವಾಗಿತ್ತು. ಗಲಭೆ ಹತ್ತಿದ್ದ ಸರ್ಕಾರ ಕಳೆದ ನಾಲ್ಕು ದಿನಗಳಿಂದ ಆರೋಪಿಗಳ ಅಕ್ರಮ ಮನೆಗಳು, ಅಕ್ರಮ ಕಟ್ಟಡಗಳನ್ನು ಬುಲ್ಡೋಜರ್ ಮೂಲಕ ನೆಲೆಸಮಗೊಳಿಸಲಾಗಿತ್ತು. ಇದೀಗ ನುಹ್ ಪ್ರದೇಶದಲ್ಲಿ ಶೋಭಯಾತ್ರೆ ಸಾಗುತ್ತಿದ್ದ ವೇಳೆ ಸಹಾರ ಹೊಟೆಲ್ ಕಟ್ಟದ ಮೇಲೇರಿದ್ದ ಕಿಡಿಗೇಡಿಗಳು, ಶೋಭಯಾತ್ರೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದೀಗ ಈ ಹೊಟೆಲ್ ಕಟ್ಟಡವೂ ನೆಲೆಸಮಗೊಂಡಿದೆ.
ಕೋಮು ಹಿಂಸಾಚಾರದಲ್ಲಿ ಕೂದಲೆಳೆ ಅಂತರದಲ್ಲಿ ಪಾರಾದ ಜಡ್ಜ್ ಅಂಜಲಿ, 3 ವರ್ಷದ ಪುತ್ರಿ!
ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದ 2,500ಕ್ಕೂ ಹೆಚ್ಚು ಮಂದಿ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಪಕ್ಕದ ದೇವಸ್ಥಾನದಲ್ಲಿ ಆಶ್ರಯಪಡೆಯಲಾಗಿತ್ತು. ಇಲ್ಲಿಂದ ಶುರುವಾದ ಕೋಮುಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹೊಟೆಲ್ ಕಟ್ಟದ ಹಿಂದೆ ಅವಿತುಕುಳಿತಿದ್ದ ಕಿಡಿಗೇಡಿಗಳ ಕೆಳಗಿನಿಂದ ಕಲ್ಲು ತೂರಾಟ ನಡೆಸಿದ್ದರೆ, ಕಟ್ಟಜ ಮೇಲ್ಬಾಗದಲ್ಲಿ ಹಲವರು ಕಲ್ಲುಗಳನ್ನು ಶೇಖರಿಸಿ ದಾಳಿ ನಡೆಸಿದ್ದರು. ಹಿಂಸಾಚಾರಕ್ಕೆ ನೆರವು ನೀಡಿದ ಅಕ್ರಮ ಹೊಟೆಲ್ ಕಟ್ಟಡವನ್ನು ಧ್ವಂಸಗೊಳಿಸಲಾಗಿದೆ.
ಇನ್ನು ನೂಹ್‌ನಲ್ಲಿ ಗಲಭೆ ನಡೆದ ಬೆನ್ನಲ್ಲೇ ಇಲ್ಲಿನ ತೌರು ಪಟ್ಟಣದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ 250 ಗುಡಿಸಲುಗಳನ್ನು ಅಧಿಕಾರಿಗಳು ಬುಲ್ಡೋಜರ್‌ನಿಂದ ನೆಲಸಮಗೊಳಿಸಿದ್ದಾರೆ. ಇವರು ಅಕ್ರಮ ಬಾಂಗ್ಲಾ ವಲಸಿಗರಾಗಿದ್ದು ಮೊದಲು ಅಸ್ಸಾಂನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಆದರೆ ಗಲಭೆಗೂ ಹಾಗೂ ಈ ಪ್ರಕ್ರಿಯೆಗೂ ಯಾವುದೇ ಸಂಬಂಧವಿಲ್ಲ. ಇದೊಂದು ಸಾಮಾನ್ಯ ತೆರವು ಕಾರ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಗಲಭೆ ಪ್ರಕರಣದಲ್ಲಿ ಈವರೆಗೆ ಒಟ್ಟು 202 ಜನರನ್ನು ಬಂಧಿಸಲಾಗಿದೆ ಎಂದು ರಾಜ್ಯ ಗೃಹ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ. ಈ ನಡುವೆ ನೂಹ್ ನಗರದಲ್ಲಿ ಕೋಮುಗಲಭೆ ನಡೆದ ವೇಳೆ ರಜೆಯ ಮೇಲಿದ್ದ ಜಿಲ್ಲೆಯ ಎಸ್‌ಪಿ ವರುಣ್ ಸಿಂಗ್ಲಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂಸಾಚಾರದಲ್ಲಿ 6 ಮಂದಿ ಮೃತಪಟ್ಟಿದ್ದಾರೆ.
ನೂಹ್ ಹಿಂಸಾಚಾರದಿಂದ ಎಚ್ಚೆತ್ತುಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಹರ್ಯಾಣಕ್ಕೆ ಗಡಿಹೊಂದಿರುವ 3 ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಎಚ್ಚರಿಕೆ ಕೈಗೊಂಡಿದೆ. ಇದರ ಭಾಗವಾಗಿ ಗಡಿಯಲ್ಲಿ ಕಟ್ಟುನಿಟ್ಟಿನ ಪರಿಶೀಲನೆ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಪೊಲೀಸರ ನಿಯೋಜನೆ ಮಾಡಿದೆ. ಇದರ ಜೊತೆಗೆ ಹರ್ಯಾಣ ಭಾಗದ ಗಡಿ ಪ್ರದೇಶದಲ್ಲೂ ಅಲ್ಲಿನ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.