UP, MP ಬಳಿಕ ರಾಜಸ್ಥಾನದಲ್ಲಿ ಬುಲ್ಡೋಜರ್ ಘರ್ಜನೆ, ಕರಣಿ ಸೇನೆ ಅಧ್ಯಕ್ಷನ ಹತ್ಯೆ ಆರೋಪಿ ಮನೆ ಧ್ವಂಸ!
ರಜಪೂತ್ ಸಂಘಟನೆ ‘ಕರಣಿ ಸೇನಾ’ ನಾಯಕ ಸುಖ್‌ದೇವ್ ಗೊಗಮೆಡಿಯನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಈ ಪೈಕಿ ಪ್ರಮುಖ ಆರೋಪಿ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಲಾಗಿದೆ.
ಜೈಪುರ(ಡಿ.28) ರಾಜ್ಥಾನದ ರಜಪೂತ ಸಂಘಟನೆ ಕರಣಿ ಸೇನೆ ಪ್ರತಿಭಟನೆ ಸೇರಿದಂತೆ ಹಲವು ಆಂದೋಲನದ ಮೂಲಕ ಭಾರಿ ಸದ್ದು ಮಾಡಿದೆ. ಇತ್ತೀಚೆಗೆ ಕರಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿಯನ್ನು ಅವರ ಮನೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು. ಇದೀಗ ರಾಜಸ್ಥಾನ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕರಣಿ ಸೇನಾ ಅಧ್ಯಕ್ಷನ ಹತ್ಯೆಗೈದ ಪ್ರಮುಖ ಆರೋಪಿ ರೋಹಿತ್ ರಾಥೋರ್ ಮನೆಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡಲಾಗಿದೆ.
ಖಾಟಿಪುರದಲ್ಲಿರುವ ಆರೋಪಿ ರೋಹಿತ್ ರಾಥೋರ್ ಮನೆ ಅಕ್ರಮವಾಗಿ ಕಟ್ಟಲಾಗಿದೆ. ಈ ಕುರಿತು ಜೈಪುರ್ ಮುನ್ಸಿಪಾಲಿಟಿ ಕಾರ್ಪೋರೇಶನ್ ಸರ್ಕಾರಿ ಜಾಗದಲ್ಲಿ ಅತಿಕ್ರಮವಾಗಿ ಹಾಗೂ ಅಕ್ರಮವಾಗಿ ಕಟ್ಟಿದ ಮನೆಯನ್ನು ಧ್ವಂಸಗೊಳಿಸಿದೆ. ಆದರೆ ಈ ನಿರ್ಧಾರವನ್ನು ಆರೋಪಿ ರೋಹಿತ್ ರಾಥೋರ್ ತಾಯಿ ಒಮ್ ಕನ್ವಾರ್ ತೀವ್ರವಾಗಿ ವಿರೋಧಿಸಿದ್ದಾರೆ. ರೋಹಿತ್ ರಾಥೋರ್ ಸಹೋದರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಾವುದೇ ನೋಟಿಸ್ ನೀಡಿದ ಮನೆ ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕರಣಿ ಸೇನಾ ನಾಯಕನ ಹತ್ಯೆ ಹೊಣೆ ಹೊತ್ತ ಗೋಲ್ಡಿ ಬ್ರಾರ್ ಗ್ಯಾಂಗ್, ಸಿಸಿಟಿ ದೃಶ್ಯ ಬಹಿರಂಗ!
ಸುಖದೇವ್ ಹತ್ಯೆ ಬೆನ್ನಲ್ಲೇ ಗೊಲ್ಡಿ ಬ್ರಾರ್ ಗ್ಯಾಂಗ್‌ಸ್ಟರ್ ಸಂಘಟನೆ ಇದರ ಹೊಣೆ ಹೊತ್ತುಕೊಂಡಿತ್ತು. ಇದೇ ಸಂಘಟನೆಯ ರೋಹಿತ್ ರಾಥೋರ್ ಫೇಸ್‌ಬುಕ್ ಪೋಸ್ಟ್ ಮಾಡಿ ಹತ್ಯೆಯನ್ನು ಸಂಭ್ರಮಿಸಿದ್ದ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ರೋಹಿತ್ ರಾಥೋರ್, ನಿತಿನ್ ಫೌಜಿ, ಉದ್ಧಮ್ ಅರೆಸ್ಟ್ ಮಾಡಲಾಗಿತ್ತು.
ಡಿಸೆಂಬರ್ 5 ರಂದು ಸುಖದೇವ್ ಗೊಗೆಮಡಿ ತಮ್ಮ ಮನೆಯಲ್ಲಿದ್ದ ವೇಳೆ ಈ ದಾಳಿ ನಡೆದಿತ್ತು. ಗೋಲ್ಡಿ ಬ್ರಾರ್ ಗ್ಯಾಂಗ್‌ನ ಮೂವರು ಸದಸ್ಯರರು ಮಾತುಕತೆ ಹೆಸರಿನಲ್ಲಿ ಗೊಗೆಮಡಿ ಮನೆಗೆ ಆಗಮಿಸಿದ್ದಾರೆ. ಮಾತುಕತೆ ನಡುವೆ ದಿಢೀರ್ ದಾಳಿ ನಡೆಸಿದ್ದಾರೆ. ಸುಖ್ ದೇವ್ ಹಾಗೂ ಆಪ್ತರಿಗೆ ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಗೊಗೆಮಡಿ ಸೆಕ್ಯೂರಿಟಿ ಪ್ರತಿದಾಳಿ ನಡೆಸಿದ್ದಾರೆ. ಈ ಪ್ರತಿದಾಳಿಯಲ್ಲಿ ಹಂತಕ ನವೀನ್ ಸಿಂಗ್ ಶೇಖಾವತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತ ಗೊಗೆಮಡಿ ಹಾಗೂ ಮತ್ತೊರ್ವ ಕಾರ್ಯಕರ್ತ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದರು.
ಕರ್ಣಿ ಸೇನಾ ರಾಷ್ಟ್ರೀಯ ಅಧ್ಯಕ್ಷ Sukhdev Singh Gogamedi ಮರ್ಡರ್!
ಸುಖ್‌ದೇವ್ ಗೊಡಮೇಡಿ ಮೂಲತಃ ರಾಷ್ಷ್ಟ್ರೀಯ ರಜಪೂತ್ ಕರ್ಣಿ ಸೇನೆಯಲ್ಲಿದ್ದು, 2015ರಲ್ಲಿ ಪದ್ಮಾವತ್ ಚಿತ್ರದ ಕುರಿತು ತಮ್ಮ ನಾಯಕ ಲೋಕೇಂದ್ರ ಸಿಂಗ್ ಕಲ್ವಿ ಜೊತೆ ಭಿನ್ನಾಭಿಪ್ರಾಯ ತಲೆದೋರಿದ ಹಿನ್ನೆಲೆಯಲ್ಲಿ ಪ್ರತ್ಯೇಕ ಬಣವನ್ನು ಸ್ಥಾಪಿಸಿದ್ದನು.