ಅಲಿಘಢದ ಶ್ರೀ ವರ್ಷಿಣಿ ಕಾಲೇಜಿನಲ್ಲಿ ಶಿಕ್ಷಕರೊಬ್ಬರು ಕ್ಯಾಂಪಸ್ ನಲ್ಲಿಯೇ ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಅಧ್ಯಾಪಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ನವದೆಹಲಿ (ಮೇ.29): ಅಲಿಗಢ್‌ನ (Aligarh) ಶ್ರೀ ವರ್ಷಿಣಿ ಕಾಲೇಜಿನಲ್ಲಿ(Sri Varshney College) ಶಿಕ್ಷಕರೊಬ್ಬರು ಕ್ಯಾಂಪಸ್ ನಲ್ಲಿಯೇ ನಮಾಜ್ (Namaz) ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ, ಬಿಜೆಪಿ ಯುವ ಮೋರ್ಚಾ (BJP Yuva Morcha) ಮುಖಂಡರು, ಮೋರ್ಚಾದ ಮಹಾನಗರ ಘಟಕದ ಉಪಾಧ್ಯಕ್ಷ ಅಮಿತ್ ಗೋಸ್ವಾಮಿ (Amit Goswami) ನೇತೃತ್ವದಲ್ಲಿ ಶುಕ್ರವಾರ, ಮೇ 27 ರಂದು ಅಲಿಘರ್‌ನ ಶ್ರೀ ವರ್ಷಿಣಿ ಕಾಲೇಜಿಗೆ ಆಗಮಿಸಿ ಪ್ರತಿಭಟನೆ ನಡೆಸಿದ್ದಾರೆ. ಕ್ಯಾಂಪಸ್ ನಲ್ಲಿ ನಮಾಜ್ ಮಾಡಿದ ಅಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತಂತೆ ಸಮಿತಿ ರಚಿಸಿ ವಿಚಾರಣೆ ನಡೆಸಲಾಗುವುದು ಎಂದು ಕಾಲೇಜು ಪ್ರಾಂಶುಪಾಲರು ತಿಳಿಸಿದ್ದಾರೆ. ಘಟನೆಗೆ ಆಕ್ಷೇಪ ವ್ಯಕ್ತಪಡಿಸಿದ ಅಮಿತ್ ಗೋಸ್ವಾಮಿ, "ಇದು ನಮಾಜ್ ಓದಲು ಧಾರ್ಮಿಕ ಸ್ಥಳವಲ್ಲ. ಪ್ರಾಧ್ಯಾಪಕರು ತರಗತಿ ಬಿಟ್ಟು ಶಿಕ್ಷಣ ಸಂಸ್ಥೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ಕೊಟ್ಟವರು ಯಾರು?' ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದೂಗಳು, ಮುಸ್ಲಿಮರು, ಸಿಖ್ಖರು ಸೇರಿದಂತೆ ಎಲ್ಲ ಧರ್ಮೀಯರು ಶಿಕ್ಷಣ ಸಂಸ್ಥೆಗಳಿಗೆ ಬರುವುದರಿಂದ ಅವರನ್ನೂ ಸಮಾನವಾಗಿ ಪರಿಗಣಿಸಬೇಕು ಎಂದ ಅವರು ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪರಿಸ್ಥಿತಿಯ ವಿವರಗಳನ್ನು ನೀಡಿದ ವರ್ಷಣಿ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಅನಿಲ್ ಕುಮಾರ್ ಗುಪ್ತಾ, "ಈ ವಿಷಯಕ್ಕೆ ಸಂಬಂಧಿಸಿದಂತೆ, ನಾನು 28 ರಂದು ಬೆಳಿಗ್ಗೆ ಪ್ರಯಾಗ್‌ರಾಜ್‌ನಿಂದ ಹಿಂತಿರುಗಿದ್ದೇನೆ ಮತ್ತು ನಾನು ನನ್ನ ಹಾಲಿ ಪ್ರಾಂಶುಪಾಲರನ್ನು ಕರೆದು ವಿಷಯದ ಬಗ್ಗೆ ವಿಚಾರಿಸುತ್ತೇನೆ. ಈ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಿ ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು.ಮುಂದೆ ಇಂತಹ ಧಾರ್ಮಿಕ ಚಟುವಟಿಕೆಗಳು ವಿವಾದ ಸೃಷ್ಟಿಸಿದರೆ ಅಂತಹ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತೇನೆ' ಎಂದಿದ್ದಾರೆ.
ಇನ್ನು ಕರ್ನಾಟಕದ ಮುಳಬಾಗಿಲು ಸರ್ಕಾರಿ ಶಾಲೆಯೊಂದು ಮುಸ್ಲಿಂ ವಿದ್ಯಾರ್ಥಿಗಳಿಗೆ ಶಾಲಾ ಆವರಣದಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಮುಳಬಾಗಿಲು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಬಾಳೆಚೆಂಗಪ್ಪ ಶಾಲೆಯೊಳಗೆ ವಿದ್ಯಾರ್ಥಿಗಳಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ವಿವಿಧ ಹಿಂದೂಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಆದರೆ, ಶಾಲೆಯ ಪ್ರಾಂಶುಪಾಲರಾದ ಉಮಾದೇವಿ, ವಿದ್ಯಾರ್ಥಿಗಳಿಗೆ ಅಂತಹ ಯಾವುದೇ ಅನುಮತಿ ನೀಡುವುದನ್ನು ನಿರಾಕರಿಸಿದ್ದಾರೆ.
Shivamogga: ಶಾಲೆಯಲ್ಲೇ ನಮಾಜ್‌ಗೆ ಪರ್ಮಿಷನ್: ಮುಖ್ಯಶಿಕ್ಷಕಿ ಸಸ್ಪೆಂಡ್
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಉಮಾದೇವಿ, "ನಾನು ತರಗತಿ ಶಿಕ್ಷಕರೊಂದಿಗೆ ಹೊರಗಡೆ ಇದ್ದೆ, ಇದ್ದಕ್ಕಿದ್ದಂತೆ ದೀಪಾ ಎನ್ನುವ ಶಿಕ್ಷಕಿ ಅವರಿಂದ ಕರೆ ಬಂದಿತು, ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡುತ್ತಿದ್ದಾರೆ ಎಂದು ಅವರು ನನಗೆ ಹೇಳಿದರು, ನನಗೆ ತಿಳಿದಿಲ್ಲ ಎಂದು ನಾನು ಹೇಳಿ, ಶಾಲೆಗೆ ಧಾವಿಸಿದೆ' ಎಂದಿದ್ದಾರೆ.
Bengaluru: ರೈಲ್ವೆ ನಿಲ್ದಾಣದಲ್ಲಿ ಹಮಾಲಿಗಳಿಂದ ನಮಾಜ್: ಹಿಂದೂ ಪರ ಸಂಘಟನೆಗಳ ಆಕ್ರೋಶ
"ನಾನು ಶಾಲೆಗೆ ಬಂದಾಗ, ಮಾಧ್ಯಮದವರು ಈ ವಿಷಯದ ಬಗ್ಗೆ ನನ್ನನ್ನು ಕೇಳಿದರು, ನನಗೆ ಗೊತ್ತಿಲ್ಲದೆ ಇದು ಸಂಭವಿಸಿದೆ ಎಂದು ನಾನು ಅವರಿಗೆ ಹೇಳಿದೆ. ಅದು ಹೇಗೋ ಸಂಭವಿಸಿತು, ಆದರೆ ಮುಂದೆ ಹೀಗಾಗಲು ನಾನು ಬಿಡುವುದಿಲ್ಲ, ಇಲ್ಲಿ ಎಲ್ಲರೂ ಸಮಾನರು. ಯಾರಾದರೂ ಯಾವುದೇ ನಮಾಜ್ ಅಥವಾ ಯಾವುದೇ ಇತರ ಪ್ರಾರ್ಥನೆಯನ್ನು ಮಾಡಲು ನಾವು ಹೇಳಿಲ್ಲ' ಎಂದು ಹೇಳಿದರು.
