Asianet Suvarna News Asianet Suvarna News

ಉತ್ತರ ಪ್ರದೇಶ ನಗರಪಾಲಿಕೆ ಚುನಾವಣೆ: ಎಲ್ಲ 17 ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಜಯಭೇರಿ

ಜಲಂಧರ್‌ ಲೋಕಸಭೆ ಉಪಚುನಾವಣೆಯಲ್ಲಿ ಪಂಜಾಬ್‌ನ ಕಾಂಗ್ರೆಸ್‌ನ ಕರ್ಮಜಿತ್‌ ಕೌರ್‌ ಅವರನ್ನು ರಾಜ್ಯದ ಆಡಳಿತಾರೂಢ ಆಪ್‌ ಅಭ್ಯರ್ಥಿ ಸುಶೀಲ್‌ ರಿಂಕು ಸುಮಾರು 48 ಸಾವಿರ ಅಂತರದಿಂದ ಮಣಿಸಿದ್ದಾರೆ. ಇಲ್ಲಿ 24 ವರ್ಷ ಬಳಿಕ ಇದೇ ಮೊದಲ ಬಾರಿ ಕಾಂಗ್ರೆಸ್‌ ಸೋಲು ಅನುಭವಿಸಿದೆ.

bjp wins all 17 mayoral posts in uttar pradesh puts up good show in other urban areas ash
Author
First Published May 14, 2023, 9:09 AM IST

ಲಖನೌ (ಮೇ 14, 2023): ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಉತ್ತರ ಪ್ರದೇಶ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಸಂಪಾದಿಸಿದೆ. 17 ಮಹಾನಗರ ಪಾಲಿಕೆಗಳ ಪೈಕಿ ಎಲ್ಲ 17 ಪಾಲಿಕೆಗಳೂ ಬಿಜೆಪಿ ಪಾಲಾಗಿವೆ. ಬಿಎಸ್‌ಪಿ ಹಾಗೂ ಪ್ರಮುಖ ಪ್ರತಿಪಕ್ಷವಾದ ಸಮಾಜವಾದಿ ಪಕ್ಷ ಶೂನ್ಯ ಸಂಪಾದಿಸಿದೆ.

ಲಖನೌ, ಮಥುರಾ, ಬರೇಲಿ, ಮೇರಠ್‌, ಕಾನ್ಪುರ, ಪ್ರಯಾಗರಾಜ್‌, ಅಲಿಗಢ, ಮೊರಾದಾಬಾದ್‌, ಫಿರೋಜಾಬಾದ್‌, ಗೋರಖಪುರ, ವಾರಾಣಸಿ, ಗಾಜಿಯಾಬಾದ್‌, ಬರೇಲಿ, ಶಹಜಹಾನ್‌ಪುರ, ಝಾನ್ಸಿ, ಅಯೋಧ್ಯೆಗಳಲ್ಲಿ ಬಿಜೆಪಿ ಗೆದ್ದಿದೆ. ಆಗ್ರಾದಲ್ಲಿ ಸಹ ಬಿಜೆಪಿ ಗೆದ್ದಿದೆ. ಈ ಹಿಂದೆ ಮೇರಠ್‌ ಹಾಗೂ ಅಲಿಗಢದಲ್ಲಿ ಬಿಎಸ್‌ಪಿ ಅಧಿಕಾರದಲ್ಲಿತ್ತು. ಮಿಕ್ಕೆಲ್ಲ ಪಾಲಿಕೆಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು.

ಇದನ್ನು ಓದಿ: ‘ಶೀಘ್ರದಲ್ಲೇ ಯೋಗಿಯನ್ನು ಕೊಲ್ಲುತ್ತೇನೆ’: ಮಾಫಿಯಾಗೆ ಕೊನೆಮೊಳೆ ಹೊಡೀತಿರೋ ಯುಪಿ ಸಿಎಂಗೆ ಹತ್ಯೆ ಬೆದರಿಕೆ

24 ವರ್ಷ ಬಳಿಕ ಜಲಂಧರ್‌ನಲ್ಲಿ ಕಾಂಗ್ರೆಸ್‌ಗೆ ಸೋಲು
ಜಲಂಧರ್‌ (ಪಂಜಾಬ್‌): ಜಲಂಧರ್‌ ಲೋಕಸಭೆ ಉಪಚುನಾವಣೆಯಲ್ಲಿ ಪಂಜಾಬ್‌ನ ಕಾಂಗ್ರೆಸ್‌ನ ಕರ್ಮಜಿತ್‌ ಕೌರ್‌ ಅವರನ್ನು ರಾಜ್ಯದ ಆಡಳಿತಾರೂಢ ಆಪ್‌ ಅಭ್ಯರ್ಥಿ ಸುಶೀಲ್‌ ರಿಂಕು ಸುಮಾರು 48 ಸಾವಿರ ಅಂತರದಿಂದ ಮಣಿಸಿದ್ದಾರೆ. ಇಲ್ಲಿ 24 ವರ್ಷ ಬಳಿಕ ಇದೇ ಮೊದಲ ಬಾರಿ ಕಾಂಗ್ರೆಸ್‌ ಸೋಲು ಅನುಭವಿಸಿದೆ.

ವಿಧಾನಸಭೆ ಉಪ ಚುನಾವಣೆ: ಅಪ್ನಾದಳಕ್ಕೆ 2, ಬಿಜೆಡಿಗೆ 1 ಸ್ಥಾನ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಜತೆಗೆ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಫಲಿತಾಂಶವೂ ಪ್ರಕಟವಾಗಿದೆ. ಬಿಜೆಡಿಗೆ 1, ಬಿಜೆಪಿ ಮಿತ್ರಪಕ್ಷ ಅಪ್ನಾದಳಕ್ಕೆ 2 ಸ್ಥಾನ, ಮಣಿಪುರದ ವಿಪಕ್ಷ ಯುಡಿಪಿಗೆ 1 ಸ್ಥಾನ ಬಂದಿದೆ. ಜತೆಗೆ ಪಂಜಾಬ್‌ ಲೋಕಸಭೆ ಉಪಚುನಾವಣೆಯಲ್ಲಿ ಆಪ್‌ ಜಯಿಸಿದೆ.

ಇದನ್ನೂ ಓದಿ: ಅತೀಕ್ ಅಹ್ಮದ್ ಹತ್ಯೆ ಕೇಸ್‌: ತನಿಖೆಗೆ 3 ಸದಸ್ಯರ ನ್ಯಾಯಾಂಗ ಆಯೋಗ ರಚನೆಗೆ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಒಡಿಶಾದ ಝರ್ಸುಗುಡಾ ವಿಧಾನಾಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಡಿ ಅಭ್ಯರ್ಥಿ ದೀಪಾಲಿ ದಾಸ್‌ ಅವರು ಬಿಜೆಪಿ ಅಭ್ಯರ್ಥಿ ಟಂಕಾಧರ ತ್ರಿಪಾಠಿ ಅವರನ್ನು 48,721 ಮತದಿಂದ ಮಣಿಸಿದ್ದಾರೆ. ದೀಪಾಲಿ ಅವರು ಇತ್ತೀಚೆಗೆ ಹತ್ಯೆಯಾದ ಸಚಿವ ನಬಕಿಶೋರ್‌ ದಾಸ್‌ ಅವರ ಪತ್ನಿ. ಜಲಂಧರ್‌ ಲೋಕಸಭೆ ಉಪಚುನಾವಣೆಯಲ್ಲಿ ಪಂಜಾಬ್‌ನ ಕಾಂಗ್ರೆಸ್‌ನ ಕರ್ಮಜಿತ್‌ ಕೌರ್‌ ಅವರನ್ನು ರಾಜ್ಯದ ಆಡಳಿತಾರೂಢ ಆಪ್‌ ಅಭ್ಯರ್ಥಿ ಸುಶೀಲ್‌ ರಿಂಕು ಸುಮಾರು 48 ಸಾವಿರ ಅಂತರದಿಂದ ಮಣಿಸಿದ್ದಾರೆ. 

ಉತ್ತರ ಪ್ರದೇಶದ ಮಾಜಿ ಸಚಿವ ಆಜಂ ಖಾನ್‌ ಅವರ ಭದ್ರಕೋಟೆ ಸುರ್‌ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಿತ್ರಪಕ್ಷ ಅಪ್ನಾದಳ ಅಭ್ಯರ್ಥಿ ಶಫೀಕ್‌ ಅಹ್ಮದ್‌ ಅನ್ಸಾರಿ ಅವರು ಎಸ್‌ಪಿ ಅಭ್ಯರ್ಥಿಯನ್ನು 8 ಸಾವಿರ ಮತದಿಂದ ಮಣಿಸಿದ್ದಾರೆ. ಛಾನ್‌ಬೇ (ಎಸ್ಸಿ) ವಿಧಾನಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಕೃತಿ ಕೋಲ್‌ ಅವರನ್ನು ಅಪ್ನಾದಳ ಅಭ್ಯರ್ಥಿ ರಿಂಕಿ ಕೋಲ್‌ ಸೋಲಿಸಿದ್ದಾರೆ.

ಇದನ್ನೂ ಓದಿ: ಯೋಗಿ ಆಡಳಿತದಲ್ಲಿ 10,900 ಎನ್‌ಕೌಂಟರ್‌: 183 ಕ್ರಿಮಿನಲ್‌ಗಳ ಹತ್ಯೆ, 23,300 ಬಂಧನ

ಮೇಘಾಲಯದ ಸೋಹಿಯಾಂಗ್‌ ವಿಧಾನಸಭೆ ಕ್ಷೇತ್ರದಲ್ಲಿ ವಿಪಕ್ಷ ಯುಡಿಪಿಯ ಶಿಂಶಾರ್‌ ಕೂಪರ್‌ ರಾಯ್‌ ಅವರು ಆಡಳಿತಾರೂಢ ಎನ್‌ಪಿಪಿ ಅಭ್ಯರ್ಥಿಯನ್ನು 3400 ಮತದಿಂದ ಮಣಿಸಿದ್ದಾರೆ.

ಇದನ್ನೂ ಓದಿ: ಗ್ಯಾಂಗ್‌ಸ್ಟರ್‌ನ ಮತ್ತಷ್ಟು ರಹಸ್ಯ ಬಯಲು: ಅತೀಕ್‌ ಕಚೇರಿಯಲ್ಲಿ ರಕ್ತಸಿಕ್ತ ಚಾಕು, ರಕ್ತದ ಕಲೆಯ ದುಪ್ಪಟ್ಟಾ ಪತ್ತೆ

Follow Us:
Download App:
  • android
  • ios