Asianet Suvarna News Asianet Suvarna News

ಗುಜರಾತ್ ಹಿಮಾಚಲದಲ್ಲಿ ಮತ್ತೆ ಅರಳಲಿದೆ ಕಮಲ: ಚುನಾವಣಾ ಪೂರ್ವ ಸಮೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಅವವರ ತವರು ರಾಜ್ಯವಾದ ಗುಜರಾತ್‌ ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ರಿಪಬ್ಲಿಕ್‌ ಟೀವಿ ಚುನಾವಣಾ ಪೂರ್ವ ಸಮೀಕ್ಷೆ (Republic TV pre-election survey) ಹೇಳಿದೆ.

BJP win in Gujarat, Himachal pradesh Assembly election;  Republic TV Pre-Election Survey akb
Author
First Published Nov 10, 2022, 9:21 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವವರ ತವರು ರಾಜ್ಯವಾದ ಗುಜರಾತ್‌ ಮತ್ತು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ರಿಪಬ್ಲಿಕ್‌ ಟೀವಿ ಚುನಾವಣಾ ಪೂರ್ವ ಸಮೀಕ್ಷೆ (Republic TV pre-election survey) ಹೇಳಿದೆ. 182 ಸ್ಥಾನಗಳಿರುವ ಗುಜರಾತ್‌ ವಿಧಾನಸಭೆಯಲ್ಲಿ (Gujarat Assembly) ಬಹುಮತಕ್ಕೆ 92 ಸ್ಥಾನಗಳು ಬೇಕು. ಇಲ್ಲಿ ಬಿಜೆಪಿ 127ರಿಂದ 140 ಸ್ಥಾನಗ ಗೆಲ್ಲಲಿದೆ. ಕಾಂಗ್ರೆಸ್‌ 24 ರಿಂದ 36, ಆಮ್‌ ಆದ್ಮಿ ಪಕ್ಷ 9ರಿಂದ 21 ಸ್ಥಾನಗಳಲ್ಲಿ ಜಯಗಳಿಸಲಿದೆ. ಇತರರು ಕನಿಷ್ಠ 2 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಮತಗಳ ಶೇಕಡಾವಾರು ಗಮನಿಸಿದಾಗ ಬಿಜೆಪಿ (BJP) ಶೇ.46.2, ಕಾಂಗ್ರೆಸ್‌ ಶೇ.28.4, ಆಪ್‌ ಶೇ.20.6 ಮತ್ತು ಇತರರು ಶೇ.4.8ರಷ್ಟು ಮತ ಪಡೆದುಕೊಳ್ಳಲಿವೆ.

ಇನ್ನು 68 ಸ್ಥಾನಗಳಿರುವ ಹಿಮಾಚಲ ಪ್ರದೇಶದಲ್ಲಿ (Himachal Pradesh) ಬಹುಮತಕ್ಕೆ 35 ಸ್ಥಾನ ಬೇಕು. ಇಲ್ಲಿ ಬಿಜೆಪಿ 37ರಿಂದ 45 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಲಿದೆ. ಕಾಂಗ್ರೆಸ್‌ 22ರಿಂದ 28 ಸ್ಥಾನಗಳಲ್ಲಿ, ಆಪ್‌ 1 ಮತ್ತು ಇತರರು 1ರಿಂದ 4 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ.

ಗುಜರಾತ್‌

ಬಿಜೆಪಿ 127-140

ಕಾಂಗ್ರೆಸ್‌ 24-36

ಆಪ್‌ 9-21

ಇತರರು 0-2

ಹಿಮಾಚಲ ಪ್ರದೇಶ

ಬಿಜೆಪಿ 37-45

ಕಾಂಗ್ರೆಸ್‌ 22-28

ಆಪ್‌ 0-1

ಇತರರು 1-4

ಹಿಮಾಚಲಕ್ಕೆ ಡಬಲ್‌ ಎಂಜಿನ್‌ ಸರ್ಕಾರ ಬೇಕು ಪ್ರಚಾರ ಅಖಾಡದಲ್ಲಿ ಪ್ರಧಾನಿ 

ಚಂಬಿ (ಹಿಮಾಚಲ ಪ್ರದೇಶ): ಕಾಂಗ್ರೆಸ್‌ ಪಕ್ಷ ಅಭಿವೃದ್ಧಿಯ ವಿರೋಧಿ. ಹಿಮಾಚಲ ಪ್ರದೇಶಕ್ಕೆ ಸ್ಥಿರವಾದ ಒಂದು ಸರ್ಕಾರ ಹಾಗೂ ಡಬಲ್‌ ಎಂಜಿನ್‌ ಸರ್ಕಾರದ (double engine government) ಅವಶ್ಯಕತೆ ಇದೆ. ಹಾಗಾಗಿ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಹಿಮಾಚಲ ಪ್ರದೇಶದ ಕಂಗಾರ ಜಿಲ್ಲೆಯಲ್ಲಿ ನಡೆದ ರಾರ‍ಯಲಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಅಸ್ಥಿರ ಮತ್ತು ಭ್ರಷ್ಟಾಚಾರದಿಂದ ಕೂಡಿದೆ. ಅಲ್ಲದೇ ಕಾಂಗ್ರೆಸ್‌ ಅಭಿವೃದ್ಧಿಯ ವಿರೋಧಿಯಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಜನರಿಗೆ ಮೋಸ ಮಾಡಿದೆ. ದೇಶದ ಸೈನಿಕರನ್ನು ಅವಮಾನಿಸುವ ಕೆಲಸ ಮಾಡಿದೆ. ಭಾರತೀಯ ಸೇನೆ (Indian Army)ನಡೆಸಿದ ಸರ್ಜಿಕಲ್‌ ಸ್ಟ್ರೈಕ್ ಅನ್ನು ಪ್ರಶ್ನೆ ಮಾಡಿದೆ. ಆದರೆ ಬಿಜೆಪಿಗೆ ದೇಶ ಹಾಗೂ ಸೈನಿಕರ ಭದ್ರತೆ ಮುಖ್ಯವಾಗಿದೆ. ಅಲ್ಲದೇ ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಜನ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ರಾಜ್ಯದ ಅಭಿವೃದ್ಧಿಗಾಗಿ ಡಬಲ್‌ ಎಂಜಿನ್‌ ಸರ್ಕಾರದ ಅವಶ್ಯಕತೆ ಇದೆ’ ಎಂದರು.

Gujarat Elections 2022: ಯಾವ್ಯಾವ ವಯಸ್ಸಿನ ಮತದಾರರ ಒಲವು ಯಾವ ಪಕ್ಷದತ್ತ ಇದೆ ನೋಡಿ..

Gujarat Election 2022 Asianet Survey: ಮತ್ತೆ ಅರಳಲಿದೆ ಕಮಲ, ಕುಗ್ಗಿದೆ ಕೈ ಬಲ, ಆಪ್‌ಗಿಲ್ಲ ಬೆಂಬಲ

Follow Us:
Download App:
  • android
  • ios