Asianet Suvarna News Asianet Suvarna News

Goa Election Politics: ತಾವು ಮಾತ್ರ ಹಿಂದೂಗಳು ಎಂದು ಬಿಜೆಪಿ ಭಾವಿಸಿದೆ: ಮಮತಾ ಬ್ಯಾನರ್ಜಿ

  • ಗೋವಾದಲ್ಲಿ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ
  • ಬಿಜೆಪಿ ಕಾಂಗ್ರೆಸ್‌ ವಿರುದ್ಧ ಮಮತಾ ವಾಗ್ದಾಳಿ
  • ಬಿಜೆಪಿಗೆ ಪರ್ಯಾಯವಾಗಿ ನಮ್ಮೊಂದಿಗೆ ಕೈ ಜೋಡಿಸಿ ಎಂದ ದೀದಿ
BJP Thinks They Are the Only Hindus Mamata Banerjee slams bjp akb
Author
Bangalore, First Published Dec 14, 2021, 2:39 PM IST
  • Facebook
  • Twitter
  • Whatsapp

ಪಣಜಿ(ಡಿ.14):  ತಾವು ಮಾತ್ರ ಹಿಂದೂಗಳು ಎಂದು ಬಿಜೆಪಿ ಭಾವಿಸಿದೆ ಎಂದು ಪಶ್ಚಿಮ ಬಂಗಾಳ (west bengal) ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್‌ (TMC) ನಾಯಕಿ ಮಮತಾ ಬ್ಯಾನರ್ಜಿ( Mamata Banerjee) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಹಿಂದೂವಾಗಿ ಹುಟ್ಟಿದ್ದರೂ ನನ್ನ ತಂದೆ ತಾಯಿ ನನಗೆ ಬೇರೆ ಧರ್ಮದವರನ್ನು ದ್ವೇಷಿಸುವಂತೆ ಹೇಳಿಲ್ಲ. ಆದರೆ ಬಿಜೆಪಿಯವರು ತಾವು ಮಾತ್ರ ಹಿಂದೂಗಳು ಹಿಂದೂ ಧರ್ಮದ ಪ್ರತಿಪಾದಕರು ಎಂದು ಭಾವಿಸಿದ್ದಾರೆ. ಅವರ ಪ್ರಕಾರ ಬಿಜೆಪಿಯಿಂದ ಹೊರಗಿರುವವರು ಆಕಾಶದಿಂದ ನೇರವಾಗಿ ರಸ್ತೆಗೆ ಬಿದ್ದವರು ಎಂದು ತಿಳಿದುಕೊಂಡಿದ್ದಾರೆ ಎಂದು ಮಮತಾ ಬಿಜೆಪಿ ಅಜೆಂಡಾವನ್ನು ಟೀಕಿಸಿದರು.

ದಕ್ಷಿಣ ಗೋವಾ (south goa)ದಲ್ಲಿ ನಡೆದ  ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಬ್ಯಾನರ್ಜಿ, ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೂ  ಬಾಂಗ್ಲಾದೇಶ(Bangladesh) ಮತ್ತು ರಾಜಸ್ಥಾನ(Rajasthan)ದ ಹಿಂಸಾಚಾರದ ನಕಲಿ ವೀಡಿಯೊಗಳನ್ನು ಪಶ್ಚಿಮ ಬಂಗಾಳದಲ್ಲಿ ಆದ ಹಿಂಸಾಚಾರವೆಂದು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ನಂತರ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸುತ್ತಾರೆ ಎಂದು ಮಮತಾ ದೂರಿದರು.

PM candidate from TMC: ಮಮತಾ ಮುಂದಿನ ಪ್ರಧಾನಿ ಅಭ್ಯರ್ಥಿ: ಟಿಎಂಸಿ ಮುಖವಾಣಿ
 
ಶ್ರೇಷ್ಠ ಸುಂದರ ಭಾರತದ ಬಗ್ಗೆ ವ್ಯಾಖ್ಯಾನಿಸಿದ ಮಮತಾ ಬ್ಯಾನರ್ಜಿ, ತ್ಯಾಗ ಎಂದರೆ ಹಿಂದೂ ಧರ್ಮ (Hindu religion), ನಂಬಿಕೆ ಎಂದರೆ ಮುಸ್ಲಿಂ ಧರ್ಮ (Muslim religion), ಪ್ರೀತಿ ಎಂದರೆ ಇಸೈ ಹಾಗೂ ಸಿಖ್‌ ಸಮುದಾಯವೆಂದರೂ ತ್ಯಾಗಕ್ಕೆ ಸಂಬಂಧಿಸಿದು ಇದೆಲ್ಲವೂ ಸೇರಿ ಸುಂದರ ಭಾರತವಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹಾಗೆಯೇ ತಾನು ಹಿಂದೂವಾಗಿ ಹುಟ್ಟಿದ್ದರೂ ತನ್ನ ಹೆತ್ತವರು ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಅಥವಾ ಸಿಖ್ಖರನ್ನು ಇಷ್ಟಪಡದಿರಲು ಕಲಿಸಲಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್‌ ಪಕ್ಷ (Congress party)ದ ವಿರುದ್ಧವೂ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಕೆಲವು ಪಕ್ಷಗಳು ಜಮೀನ್ದಾರರಂತೆ ವರ್ತಿಸುತ್ತವೆ ಎಂದರು. ಬಿಜೆಪಿಯನ್ನು ಆಡಳಿತದಿಂದ ಇಳಿಸುವ ವಿಚಾರವಾಗಿ ಅವರು ಏನೂ ಮಾಡುವುದಿಲ್ಲ. ಬೇರೆಯವರನ್ನು ಮಾಡಲು ಬಿಡುವುದು ಇಲ್ಲ ಎಂದು ಆರೋಪಿಸಿದರು.

Swara Bhasker to Join Politics ? TMC ಸೇರಲು ನಟಿಗೆ ಅಹ್ವಾನ ಕೊಟ್ಟ ದೀದಿ

ಗೋವಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಕಾಂಗ್ರೆಸ್ ನಿಜವಾಗಿಯೂ ಬಯಸಿದರೆ, ಟಿಎಂಸಿ ನೇತೃತ್ವದ ಮೈತ್ರಿಕೂಟಕ್ಕೆ ಸೇರುವ ಮೂಲಕ ಮತಗಳು ವಿಭಜನೆಯಾಗದಂತೆ ತಡೆಯಬಹುದು. ಇದು ಸ್ವಾಗತಾರ್ಹ ಎಂದು ಅವರು ಹೇಳಿದರು. ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಕೆಲಸ ಮಾಡಲು ಯೋಚಿಸಿದರೆ, ನಮ್ಮ ಅಭ್ಯಂತರವಿಲ್ಲ. ನಾವು ಮಹಾರಾಷ್ಟ್ರ ವಾದಿ ಗೋಮಾಂತಕ್ ಪಾರ್ಟಿ (MGP) ಜೊತೆಗೆ ಗೋವಾದಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ. ಇದು ಪರ್ಯಾಯವಾಗಿದೆ. ನೀವು ಇದಕ್ಕೆ ಸೇರಲು ಬಯಸುವುದಾದರೆ, ಅದನ್ನು ಮಾಡಿ ಎಂದು ಅವರು ಮಮತಾ ಹೇಳಿದ್ದಾರೆ ಎಂದು ಮಾಧ್ಯಮವೊಂದು ಉಲ್ಲೇಖಿಸಿದೆ. 

ಗೋವಾದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಅಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ  ಟಿಎಂಸಿ ಅಂದ್ರೆ  ಟೆಂಪಲ್‌, ಮೋಸ್ಕ್‌ ಚರ್ಚ್‌ ಎಂದರ್ಥ. ನಾವು ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇವೆ. ನಿಮಗೆಲ್ಲಾ ಗೆಲ್ಲುವ ವಿಶ್ವಾಸ ಇದೆಯಾ? ನಾವು ಬಿಜೆಪಿಗೆ ಪರ್ಯಾಯ. ನಮ್ಮೊಂದಿಗೆ ಕೈ ಜೋಡಿಸಿ. ಹೋರಾಟ ಮಾಡಿ. ಯಾವತ್ತೂ ಹಿಂಜರಿಯಬೇಡಿ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಈಗ ಗೋವಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಗೋವಾ, ಪಂಜಾಬ್‌, ಹರಿಯಾಣ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ನಾಯಕರು ಈ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. 

Follow Us:
Download App:
  • android
  • ios