* ಕಾಂಗ್ರೆಸ್‌ಗೆ ಕಂಟಕವಾಯ್ತು ಮತ್ತೊಂದು ವಿಡಿಯೋ* ಕೊರೋನಾ ಹಾವಳಿ ಮಧ್ಯೆ ಹೊಸ ವಿವಾದ ಹುಟ್ಟುಹಾಕಲು ಹೋಗಿದ್ದ ನಾಯಕನ ವಿಡಿಯೋ ಲೀಕ್* ಬೆಂಕಿ ಹಚ್ಚಿ ಎಂದಿದ್ದೇಕೆ ಮಾಜಿ ಸಿಎಂ?

ಭೋಪಾಲ್(ಮೇ.22): ದೇಶದಲ್ಲಿ ಸದ್ಯ ಕಾಂಗ್ರೆಸ್‌ನ ಟೂಲ್‌ಕಿಟ್‌ ವಿವಾದ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಮಧ್ಯಪ್ರದೇಶದ ಮಾಜಿ ಸಿಎಂ ಕಮಲನಾಥ್‌ರವರ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. ಇದರಲ್ಲಿ ಮಾಜಿ ಸಿಎಂ ಕಮಲನಾಥ್ ಕಾಂಗ್ರೆಸ್‌ ಕಾರ್ಯಕರ್ತರ ಬಳಿ ರೈತರ ವಿಚಾರವನ್ನಿಟ್ಟುಕೊಂಡು 'ಬೆಂಕಿ ಹಚ್ಚಿ' ಎಂದು ಹೇಳಿರುವ ಮಾತುಗಳಿವೆ.

ಟೂಲ್ ಕಿಟ್ ಪ್ರಕರಣ; ಸಂಬೀತ್ ವಿರುದ್ಧ ಕಾಂಗ್ರೆಸ್ ದೂರು, FIR

ಇಪ್ಪತ್ತು ಸೆಕೆಂಡ್‌ಗಳ ಈ ವಿಡಿಯೋವನ್ನು ಮಧ್ಯಪ್ರದೇಶ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕಮಲನಾಥ್ ವರ್ಚುವಲ್ ಮೀಟಿಂಗ್ ಒಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಬಳಿ ರೈತರಿಗೆ ನ್ಯಾಯ ಒದಗಿಸಲು ಹೋರಾಡುವಂತೆ ಹೇಳಿದ್ದಾರೆ. ಅಲ್ಲದೇ ಇದು ಬೆಂಕಿ ಹಚ್ಚಲು ಸೂಕ್ತ ಸಮಯ ಎಂದೂ ಉಲ್ಲೇಖಿಸಿದ್ದಾರೆ.

Scroll to load tweet…

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಕಮಲನಾಥ್ 'ನೀವು ಬೆಂಕಿ ಹಚ್ಚಬೇಕು. ನಾನು ಹೇಳಿದ್ದೆ ಇದು ಬೆಂಕಿ ಹಚ್ಚುವ ಸಮಯ. ರೈತರಿಗೆ ನ್ಯಾಯ ಒದಗಿಸಬೇಕು ಮತ್ತೊಂದೆಡೆ ಬೆಂಕಿ ಹಚ್ಚಬೇಕು' ಎಂದಿದ್ದಾರೆ. ಕಮಲನಾಥ್‌ರವರ ಈ ವಿಡಿಯೋ ಬಗ್ಗೆ ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ ಕಮಲನಾಥ್‌ರವರು ರೈತರ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರದ ವಿಚಾರವಾಗಿಯೂ ಅವರನ್ನು ಗೊಂದಕ್ಕೀಡು ಮಾಡಿ, ಮತ್ತಷ್ಟು ಎತ್ತಿ ಕಟ್ಟುವ ಯತ್ನ ನಡೆಸುತ್ತಿದ್ದಾರೆ ಎಂದಿದ್ದಾರೆ.

'ಕಾಂಗ್ರೆಸ್‌ ಟೂಲ್‌ಕಿಟ್‌ರೂವಾರಿ ಎಚ್ಕೆ: ಸಚಿವ ಪಾಟೀಲ

ದೆಹಲಿ ಗಡಿಯಲ್ಲಿ ಕಳೆದ ಆರು ತಿಂಗಳಿನಿಂದ ರೈತ ಚಳುವಳಿ ನಡೆಯುತ್ತಿದೆ. ಇದೊಂದು ರಾಜಕೀಯ ಪ್ರೇರಿತ ಆಂದೋಲನ ಎಂಬುವುಸದ್ದದು ಮಾಡುತ್ರತಿದೆ. ಲ್ಲಿ ಯಾವುದೇ ಅನುಮಾಣವಿಲ್ಲ. ಕೇಂದ್ರದ ಹೆಸರು ಕೆಡಿಸಲು ಕಾಂಗ್ರೆಸ್‌ ಈ ಆಂದೋಲನಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದೆ. ಈ ಆಂಂಂದೋಲನದಲ್ಲಿ ದೀಪ್‌ ಸಿಧು ಸೇರಿ ಅನೇಕ ಖಲಿಸ್ತಾನಿ ನಾಯಕರೂ ಸಕ್ರಿಯರಾಗಿದ್ದಾರೆ ಎಂಬುವುದೂ ತಿಳಿದು ಬಂದಿದೆ. 

Scroll to load tweet…

ಇನ್ನು ಕಮಲನಾಥ್‌ರವರ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಿಂಸಾಚಾರಕ್ಕೆ ಕಾರಣವಾಗಬಲ್ಲ ವಿಡಿಯೋಗಳನ್ನು ಟಟ್ವಿಟರ್‌ ಇತ್ತೀಚೆಗೆ ತೆಗೆದು ಹಾಕುತ್ತಿದೆ. ಇಲ್ಲವೇ ನಿಯಮಗಳ ಉಲ್ಲಂಘನೆ ಎಂದು ಅಂತಹ ವಿಷಯಗಳನ್ನು ಶೇರ್ ಮಾಡಿದ ಖಾತೆಗಳನ್ನು ಸ್ಥಗಿತಗೊಳಿಸುತ್ತಿದೆ. ಹೀಗಿರುವಾಘ ಕಮಲನಾಥ್‌ರವರ ವಿಡಿಯೋ ಬಗ್ಗೆ ಯಾಕೆ ಯಾಔಉದೇ ಕ್ರಮ ಕೈಗೊಂಡಿಲ್ಲ ಎಂದೂ ಕರ್ನಾಟಕ ಬಿಜೆಪಿ ನಾಯಕ ಸಿ. ಟಿ. ರವಿ ಸೇರಿದಂತೆ ಅನೇಕ ಮಂದಿ ಪ್ರಶ್ನಿಸಿದ್ದಾರೆ.