ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಶುಕ್ರವಾರ ಆರಂಭವಾದ 2 ದಿನಗಳ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಲೋಕಸಮರವನ್ನು ಗೆಲ್ಲುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಗಳು ಕುರಿತು ಸಭೆಯಲ್ಲಿ ಚರ್ಚೆ ಆರಂಭವಾಗಿದ್ದು, ಶನಿವಾರವೂ ಮುಂದುವರಿಯಲಿದೆ.
ನವದೆಹಲಿ (ಡಿಸೆಂಬರ್ 23, 2023): 2024ರ ಲೋಕಸಭೆ ಚುನಾವಣೆಗೆ ಯುದ್ಧೋಪಾದಿಯಲ್ಲಿ ಬಿಜೆಪಿ ಪದಾಧಿಕಾರಿಗಳು ಸಜ್ಜಾಗಬೇಕು. ಕೇಂದ್ರ ಸರ್ಕಾರದ ಸಾಧನೆಗಳು ಜನರಿಗೆ ತಲುಪುವಂತೆ ಮಾಡಿ ಪ್ರಚಾರ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ಸಿದ್ಧತೆಗಾಗಿ ಶುಕ್ರವಾರ ಆರಂಭವಾದ 2 ದಿನಗಳ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಲೋಕಸಮರವನ್ನು ಗೆಲ್ಲುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗಗಳು ಕುರಿತು ಸಭೆಯಲ್ಲಿ ಚರ್ಚೆ ಆರಂಭವಾಗಿದ್ದು, ಶನಿವಾರವೂ ಮುಂದುವರಿಯಲಿದೆ.
ಇದನ್ನು ಓದಿ: ಭಾರತೀಯ ಸಮಾಜದಲ್ಲಿ ಧಾರ್ಮಿಕ ತಾರತಮ್ಯವಿಲ್ಲ: ಪ್ರಧಾನಿ ಮೋದಿ
ಮಸೂದೆ ಚರ್ಚೆಗೆ ವಿಪಕ್ಷ ಗೈರು: ಅಮಿತ್ ಶಾ ಕಿಡಿ
146 ಸಂಸದರ ಅಮಾನತು ಖಂಡಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ ಇಂಡಿಯಾ ಕೂಟದ ವಿರುದ್ಧ ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದು, ‘ಈಗ ಪ್ರತಿಭಟನೆ ಮಾಡುತ್ತಿರುವ ವಿಪಕ್ಷ ಸಂಸದರು 3 ಮಹತ್ವದ ಅಪರಾಧ ಮಸೂದೆ ಚರ್ಚೆ ಸಂಸತ್ತಿನಲ್ಲಿ ನಡೆವಾಗ ಏಕೆ ಬಹಿಷ್ಕರಿಸಿ ಹೊರಗೆ ಹೋಗಿದ್ದರು? ಎಂದು ಪ್ರಶ್ನಿಸಿದ್ದಾರೆ. ಈಗಿನ ಪ್ರತಿಭಟನೆಗೆ ಜನ ಮರುಳಾಗಲ್ಲ ಎಂದಿದ್ದಾರೆ.
2024 ರ ಅಂತ್ಯಕ್ಕೆ ಮೂರೂ ಅಪರಾಧ ಕಾಯ್ದೆಗಳು ಜಾರಿ: ಅಮಿತ್ ಶಾ
ಚಂಡೀಗಢ: ಸಂಸತ್ತು ಒಪ್ಪಿಗೆ ನೀಡಿರುವ 3 ಅಪರಾಧ ಮಸೂದೆಗಳು ಮುಂದಿನ ವರ್ಷ ಡಿಸೆಂಬರ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಜಾರಿಯಾಗಲಿದೆ. ಆ ವೇಳೆಗೆ ಇವುಗಳ ಜಾರಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ. ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಎಲ್ಲಾ ರಾಜ್ಯಗಳಲ್ಲೂ ಈ ಕಾನೂನುಗಳನ್ನು ಜಾರಿ ಮಾಡಲು ಬೇಕಾದ ಮೂಲಸೌಕರ್ಯಗಳು, ಸಾಫ್ಟ್‌ವೇರ್‌ಗಳು ಮತ್ತು ಕಂಪ್ಯೂಟರೈಸ್ಡ್ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಬ್ರಿಟಿಷ್ ಕಾಲದ ಕಾನೂನುಗಳನ್ನು ಕೈಬಿಟ್ಟು ಹೊಸದಾಗಿ ರೂಪಿಸಲಾದ ಈ ಮಸೂದೆಗಳಿಗೆ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತು ಒಪ್ಪಿಗೆ ಸೂಚಿಸಿತ್ತು.
ಇದನ್ನೂ ಓದಿ: ಸಸ್ಪೆಂಡ್‌ಗೆ ವಿಪಕ್ಷ ಸಂಸದರೇ ಕೇಳಿದ್ದರು; ಅಮಾನತು ಮಾಡುವ ಇಚ್ಛೆ ನಮಗಿರಲಿಲ್ಲ: ಪ್ರಲ್ಹಾದ್ ಜೋಶಿ
