Asianet Suvarna News

ದೇಶಕ್ಕೆ ಆದ್ಯತೆ ನೀಡೋರಿಗೆ ಸ್ವಾಗತ: ಪೈಲಟ್‌ಗಾಗಿ ಬಾಗಿಲು ತೆರೆದ ಬಿಜೆಪಿ!

* ಮತ್ತೆ ರಾಜಕೀಯ ವಲಯದಲ್ಲಿ ಪೈಲಟ್ ಅಸಮಾಧಾನದ ಸುದ್ದಿ

* ಕಾಂಗ್ರೆಸ್‌ಗೆ ಮತ್ತೊಂದು ಶಾಕ್ ಕೊಡ್ತಾರಾ ಸಚಚಿನ್ ಪೈಲಟ್'

* ದೇಶಕ್ಕೆ ಮೊದಲ ಆದ್ಯತೆ ನೀಡುವ ಎಲ್ಲಾ ನಾಯಕರಿಗೂ ಪಕ್ಷದ ಬಾಗಿಲು ತೆರೆದಿದೆ ಎಂದ ಬಿಜೆಪಿ

BJP open for all those who prioritise IndiaBJP MP Rajyavardhan Singh Rathore  on Pilot pod
Author
Bangalore, First Published Jun 13, 2021, 5:21 PM IST
  • Facebook
  • Twitter
  • Whatsapp

ಜೈಪುರ(ಜೂ.13): ರಾಜಸ್ಥಾನದಲ್ಲಿ ತಮ್ಮದೇ ಪಕ್ಷದ ಸರ್ಕಾರ ಹಾಗೂ ಸಿಎಂ ಅಶೋಕ್ ಗೆಹ್ಲೋಟ್ ನಡೆಯಿಂದ ಬೇಸತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್‌ಗಾಗಿ ಬಿಜೆಪಿ ತನ್ನ ಪಕ್ಷದ ಬಾಗಿಲು ತೆರೆದಿದೆ. ಪರೋಕ್ಷವಾಗಿ ಈ ಬಗ್ಗೆ ಸಂಕೇತ ನಿಡಿರುವ ಬಿಜೆಪಿ ನಾಯಕ, ದೇಶಕ್ಕೆ ಮೊದಲ ಆದ್ಯತೆ ನೀಡುವ ಎಲ್ಲಾ ನಾಯಕರಿಗೂ ಪಕ್ಷದ ಬಾಗಿಲು ತೆರೆದಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ಗೆ ರೆಡ್‌ ಅಲರ್ಟ್: ದೆಹಲಿಗೆ ಹಾರಿದ ಪೈಲಟ್!

ರಾಜಸ್ಥಾನ ಸಂಸದ ರಾಜ್ಯವರ್ಧನ್ ಸಿಂಗ್ ರಾಠೋಡ್ ಈ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್‌ ಪಕ್ಷದಲ್ಲಿ ಯಾವುದೇ ದೃಷ್ಟಿಕೋನವಿಲ್ಲ. ಹೀಗಾಗಿ ನಾಯಕರು ಆ ಪಕ್ಷ ಬಿಟ್ಟು ಉತ್ತಮ ದೃಷ್ಟಿಕೋನವುಳ್ಳ ಮತ್ತೊಂದು ಪಕ್ಷಕ್ಕೆ ಹೋಗಬೇಕು ಎಂದಿದ್ದಾರೆ. ಇನ್ನು ಸಚಿನ್ ಪೈಲಟ್ ಬಿಜೆಪಿಗೆ ಸೇರ್ಪಡೆಯಾಗುವ ವಿಚಾರವಾಗಿ ಉತ್ತರಿಸಿದ ರಾಠೋಡ್ ದೇಶಕ್ಕೆ ಪ್ರಥಮ ಆದ್ಯತೆ ನೀಡುವ ಎಲ್ಲಾ ನಾಯಕರಿಗೆ ನಮ್ಮ ಪಕ್ಷದ ಬಾಗಿಲು ತೆರೆದಿದೆ ಎಂದಿದ್ದಾರೆ. 

ಲಾಕ್‌ಡೌನ್‌ ಎಫೆಕ್ಟ್: ನೌಕರಿಗೆ ಗುಡ್‌ ಬೈ ಹೇಳಿ ಕೃಷಿಗೆ ಜೈ ಎಂದ ಯುವಕರು..!

ಕಾಂಗ್ರೆಸ್‌ ರಾಷ್ಟ್ರೀಯ ನೇತೃತ್ವವನ್ನು ಬಲಹೀನ ಎಂದ ನಾಯಕ

ಕಾಂಗಗ್ರೆಸ್‌ ಪಕ್ಷ ಒಡೆದು ಹೋಗುತ್ತಿರುವುದಕ್ಕೆ ರಾಷ್ಟ್ರೀಯ ನೇತೃತ್ವವೇ ಕಾರಣ ಎಂದಿರುವ ರಾಠೋಡ್ 'ಕೇಂದ್ರದಲ್ಲಿ ನೇತೃತ್ವ ಬಲ ಕಳೆದುಕೊಂಡರೆ, ಪ್ರಾದೇಶಿಕ ನಾಯಕರು ತಮ್ಮದೇ ಇಚ್ಛೆಯಂತೆ ನಡೆಸುಕೊಳ್ಳುತ್ತಾರೆ. ದೃಷ್ಟಿಕೊನವಿಲ್ಲದ ಪಕ್ಷ ಬಿಟ್ಟು ನಾಯಕರು ಉತ್ತಮ ವಿಷನ್ ಇರುವ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎಂದಿದ್ದಾರೆ. '

Follow Us:
Download App:
  • android
  • ios