ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು, ವಿವಾದಿತ ಪೋಸ್ಟ್ ಅನ್ನು ಮಾಡಿದ್ದು, ಗುಂಪು ದಾಳಿಯ ವೇಳೆ ಯಾವ ಪೊಲೀಸ್ ಕೂಡ ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಆದ್ದರಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಬಾಣ, ಬಾಟಲಿಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ನವದೆಹಲಿ (ಏ. 24): ವಿವಾದಿತ (controversy) ಹೇಳಿಕೆ ನೀಡುವಲ್ಲಿ ಹೆಸರುವಾಸಿಯಾಗಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ (BJP MP Sakshi Maharaj) ಅವರು, ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ದೊಡ್ಡ ವಿವಾದ ದೃಷ್ಟಿಸಿದೆ. ಗುಂಪು ದಾಳಿಯ (Mob Attack) ಸಂದರ್ಭದಲ್ಲಿ ಯಾವ ಪೊಲೀಸರು ಕೂಡ ನಿಮ್ಮ ಸಹಾಯಕ್ಕೆ ಬರೋದಿಲ್ಲ. ಆದ್ದರಿಂದ ನಿಮ್ಮ ರಕ್ಷಣೆಗಾಗಿ ಬಾಣ (Arrow) ಹಾಗೂ ಬಾಟಲಿಗಳನ್ನು (Bottles) ಮನೆಯಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಗುಂಪು ದಾಳಿಯಂಥ ಪರಿಸ್ಥಿತಿಯಲ್ಲಿ ಅವರನ್ನು ರಕ್ಷಿಸಲು ಪೊಲೀಸರು ಬರುವುದಿಲ್ಲ, ಆದ್ದರಿಂದ ಅವರೇ ಸಿದ್ಧರಾಗಿರಬೇಕು ಎಂದು ಹೇಳಿದರು. ಆಗಾಗ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುವ ಉನ್ನಾವೋ (Unnao) ಸಂಸದ ಸಾಕ್ಷಿ ಮಹಾರಾಜ್ ಫೇಸ್‌ಬುಕ್‌ನಲ್ಲಿ ಇದನ್ನು ಬರೆದುಕೊಂಡಿದ್ದಾರೆ, “ನಿಮ್ಮ ಬೀದಿ, ನೆರೆಹೊರೆ ಅಥವಾ ಮನೆಗೆ ಗುಂಪು ದಾಳಿ ಮಾಡಲು ಇದ್ದಕ್ಕಿದ್ದಂತೆ ಬಂದರೆ, ಅದಕ್ಕೆ ಪರಿಹಾರವಿದೆ. ಅಂತಹ ಅತಿಥಿಗಳಿಗೆ, ಪ್ರತಿ ಮನೆಯಲ್ಲೂ ಒಂದು ಅಥವಾ ಎರಡು ಬಾಕ್ಸ್ ತಂಪು ಪಾನೀಯಗಳ ಬಾಟಲಿಗಳು ಮತ್ತು ಕೆಲವು ಬಾಣಗಳನ್ನು ಇಟ್ಟುಕೊಂಡಿರಬೇಕು. ಜೈ ಶ್ರೀ ರಾಮ್." ಎಂದು ಬರೆದುಕೊಂಡಿದ್ದಾರೆ.
ಅವರ ಸಂದೇಶದ ಜೊತೆಗೆ, ಅವರು ಲಾಠಿಗಳಿಂದ ಶಸ್ತ್ರಸಜ್ಜಿತವಾದ ರಸ್ತೆಯಲ್ಲಿ ಜನರ ಗುಂಪಿನ ಛಾಯಾಚಿತ್ರವನ್ನು ಪೋಸ್ಟ್ ಮಾಡಿದರು. "ಪೊಲೀಸರು ನಿಮ್ಮನ್ನು ಉಳಿಸಲು ಬರುವುದಿಲ್ಲ, ಬದಲಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತಾರೆ, ಈ ಜನರು "ಜಿಹಾದ್" ಮಾಡಿ ಹೋದ ನಂತರ, ಪೊಲೀಸರು ಲಾಠಿಯೊಂದಿಗೆ ಬಂದು ಎಲ್ಲವೂ ಮುಗಿದ ನಂತರ ತನಿಖಾ ಸಮಿತಿಯನ್ನು ರಚಿಸುತ್ತಾರೆ" ಎಂದು ಅವರು ಹೇಳಿದರು.
ಕಳೆದ ವಾರ ದೆಹಲಿಯ ( New Delhi ) ಜಹಾಂಗೀರಪುರಿಯಲ್ಲಿ ( Jahangirpuri ) ನಡೆದ ಕೋಮು ಘರ್ಷಣೆಯ ( communal Clashes ) ಹಿನ್ನೆಲೆಯಲ್ಲಿ ಸಾಕ್ಷಿ ಮಹಾರಾಜ್ ಅವರ ಪೋಸ್ಟ್ ಬಂದಿದೆ. ಅದಕ್ಕೂ ಮೊದಲು, ರಾಮನವಮಿಯ ಸಂದರ್ಭದಲ್ಲಿ ಹಲವಾರು ರಾಜ್ಯಗಳಿಂದ ಕೋಮು ಘರ್ಷಣೆಗಳು ವರದಿಯಾಗಿದ್ದವು.
ಬಕ್ರೀದ್‌ಗೆ ಕುರಿ ಬಲಿ ನಿಲ್ಲಿಸಿದರೆ, ದೀಪಾವಳಿಗೆ ಪಟಾಕಿ ಸಂಪೂರ್ಣ ನಿಷೇಧ: ಬಿಜೆಪಿ ನಾಯಕ!
ಈ ಹಿಂದೆ, ಉತ್ತರಪ್ರದೇಶದ ಉನ್ನಾವ್ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆಯಾದ ಸಂದರ್ಭದಲ್ಲಿ ಸಾಕ್ಷಿ ಮಹಾರಾಜ್ ಅವರು ತಮ್ಮ ಗೆಲುವಿನಲ್ಲಿ ಪಾತ್ರ ವಹಿಸಿದ, ಅತ್ಯಾಚಾರ ಆರೋಪದ ಮೇಲೆ ಜೈಲಿನಲ್ಲಿರುವ ಶಾಸಕರೊಬ್ಬರನ್ನು ಜೈಲಿನಲ್ಲೇ ಭೇಟಿ ಮಾಡಿದ್ದಾರೆ. ಮತ್ತೊಮ್ಮೆ ಲೋಕಸಭೆಗೆ ಆಯ್ಕೆಯಾಗಲು ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಉದ್ಯೋಗ ಕೇಳಿಕೊಂಡು ತನ್ನ ಮನೆಗೆ ಬಂದಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಉತ್ತರಪ್ರದೇಶದ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ 2017ರ ಜೂನ್‌ನಲ್ಲಿ ಅತ್ಯಾಚಾರವೆಸಗಿದ್ದ. ಈ ಕುರಿತು ಸಂತ್ರಸ್ತೆ ದೂರು ನೀಡಿದಾಗ ಪೊಲೀಸರು ಶಾಸಕನನ್ನು ಬಂಧಿಸುವ ಬದಲು, ಸಂತ್ರಸ್ತೆಯ ತಂದೆಯನ್ನೇ ಅರೆಸ್ಟ್ ಮಾಡಿ, ಕಿರುಕುಳ ನೀಡಿದ್ದರು. ಆ ವ್ಯಕ್ತಿ ಮೃತಪಟ್ಟಿದ್ದರು.
ಡಿಸೆಂಬರ್ 6ರಿಂದ ಮಂದಿರ ನಿರ್ಮಾಣ ಶುರು: ಸಾಕ್ಷಿ ಮಹಾರಾಜ್ ಭವಿಷ್ಯ ನುಡಿದರು!
ಮಮತಾ ಬ್ಯಾನರ್ಜಿ ವಿರುದ್ಧವೂ ಅವಮಾನಕರ ರೀತಿಯಲ್ಲಿ ಮಾತನಾಡಿದ್ದ ಅವರು, ಜೈ ಶ್ರೀ ರಾಮ್ ಘೋಷಣೆ ಕೂಗಿದವರನ್ನು ಜೈಲಿಗಟ್ಟಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಕ್ಷಸ ಹಿರಣ್ಯ ಕಶಿಪು ವಂಶದವರು ಎಂದು ಹೇಳಿದ್ದರು. ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ‘ಹಿರಣ್ಯಕಶಿಪು ವಿಷ್ಣುವಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ತನ್ನ ಮಗನಾದ ಪ್ರಹ್ಲಾದ ನಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡುತ್ತಾನೆ. ಅಲ್ಲದೆ, ಆತನನ್ನು ಸೆರೆವಾಸದಲ್ಲಿಡುತ್ತಾನೆ. ಹಿರಣ್ಯಕಶಿಪು ರೀತಿಯಲ್ಲೇ ಮಮತಾ ಅವರು ಜೈ ಶ್ರೀ ರಾಮ್ ಘೋಷಣೆ ಕೂಗಿದವರನ್ನು ಜೈಲಿಗಟ್ಟುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ.
