ಡಿಸೆಂಬರ್ 13 ರಂದು ಸಂದರ್ಶಕರ ಸೋಗಿನಲ್ಲಿ ಸಂಸತ್ತಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಲೋಕಸಭೆಯ ಹಾಲ್‌ಗೆ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಈ ಆರೋಪಿಗಳಿಗೆ ಸಂಸದ ಪ್ರತಾಪ್‌ ಸಂದರ್ಶಕರ ಪಾಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲಾಗಿದೆ. ಹೇಳಿಕೆ ದಾಖಲು ಮಾಡಿಕೊಂಡಿದ್ದನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೂ ಖಚಿತಪಡಿಸಿದ್ದಾರೆ.

ನವದೆಹಲಿ (ಡಿಸೆಂಬರ್ 23, 2023): ಇತ್ತೀಚೆಗೆ ನಡೆದ ಸಂಸತ್ತಿನ ಭದ್ರತಾ ಲೋಪ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೈಸೂರಿನ ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಡಿಸೆಂಬರ್ 13 ರಂದು ಸಂದರ್ಶಕರ ಸೋಗಿನಲ್ಲಿ ಸಂಸತ್ತಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿ ಲೋಕಸಭೆಯ ಹಾಲ್‌ಗೆ ಜಿಗಿದು ಸ್ಮೋಕ್‌ ಬಾಂಬ್‌ ಸಿಡಿಸಿದ್ದರು. ಈ ಆರೋಪಿಗಳಿಗೆ ಸಂಸದ ಪ್ರತಾಪ್‌ ಸಂದರ್ಶಕರ ಪಾಸ್‌ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆ ನಡೆಸಲಾಗಿದೆ. ಹೇಳಿಕೆ ದಾಖಲು ಮಾಡಿಕೊಂಡಿದ್ದನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೂ ಖಚಿತಪಡಿಸಿದ್ದಾರೆ.

ಇದನ್ನು ಓದಿ: ಸಸ್ಪೆಂಡ್‌ಗೆ ವಿಪಕ್ಷ ಸಂಸದರೇ ಕೇಳಿದ್ದರು; ಅಮಾನತು ಮಾಡುವ ಇಚ್ಛೆ ನಮಗಿರಲಿಲ್ಲ: ಪ್ರಲ್ಹಾದ್‌ ಜೋಶಿ

ಪೊಲೀಸರ ಪ್ರಶ್ನೆಗಳೇನು?:
ಆರೋಪಿ ಮನೋರಂಜನ್‌ಗೆ ನೀವು ಎಷ್ಟು ಬಾರಿ ಪಾಸ್‌ ನೀಡಿದ್ದೀರಿ? ಅವನ ನಿಮ್ಮ ಪರಿಚಯವಾಗಿದ್ದು ಹೇಗೆ? ಆತ ನಿಮ್ಮನ್ನು ಎಲ್ಲಿ ಭೇಟಿ ಮಾಡಿದ್ದ? ನಿಮ್ಮ ಕಚೇರಿಗೆ ಎಷ್ಟು ಬಾರಿ ಬಂದಿದ್ದ? ಯಾರ ಶಿಫಾರಸಿನೊಂದಿಗೆ ನಿಮ್ಮ ಬಳಿ ಪಾಸ್‌ ಕೇಳಲು ಬಂದಿದ್ದ ಎಂಬ ಹಲವಾರು ಪ್ರಶ್ನೆಗಳನ್ನು ಪ್ರತಾಪ್‌ಗೆ ಪೊಲೀಸರು ಕೇಳಿದ್ದಾರೆ. ಇವುಗಳಿಗೆ ಪ್ರತಾಪ್‌ ಉತ್ತರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಲ್ಲದೇ ಈ ವೇಳೆ ಮನೋರಂಜನ್‌ ತಂದೆ ಮತ್ತು ಕುಟುಂಬದ ಬಗ್ಗೆಯೂ ಪ್ರತಾಪ್‌ ಬಳಿ ಪೊಲೀಸರು ವಿಚಾರಿಸಿದ್ದಾರೆ ಎನ್ನಲಾಗಿದೆ.

2024 ರಲ್ಲಿ ಬಿಜೆಪಿ ಸೋಲಿಸಲು ವಿಪಕ್ಷಗಳ ಪಣ: 146 ಸಂಸದರ ಸಸ್ಪೆಂಡ್‌ ಖಂಡಿಸಿ I.N.D.I.A ಬಲ ಪ್ರದರ್ಶನ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್‌ ಜೋಶಿ ‘ಡಿಸೆಂಬರ್ 13ರ ಭದ್ರತಾ ಲೋಪದ ಕುರಿತು ತನಿಖೆ ನಡೆಯುತ್ತಿದೆ. ತನಿಖಾ ವರದಿ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. ಇದೇ ವೇಳೆ ಪ್ರತಾಪ್‌ ಹೇಳಿಕೆ ದಾಖಲಿಸಿದ್ದಾಗಿ ತಿಳಿಸಿದರು.