ಕಿವಿ ಹಿಡಿದು ಬಸ್ಕಿ ಹೊಡೆದ ಬಿಜೆಪಿ ಶಾಸಕ  ರಾಬರ್ಟ್ಸ್‌ಗಂಜ್‌ ವಿಧಾನಸಭಾ ಕ್ಷೇತ್ರದ ಶಾಸಕನ ಗಿಮಿಕ್ ಜನರಲ್ಲಿ ಕ್ಷಮಿಸುವಂತೆ ಕೇಳಿದ ಶಾಸಕ

ಚುನಾವಣೆ ಎದುರಾಗುತ್ತಿದ್ದಂತೆ ರಾಜಕಾರಣಿಗಳು ಎಲ್ಲೂ ಇಲ್ಲದ ತಂತ್ರಗಳ ಮೊರೆ ಹೋಗುವ ಮೂಲಕ ಜನರ ಮತ ಸೆಳೆಯಲು ಯತ್ನಿಸುತ್ತಾರೆ. ಉತ್ತರಪ್ರದೇಶದ ಬಿಜೆಪಿ ಶಾಸಕನೋರ್ವ ಈ ಮತದಾರರ ಸೆಳೆಯುವ ತಂತ್ರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಚುನಾವಣಾ ಪ್ರಚಾರದ ವೇಳೆ ಬಸ್ಕಿ ಹೊಡೆದು ಮತ ನೀಡುವಂತೆ ಬೇಡಿದ್ದಾನೆ. ಜನ ಇವರಿಗೆ ಮತ ನೀಡುತ್ತಾರೋ ಇಲ್ಲವೋ ತಿಳಿಯದು ಆದರೆ ಇವರ ವಿಡಿಯೋವಂತೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೀವ್ರ ನಗೆಪಾಟಲಿಗೀಡಾಗಿದೆ.

ಸೋನ್‌ಭದ್ರದಲ್ಲಿರುವ (Sonbhadra) ರಾಬರ್ಟ್‌ಗಂಜ್‌ (Robertsganj) ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕನೇ ಹೀಗೆ ಬಸ್ಕಿ ಹೊಡೆದು ಮತ ಕೇಳಿ ತಮಾಷೆಗೀಡಾಗಿರುವವರು. ಚುನಾವಣಾ ಪ್ರಚಾರದ ವೇಳೆ ಶಾಸಕ ಭೂಪೇಶ್‌ ಛೌಬೆ(Bhupesh Chaubey) ಕುಳಿತ ಚೇರ್‌ನಿಂದ ಎದ್ದು ನಿಂತು ತಮ್ಮೆರಡು ಕಿವಿಗಳನ್ನು ಹಿಡಿದುಕೊಂಡರು. ನಂತರ ಬಸ್ಕಿ ಹೊಡೆಯಲು ಶುರು ಮಾಡಿದ ಅವರು ಜನರಲ್ಲಿ ಕಳೆದೈದು ವರ್ಷಗಳಲ್ಲಿ ತಾನೇನಾದರು ತಪ್ಪು ಮಾಡಿದಲ್ಲಿ ಕ್ಷಮಿಸಿ ಬಿಡುವಂತೆ ಕೇಳಿಕೊಂಡರು. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ನೋಡಿ ನಗುತ್ತಿದ್ದಾರೆ. 

Scroll to load tweet…

ಜಾರ್ಖಂಡ್‌ನ (Jharkhand) ಮಾಜಿ ಆರೋಗ್ಯ ಸಚಿವ (former health minister) ಹಾಗೂ ಶಾಸಕ ಭಾನು ಪ್ರತಾಪ್‌ ಶಾಹಿ (Bhanu Pratap Shahi) ಅವರು ಈ ಚುನಾವಣಾ ಪ್ರಚಾರದ ಮುಖ್ಯ ಅತಿಥಿಯಾಗಿ ವೇದಿಕೆಯ ಡಯಾಸ್ ಮುಂದೆ ನಿಂತಿದ್ದರು. ಈ ಸಂದರ್ಭ ಅವರ ಎದುರಿನಲ್ಲೇ ಶಾಸಕ ಭೂಪೇಶ್‌ ಛೌಬೆ ಒಮ್ಮೆಗೆ ಎದ್ದು ನಿಂತು ಬಸ್ಕಿ ಹೊಡೆಯಲು ಶುರು ಮಾಡಿದ್ದಾರೆ. ತಮ್ಮೆರಡು ಕೈಗಳನ್ನು ಜೋಡಿಸಿದ ಅವರು, ನಾನು ನಿಮ್ಮ ಕ್ಷಮೆಯನ್ನು ಕೇಳುತ್ತೇನೆ ಎಂದರು. ಈ ವೇಳೆ ವೇದಿಕೆಯ ಕೆಳಗೆ ನಿಂತಿದ್ದ ಅವರು ಹಿಂಬಾಲಕರು ಜೋರಾಗಿ ಬೊಬ್ಬೆ ಹೊಡೆದು ಘೋಷಣೆ ಕೂಗಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. 

UP Elections: ಮತ ಚಲಾಯಿಸಿ ಇವಿಎಂಗೆ ಫೆವಿಕ್ವಿಕ್ ಹಾಕಿ ಹೋದ ಮತದಾರ!


ನೀವೆಲ್ಲರೂ 2017ರ ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿದ್ದೀರಿ. ಹಾಗೆಯೇ ಈಗಲೂ ನನಗೆ ಆಶೀರ್ವಾದ ಮಾಡಿ. ಆ ಮೂಲಕ ಭಾರತೀಯ ಜನತಾ ಪಕ್ಷದ ಕಮಲವೂ ರಾಬರ್ಟ್‌ಗಂಜ್‌ನಲ್ಲಿ ಮತ್ತೆ ಅರಳುವಂತೆ ಮಾಡಿ ಎಂದು ಅವರು ಮನವಿ ಮಾಡಿದರು. ಕೆಲ ಮೂಲಗಳ ಪ್ರಕಾರ ಶಾಸಕ ಭೂಪೇಶ್‌ ಛೌಬೆ, ಅವರ ಕ್ಷೇತ್ರದ ಯಾರ ಕರೆಯನ್ನು ಛೌಬೆ ಸ್ವೀಕರಿಸುತ್ತಿರಲಿಲ್ಲ ಹಾಗೂ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಅವರು ನಿಷ್ಕ್ರಿಯರಾಗಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಈ ವಿಚಾರವನ್ನು ಅರಿತೆ ಶಾಸಕ ಛೌಬೆ ಹೀಗೆ ಸಾರ್ವಜನಿಕವಾಗಿ ಜನರ ಕ್ಷಮೆ ಕೇಳಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಚೌಬೆ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅವಿನಾಶ್ ಕುಶ್ವಾಹಾ (Avinash Kushwaha) ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು.

UP Election: 9 ಜಿಲ್ಲೆ 59 ಕ್ಷೇತ್ರ, ಅವಧ್ ಪ್ರಾಂತ್ಯ ಗೆದ್ದವನೇ ಉತ್ತರದ ಸರದಾರ..!