Asianet Suvarna News Asianet Suvarna News

UP Elections: ಮತ ಚಲಾಯಿಸಿ ಇವಿಎಂಗೆ ಫೆವಿಕ್ವಿಕ್ ಹಾಕಿ ಹೋದ ಮತದಾರ!

* ಉತ್ತರ ಪ್ರದೆಶ ಚುನಾವಣೆ, ನಾಲ್ಕನೇ ಹಂತದ ಮತದಾನ ಆರಂಭ

* ಮತ ಚಲಾಯಿಸಲು ಕೇಂದ್ರಗಳತ್ತ ಆಗಮಿಸುತ್ತಿರುವ ಮತದಾರರು

* ಮತ ಚಲಾಯಿಸಿ ಇವಿಎಂಗೆ ಫೆವಿಕ್ವಿಕ್ ಹಾಕಿ ಹೋದ ಮತದಾರ!

UP Election man applied feviquick to EVM Machine after casting his vote in lakhimpur pod
Author
Bangalore, First Published Feb 23, 2022, 12:01 PM IST | Last Updated Feb 23, 2022, 12:01 PM IST

ಲಕ್ನೋ(ಫೆ.23): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಬುಧವಾರ ನಾಲ್ಕನೇ ಹಂತದ ಮತದಾನ ನಡೆಯುತ್ತಿದೆ. ಈ ಹಂತದಲ್ಲಿ 9 ಜಿಲ್ಲೆಗಳ 60 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲಕ್ನೋ, ಸೀತಾಪುರ್, ಖೇರಿ, ಹರ್ದೋಯ್, ಉನ್ನಾವೋ, ರಾಯ್ ಬರೇಲಿ, ಫತೇಪುರ್ ಮತ್ತು ಪಿಲಿಭಿತ್ ಜಿಲ್ಲೆಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಇದರೊಂದಿಗೆ ಲಖಿಂಪುರ ಖೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡಿಪುರ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯುವಾಗ ಇವಿಎಂ ಯಂತ್ರದಲ್ಲಿ ಫೆವಿಕ್ವಿಕ್ ಹಾಕಿರುವುದು ಕಂಡು ಬಂದಿದೆ. ಅಚ್ಚರಿ ಎಂದರೆ ಈ ಯಂತ್ರವನ್ನು ಇನ್ನೂ ಬದಲಾಯಿಸಿಲ್ಲ.

ಫೆ.23ರಂದು ಜಿಲ್ಲೆಯಲ್ಲಿ ಮತದಾನದ ವೇಳೆ ಖೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಡೀಪುರ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗಿದ್ದ ಮತಗಟ್ಟೆ ಸಂಖ್ಯೆ 109ರಲ್ಲಿ ಮತದಾನ ಮಾಡಲು ಬಂದ ಅಪರಿಚಿತ ವ್ಯಕ್ತಿಗಳು ಇವಿಎಂ ಯಂತ್ರಕ್ಕೆ ಫೆವಿಕ್ವಿಕ್ ಹಾಕಿದ್ದರು. ನಂತರ ಕೊಠಡಿ ಸಂಖ್ಯೆ 109 ರ ಇವಿಎಂ ಯಂತ್ರ ಸ್ವಿಚ್ ಆಫ್ ಆಗಿತ್ತು. ಅಲ್ಲಿ ಗಂಟೆಗಟ್ಟಲೆ ಮತದಾನ ಪ್ರಕ್ರಿಯೆಗೆ ಅಡ್ಡಿಯಾಯಿತು. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿರುವ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.

ಇವಿಎಂ ಯಂತ್ರ ಇನ್ನೂ ಬದಲಾಗಿಲ್ಲ

ಖೇರಿ ವ್ಯಾಪ್ತಿಯ ಕಡೀಪುರ ಪ್ರಾಥಮಿಕ ಶಾಲೆಯಲ್ಲಿ ಇವಿಎಂ ಯಂತ್ರವನ್ನು ಇನ್ನೂ ಬದಲಾಯಿಸಿಲ್ಲ, ಇವಿಎಂ ಯಂತ್ರಕ್ಕೆ ಫೆವಿಕ್ವಿಕ್ ಹಾಕಿದ ಬಗ್ಗೆ ಮಾಹಿತಿ ಪಡೆದ ಸದರ್ ಸಿಒ ಅರವಿಂದ್ ಕುಮಾರ್ ವರ್ಮಾ ಅವರೊಂದಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಡಿಪುರ ಪ್ರಾಥಮಿಕ ಶಾಲೆಗೆ ತಲುಪಿದೆ. ಇವಿಎಂ ಯಂತ್ರದಲ್ಲಿರುವ ಒಂದು ಬಟನ್‌ಗೆ ಫೆವಿಕ್ವಿಕ್‌ ಹಾಕಲಾಗಿದ್ದು, ಈ ಬಟನ್‌ನಲ್ಲಿ ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ ಇದೆ ಎಂದು ಸರತಿ ಸಾಲಿನಲ್ಲಿ ನಿಂತಿದ್ದ ಕೆಲ ಮತದಾರರು ಹೇಳಿದ್ದಾರೆ. ಮಾಹಿತಿ ಬಂದ ತಕ್ಷಣ ಸಮಾಜವಾದಿ ಪಕ್ಷದ ಅಭ್ಯರ್ಥಿ ಉತ್ಕರ್ಷ್ ವರ್ಮಾ ಕೂಡ 142 ಸದರ್ ವಿಧಾನಸಭಾ ಕ್ಷೇತ್ರದಿಂದ ಸ್ಥಳಕ್ಕೆ ಆಗಮಿಸಿದರು. ಸಮಾಜವಾದಿ ಪಕ್ಷದ ಮತಕ್ಕೆ ಅಡ್ಡಿಪಡಿಸಲು ಸಂಚು ರೂಪಿಸಲಾಗಿದೆ ಎಂದು ಉತ್ಕರ್ಷ್ ವರ್ಮಾ ಹೇಳಿದ್ದಾರೆ.

ಯಾವ ಬಟನ್ ಒತ್ತದ್ರೂ ಬಿಜೆಪಿಗೆ ಮತ

ಮತ್ತೊಂದು ಪ್ರಕರಣದಲ್ಲಿ, ಲಖಿಂಪುರ ಖೇರಿಯ ಫರ್ಧಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಬೂತ್ ಸಂಖ್ಯೆ 85 ರಲ್ಲಿ ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತ ಬೀಳುತ್ತಿರುವುದು ಕಂಡು ಬಂದಿದೆ. ಇದರಿಂದ ಎರಡು ಗಂಟೆಗಳ ಕಾಲ ಮತದಾನಕ್ಕೆ ಅಡ್ಡಿ ಉಂಟಾಯಿತು. ತಹಸೀಲ್ದಾರ್ ಸದರ್ ಮತ್ತು ಸೆಕ್ಟರ್ ಮ್ಯಾಜಿಸ್ಟ್ರೇಟ್ ಡಾ.ರಾಕೇಶ್ ವರ್ಮಾ ಅವರು ಸ್ಥಳಕ್ಕೆ ಆಗಮಿಸಿ ಹೊಸ ಇವಿಎಂ ಯಂತ್ರವನ್ನು ನೀಡಿ, 8:55 ಕ್ಕೆ ಮತದಾನವನ್ನು ಪುನರಾರಂಭಿಸಿದರು.

ಯುಪಿ ಚುನಾವಣಾ ಮಾಹಿತಿ:

 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ರಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಮೊದಲ ಹಂತದ ಮತದಾನ ಫೆಬ್ರವರಿ 10 ರಂದು, ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, ಐದನೇ ಹಂತ ಫೆಬ್ರವರಿ 27 ರಂದು, ಆರನೇ ಮಾರ್ಚ್ 3 ರಂದು ಹಂತ ಮತ್ತು ಕೊನೆಯ ಹಂತ ಮಾರ್ಚ್ 7 ರಂದು ಮತದಾನ. ಯುಪಿಯಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios