ಬಿಜೆಪಿ ಸಚಿವ, ಕಸದಿಂದ ಚಿನ್ನ ತೆಗೆಯುವ ಯಂತ್ರ ತಯಾರಾಗಲಿದೆ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಮಾಜಿ ಸಿಎಂ ಟೀಕೆ ವ್ಯಕ್ತಪಡಿಸಿದ್ದಾರೆ, ಯೋಗಿ ಸರ್ಕಾರ ಕಸದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಲಕ್ನೋ: ದೇಶದ ರಾಜಕಾರಣದಲ್ಲಿ ಆಲೂಗಡ್ಡೆಯಿಂದ ಚಿನ್ನ ತೆಗೆಯುವ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇಂತಹವುದೇ ಒಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ (Yogi Adityanath, CM Uttar Pradesh) ಸಂಪುಟದ ಸಚಿವರ ಹೇಳಿಕೆಯನ್ನು ವಿಡಿಯೋವನ್ನು ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav, Former CM) ಸಹ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು, ವಿಶೇಷ ಮನವಿಯನ್ನು ಸಲ್ಲಿಸಿದ್ದಾರೆ. ಉತ್ತರ ಪ್ರದೇಶ ಸರ್ಕರ ಪಶುಸಂಗೋಪನ ಸಚಿವರಾಗಿರುವ ಧರ್ಮಪಾಲ್ ಸಿಂಗ್ (Minister Dharmpal Singh), ಮೀರಥ್‌ನಲ್ಲಿ ಶೀಘ್ರದಲ್ಲಿಯೇ ಕಸದಿಂದ ಚಿನ್ನ ತೆಗೆಯುವ ಮಷೀನ್ ತಯಾರು ಮಾಡಲಾಗುವುದು ಎಂದು ಹೇಳಿದ್ದಾರೆ. ಸದ್ಯ ಸಚಿವರ ಈ ಹೇಳಿಕೆ ವೈರಲ್ (Viral Video) ಆಗುತ್ತಿದೆ.

ಸಚಿವ ಧರ್ಮಪಾಲ್ ಸಿಂಗ್ ಹೇಳಿಕೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅಖಿಲೇಶ್ ಯಾದವ್ ನೇರವಾಗಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಖಿಲೇಶ್ ಯಾದವ್ ತಮ್ಮ ಎಕ್ಸ್ ಖಾತೆಯಲ್ಲಿ, ಸಿಎಂ ಯೋಗಿ ಸರ್ಕಾರ ಕಸದಲ್ಲಿಯೂ ಕಮಿಷನ್ ಪಡೆಯುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಅಖಿಲೇಶ್ ಯಾದವ್ ಸಚಿವರ ಹೇಳಿಕೆಗೆ ಹೇಳಿದ್ದೇನು?

ಮಾನ್ಯ ಪಶುಸಂಗೋಪನಾ ಸಚಿವರೇ, ಮೊದಲು ಕನೌಜ್‌ನಲ್ಲಿರುವ ಮಿಲ್ಕ್ ಪ್ಲಾಂಟ್‌ಗೆ (Milk Plant) ಚಾಲನೆ ನೀಡುವ ಮೂಲಕ ರೈತರಿಗೆ ಸಹಾಯ ಮಾಡಿ. ಆನಂತರ ಕಸದಿಂದ ಚಿನ್ನ ತೆಗೆಯುವ ಯಂತ್ರದ ಬಗ್ಗೆ ಮಾತನಾಡಿ. ಬಹುಶಃ ಬಿಜೆಪಿಯಲ್ಲಿ ಇಂತಹ ಹೇಳಿಕೆಯನ್ನು ನೀಡುವ ಸ್ಪರ್ಧೆ ನಡೆಯುತ್ತಿರಬಹುದು. ಬಿಜೆಪಿಯಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಏರಿಕೆಯಾಗಿದ್ರೆ ಕಸದಲ್ಲಿಯೂ ಕಮಿಷನ್ ಪಡೆಯುವ ಯೋಜನೆ ಮಾಡಲಾಗುತ್ತಿದೆ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಯೋಗಿ ಸರ್ಕಾರಕ್ಕೆ ಚಾಟಿ ಬೀಸಿದ ಮಾಜಿ ಸಿಎಂ!

ಈ ಹೇಳಿಕೆಯಲ್ಲಿ ಯಾವುದೇ ಅರ್ಥವಿಲ್ಲ ಎಂಬುದರ ನಿಮಗೆ ತಿಳಿದಿದೆಯಾ ಎಂದು ಪ್ರಶ್ನೆ ಮಾಡಿರುವ ಅಖಿಲೇಶ್ ಯಾದವ್, ಸಚಿವರು ನೇರವಾಗಿ ಹೇಳಲು ಆಗದೇ, ಪರೋಕ್ಷವಾಗಿ ಭ್ರಷ್ಟಾಚಾರದ ಸುಳಿವು ನೀಡಿದ್ದಾರೆ. ಅಪ್ರಾಮಾಣಿಕತೆಯ ಬಗ್ಗೆ ತುಂಬಾ ನಯವಾಗಿ ಮಾತನಾಡಿದ ಸಚಿವರಿಗೆ ಮತ್ತು ಅವರ ನಾಯಕರಿಗೆ ಧನ್ಯವಾದಗಳು. ನಿಮ್ಮ ಇಂತಹ ಮಾತುಗಳನ್ನು ಕೇಳಿ ಇಡೀ ಉತ್ತರ ಪ್ರದೇಶ ಧನ್ಯವಾಗಿದೆ ಎಂದು ಯೋಗಿ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವನ್ನ ಮಾಡಿದ್ದಾರೆ.

ಸಚಿವ ಧರ್ಮಪಾಲ್ ಸಿಂಗ್ ಹೇಳಿದ್ದೇನು? 

ಮೀರತ್‌ ನಗರದ ಬೈಠಕ್‌ನಲ್ಲಿ ಧರ್ಮಪಾಲ್ ಸಿಂಗ್ ಭಾಗಿಯಾಗಿದ್ದರು. ಭೈಠಕ್ ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ, ರಾಜ್ಯದ ತ್ಯಾಜ್ಯ ನಿರ್ವಹಣಾ ಉಪಕ್ರಮದಡಿಯಲ್ಲಿ ಶೀಘ್ರದಲ್ಲೇ ಸುಧಾರಿತ ಯಂತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. ವೈರಲ್ ಆಗಿರುವ ವಿಡಿಯೋ ಪ್ರಕಾರ, 'ಈ ಯಂತ್ರವು ತ್ಯಾಜ್ಯ ನಿರ್ವಹಣೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಕಸದಿಂದ ಚಿನ್ನವನ್ನು ಉತ್ಪಾದಿಸುತ್ತದೆ. ಈ ಯಂತ್ರನಗರವನ್ನು ಸ್ವಚ್ಛವಾಗಿಡುವ ಕೆಲಸ ಮಾಡುತ್ತದೆ. ತ್ಯಾಜ್ಯದ ವಿಂಗಡನೆಯಿಂದ ಆರ್ಥಿಕ ಲಾಭವೂ ಇದರಿಂದ ಸಿಗಲಿದೆ ಎಂದು ಧರ್ಮಪಾಲ್ ಸಿಂಗ್ ಹೇಳಿದ್ದಾರೆ. ಆದ್ರೆ ಕಸದಿಂದ ಚಿನ್ನ ತೆಗೆಯುವ ಹೇಳಿಕೆಯ ತುಣುಕು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Scroll to load tweet…