Asianet Suvarna News Asianet Suvarna News

BJP Leaders ಫೋಟೋ ತೆಗೆದಿದ್ದು ನಾನು, ಕ್ರೆಡಿಟ್ ಕಸಿದ ಸುದ್ಧಿ ಸಂಸ್ಥೆ ಕಾಲೆಳೆದ ಸ್ಮೃತಿ ಇರಾನಿ!

  • ಯೋಗಿ ಆದಿತ್ಯನಾಥ್ ಪ್ರಮಾವಚನದ ವೇಳೆ ಫೋಟೋ ವೈರಲ್
  • ಪ್ರಧಾನಿ ಮೋದಿ, ಅಮಿತ್ ಶಾ, ಗಡ್ಕರಿ, ರಾಜನಾಥ್ ಸೇರಿ ಹಲವು ಭಾಗಿ
  • ಬಿಜೆಪಿ ನಾಯಕರ ಫೋಟೋ ವೈರಲ್, ಸುದ್ಧಿ ಸಂಸ್ಥೆ ಕಾಲೆಳೆದ ಇರಾನಿ
BJP leaders Viral Photo i clicked image but credit goes to News agency says Smriti Irani ckm
Author
Bengaluru, First Published Mar 26, 2022, 9:02 PM IST | Last Updated Mar 26, 2022, 9:02 PM IST

ನವದೆಹಲಿ(ಮಾ.26): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಬಿಜೆಪಿ ನಾಯಕರ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ನಿತಿನ್ ಗಡ್ಕರಿ, ಅಮಿತ್ ಶಾ, ರಾಜನಾಥ್ ಸಿಂಗ್, ಜೆಪಿ ನಡ್ಡಾ ಹಾಗೂ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಳಿತಿರುವ ಫೋಟೋ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಮಾಧ್ಯಮಗಳು ಈ ಫೋಟೋ ರಾರಾಜಿಸಿದೆ. ಆದರೆ ಈ ಫೋಟೋ ಕ್ಲಿಕ್ ಮಾಡಿದ್ದು  ನಾನು ಆದರೆ ಸುದ್ಧಿ ಸಂಸ್ಥೆ ಕ್ರೆಡಿಟ್ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವ ಸ್ಮೃತಿ ಇರಾನಿ ಮಾಧ್ಯಮದ ಕಾಲೆಳೆದಿದ್ದಾರೆ. 

ಯೋಗಿ ಪ್ರಮಾಣವಚನ ಸಮಾರಂಭದಲ್ಲಿ ಸಾಲಾಗಿ ಕುಳಿತಿದ್ದ ಕೇಂದ್ರದ ಸಚಿವರು ಹಾಗೂ ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಸ್ಟಾರ್‌ಗಳ ಫೋಟೋವನ್ನು ಸ್ಮೃತಿ ಇರಾನಿ ಕ್ಲಿಕ್ ಮಾಡಿದ್ದಾರೆ. ಇದೇ ಫೋಟೋವನ್ನು ಎಲ್ಲಾ ಸುದ್ಧಿ ಸಂಸ್ಥೆಗಳು ಬಳಸಿಕೊಂಡಿದೆ. ಕೆಲ ಮಾಧ್ಯಮದಲ್ಲಿ ಈ ಫೋಟೋಗೆ ಎಎನ್ಐ ಕ್ಲಿಕ್ ಮಾಡಿದ ಫೋಟೋ ಎಂದು ಕ್ರೆಡಿಟ್ ನೀಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಇರಾನಿ, ಸುದ್ಧಿ ಸಂಸ್ಥೆ ಕಾಲೆಳೆದಿದ್ದಾರೆ.

 

 

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನ, ಮೋದಿ, ಶಾ ಭಾಗಿ!

ಬಹುತೇಕ ಬಿಜೆಪಿ ನಾಯಕರು ಕೂಡ ಈ ಫೋಟವನ್ನು ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಬಿಜೆಪಿ ಸಾಧನೆಯ ಹಿಂದಿರುವ ಸಾಮಾನ್ಯ ವ್ಯಕ್ತಿಗಳು ಎಂದು ಈ ಫೋಟೋಗೆ ಕ್ಯಾಪ್ಶನ್ ನೀಡಿದ್ದಾರೆ. ಕಾರಣ ಸಾಮಾನ್ಯ ಕುಟುಂಬ, ಯಾವುದೇ ರಾಜಕೀಯ ಹಿನ್ನಲೆ ಇಲ್ಲದೆ ಬಂದಿರುವ ಈ ನಾಯಕರು ಇದೀಗ ದೇಶದ ಅತ್ಯುನ್ನತ ಸ್ಥಾನದಲ್ಲಿ ಹಾಗೂ ಬಿಜೆಪಿಯ ಪ್ರಬಲ ನಾಯಕರಾಗಿ ಬೆಳೆದಿದ್ದಾರೆ ಎಂದು ಬಿಜೆಪಿಯ ಹಲವು ನಾಯಕರು ಟ್ವೀಟ್ ಮಾಡಿದ್ದಾರೆ.

ಅದ್ದೂರಿಯಾಗಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಕೇಂದ್ರ ಸಚಿವರು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಬಿಹಾರದ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಮಿತ್ರ ಪಕ್ಷವಾದ ಜೆಡಿಯು ನಾಯಕರಾದ ನಿತೀಶ್‌ ಕುಮಾರ್‌, ಖ್ಯಾತ ಉದ್ಯಮಿಗಳು ಹಾಗೂ ಮನರಂಜನಾ ಕ್ಷೇತ್ರದ ದಿಗ್ಗಜರು ಭಾಗವಹಿಸಿದ್ದರು.

UP New CM ಯೋಗಿ ಪ್ರಮಾಣವಚನ ಸ್ವೀಕರಿಸಿದ ಕ್ರೀಡಾಂಗಣ ಕಟ್ಟಿದ್ದು ನಾವು, ಅಖಲೇಶ್ ಯಾದವ್ ಹೇಳಿಕೆಗೆ ಆಕ್ರೋಶ!

ದೇಶದೆಲ್ಲೆಡೆ ಸಂಭ್ರಮ
ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ತಾಳಿಕೋಟೆ ಪಟ್ಟಣದ ಮಹಾರಾಣಾ ಪ್ರತಾಪ ಸಿಂಹ ವೃತ್ತದಲ್ಲಿ ಕ್ಷತ್ರೀಯ ಮಹಾ ಒಕ್ಕೂಟ ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.ಮಧ್ಯಾಹ್ನ 3 ಗಂಟೆಗೆ ಕೇಸರಿ ಟೋಪಿ, ಶಾಲು, ಮತ್ತು ಬಿಜೆಪಿ ಧ್ವಜದೊಂದಿಗೆ ಮಹಾರಾಣಾ ಪ್ರತಾಪ ಸಿಂಹ ವೃತ್ತಕ್ಕೆ ಆಗಮಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಅಲ್ಲದೇ ಡಿಜೆ ಹಾಡಿಗೆ ತಕ್ಕಂತೆ ಕುಣಿದು ಕುಪ್ಪಳಿಸಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ಎರಡನೇ ಬಾರಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿನ ಜೋಗಿ ಮಠದಲ್ಲಿ ಆರಾಧ್ಯದೇವ ಶ್ರೀಕಾಲಭೈರವ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕದ್ರಿಯ ಕದಳಿ ಮಠದ ಪೀಠಾಧಿಪತಿ ಶ್ರೀನಿರ್ಮಲನಾಥ್‌ಜಿ ಮಹಾರಾಜ್‌ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ಕಾಲಭೈರವನಿಗೆ ಇಷ್ಟಾರ್ಥ ಸಿದ್ಧಿಗಾಗಿ ರೋಟ್‌ ಪೂಜೆ ಮಾಡಿ ವಿಶೇಷ ನೈವೇದ್ಯ ಸಮರ್ಪಿಸಲಾಯಿತು. ಬಳಿಕ ಮುಂದಿನ ಐದು ವರ್ಷಗಳ ಯೋಗಿ ಆದಿತ್ಯನಾಥ್‌ರ ಆಡಳಿತ ಸುಭದ್ರವಾಗಿರಲಿ. ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿಯಲಿ. ಎಲ್ಲ ಕಡೆ ಸುಭಿಕ್ಷೆ, ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಲಾಯಿತು.
 

Latest Videos
Follow Us:
Download App:
  • android
  • ios