Asianet Suvarna News Asianet Suvarna News

ದೀಪಾವಳಿಗೆ ಪಟಾಕಿ ಹಚ್ಚಿದ್ರೆ ಕೇಜ್ರಿವಾಲ್‌ಗೆ ಉರಿ: ಆಪ್‌ ವಿರುದ್ಧ ಬಿಜೆಪಿ ನಾಯಕರ ಕಿಡಿ!

ದೆಹಲಿಯ ನೂತನ ಸಚಿವ ರಾಜ್ ಕುಮಾರ್ ಆನಂದ್ ಅವರ ನಿವಾಸದಲ್ಲಿ ಆಪ್ ಕಾರ್ಯಕರ್ತರು ಪಟಾಕಿ ಸಿಡಿಸುತ್ತಿರುವ ವಿಡಿಯೋವನ್ನು ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಸೇರಿದಂತೆ ಇತರ ಪ್ರಮುಖ ನಾಯಕರು  ಪೋಸ್ಟ್ ಮಾಡಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಹಿಂದೂ ವಿರೋಧಿ ಎಂದು ಕರೆದಿದ್ದಾರೆ.
 

BJP leaders tweets video of AAP workers lighting crackers after ban calls Delhi CM Arvind Kejriwal anti Hindu san
Author
First Published Oct 20, 2022, 12:06 PM IST

ನವದೆಹಲಿ (ಅ.20): ವಾಯು ಮಾಲಿನ್ಯದ ಕಾರಣ ನೀಡಿ ದೆಹಲಿಯಲ್ಲಿ ದೀಪಾವಳಿ ಸಮಯದಲ್ಲಿ ಪಟಾಕಿ ಸಿಡಿಸುವುದಕ್ಕೆ ನಿಷೇಧ ವಿಧಿಸಲಾಗಿದೆ. ಇದನ್ನೂ ಮೀರಿ ಪಟಾಕಿ ಸಿಡಿಸಿದಲ್ಲಿ, ಅವರನ್ನು ಜೈಲಿಗೆ ಅಟ್ಟಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಆದರೆ, ದೆಹಲಿ ಸರ್ಕಾರದ ಆದೇಶವನ್ನೇ ದೆಹಲಿಯ ನೂತನ ಸಚಿವ ರಾಜ್‌ ಕುಮಾರ್‌ ಆನಂದ್‌ ಹಾಗೂ ಅವರ ಬೆಂಬಲಿಕರು ಮುರಿದಿದ್ದಾರೆ. ಆಪ್‌ ಸರ್ಕಾರದಲ್ಲಿ ಹೊಸ ಸಚಿವರಾಗಿ ನೇಮಕವಾದ ಬಳಿಕ ರಾಜ್‌ ಕುಮಾರ್‌ ಆನಂದ್‌ ಅವರ ಬೆಂಬಲಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇದನ್ನಿಟ್ಟುಕೊಂಡು ಟೀಕಿಸಿರುವ ಬಿಜೆಪಿ ಮುಖಂಡರು ಅರವಿಂದ್‌ ಕೇಜ್ರಿವಾಲ್‌ ಹಿಂದು ವಿರೋಧಿ ಎಂದು ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ತಜಿಂದರ್‌ ಸಿಂಗ್‌ ಬಗ್ಗಾ,  ಕೇಜ್ರಿವಾಲ್‌ ಹಿಂದೂ ವಿರೋಧಿ ಎಂದು ಆರೋಪಿಸಿದ್ದಾರೆ. ಈ ಸಂದರ್ಭದ ವೀಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಬಗ್ಗಾ, “ಹಿಂದೂಗಳು ದೀಪಾವಳಿಯಂದು ಪಟಾಕಿಗಳನ್ನು ಸುಟ್ಟರೆ ಮಾಲಿನ್ಯ ಉಂಟಾಗುತ್ತದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಜೈಲಿಗೆ ಕಳುಹಿಸುತ್ತಾರೆ, ಆದರೆ ಕೇಜ್ರಿವಾಲ್ ಸರ್ಕಾರದಲ್ಲಿ ಮಂತ್ರಿಯಾದ ಸಂಭ್ರಮದಲ್ಲಿ ಪಟಾಕಿ ಸುಟ್ಟರೆ ಅದರಿಂದ ಆಮ್ಲಜನಕ ಹೊರಬರುತ್ತದೆ. ಕೇಜ್ರಿವಾಲ್, ನಿಮ್ಮ ಹಿಂದೂ ವಿರೋಧಿ ಮುಖ ಮತ್ತೆ ಬಯಲಾಗಿದೆ. ನಿಮಗೆ ದೀಪಾವಳಿಯಲ್ಲಿ ಸಮಸ್ಯೆ ಇದೆ, ಪಟಾಕಿಯಿಂದಲ್ಲ, ”ಬಗ್ಗಾ ಆರೋಪ ಮಾಡಿದ್ದಾರೆ.


ಸೆಪ್ಟೆಂಬರ್‌ ತಿಂಗಳಿನಿಂದ ದೆಹಲಿ ಹಾಗೂ ಎನ್‌ಸಿಆರ್‌ ವಲಯದ ಗಾಳಿಯ ಗುಣಮಟ್ಟ ಕ್ಷೀಣಿಸಲು ಆರಂಭವಾಗುತ್ತದೆ. ಅರವಿಂದ್ ಕೇಜ್ರಿವಾಲ್ ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಸರ್ಕಾರ ಪಟಾಕಿಯನ್ನು ನಿಷೇಧಿಸಿದೆ. ಪಟಾಕಿ ಸಿಡಿಸಿದರೆ, 6 ತಿಂಗಳು ಜೈಲು ಹಾಗೂ 200 ರೂಪಾಯಿ ದಂಡ ಶಿಕ್ಷೆಯನ್ನು ವಿಧಿಸುವ ತೀರ್ಮಾನ ಮಾಡಿದೆ. ಈ ನಡುವೆ ಒಂದು ವಿಡಿಯೋ 'ಆಮ್ ಆದ್ಮಿ ಪಕ್ಷ'ವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದೆಹಲಿಯ ನೂತನ ಸಮಾಜ ಕಲ್ಯಾಣ ಸಚಿವರಾಗಿ ಪಟೇಲ್ ನಗರ ಶಾಸಕ ರಾಜ್ ಕುಮಾರ್ ಆನಂದ್ ಅವರನ್ನು ನೇಮಕ ಮಾಡುವುದಾಗಿ ಕೇಜ್ರಿವಾಲ್ ಘೋಷಿಸಿದ್ದಾರೆ. ಕೇಜ್ರಿವಾಲ್, ಆನಂದ್ ಅವರ ಹೆಸರನ್ನು ಘೋಷಿಸಿದ ತಕ್ಷಣ, ಅವರ ಬೆಂಬಲಿಗರು ರಸ್ತೆಗಳಲ್ಲಿ ನಿಷೇಧದ ಹೊರತಾಗಿಯೂ ಪಟಾಕಿಗಳನ್ನು ಸಿಡಿಸಿದರು. 

ಬಿಜೆಪಿಯ ರಾಷ್ಟ್ರೀಯ ವಕ್ತಾರ ಶಹಜಾದ್ ಜೈಹಿಂದ್  (BJP's national spokesperson Shahzad Jaihind)ಟ್ವೀಟ್ ಮಾಡಿದ್ದು, 'ಮಾಲಿನ್ಯದ ಕಾರಣ ಹಿಂದೂಗಳು ಪಟಾಕಿಗಳೊಂದಿಗೆ ದೀಪಾವಳಿಯನ್ನು ಆಚರಿಸುವುದನ್ನು ನಿಷೇಧಿಸಲಾಗಿದೆ! ಆದರೆ ಎಎಪಿಯ ರಾಜ್ ಕುಮಾರ್ ಆನಂದ್ ಅವರ ಸಚಿವ ಸ್ಥಾನವನ್ನು ಪಟಾಕಿ (Fire Crackers)ಸಿಡಿಸಿ ಸಂಭ್ರಮಿಸಿದರೆ ಅದು ಸೆಕ್ಯುಲರ್ ಮಾಲಿನ್ಯವೇ? ದೆಹಲಿ ವಾಯು ಗುಣಮಟ್ಟ ಕಳಪೆ ಆಗಿದ್ದರೂ, ಆಪ್‌ ಆಳ್ವಿಕೆಯಲ್ಲಿರುವ ಪಂಜಾಬ್‌ನಲ್ಲಿ ಗೋಧಿ ಬೆಳೆಯ ಅವಶೇಷಗಳ ದಹನವು 9 ದಿನಗಳಲ್ಲಿ 3 ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.

 

ಮೋದಿಗೆ ಜನ್ಮ ನೀಡಿದ್ದೆ ಮಹಾ ಅಪರಾಧ, ಮೋದಿ ತಾಯಿ ವಿರುದ್ಧ ಆಪ್ ಅಧ್ಯಕ್ಷನ ವಿವಾದಾತ್ಮಕ ಹೇಳಿಕೆ!

ಮತ್ತೊಬ್ಬ ಬಿಜೆಪಿ ವಕ್ತಾರ ಮತ್ತು ದೆಹಲಿ ಮಾಧ್ಯಮ ಸಂಬಂಧಗಳ ಉಸ್ತುವಾರಿ ಹರೀಶ್ ಖುರಾನಾ (BJP spokesperson and in-charge of Delhi Media Relations Harish Khurana), 'ನಾವು ಹಿಂದೂಗಳು ದೀಪಾವಳಿಯಂದು ಪಟಾಕಿಗಳನ್ನು ಸುಟ್ಟರೆ, ಮಾಲಿನ್ಯವು ಹರಡುತ್ತದೆ, ನಿಮ್ಮ ಕಾರ್ಯಕರ್ತರು ಮಂತ್ರಿಯಾದರೆ ಅರವಿಂದ್‌ ಕೇಜ್ರಿವಾಲ್‌ಗೆ ಯಾವುದೇ ಸಮಸ್ಯೆಯಿಲ್ಲ. ಅಂದಹಾಗೆ, ಸಚಿವರು ಹಚ್ಚುವ ಪಟಾಕಿ ವಿಶೇಷವಾಗಲಿದೆ, ಮಾಲಿನ್ಯ ಏಕೆ ಆಗುವುದಿಲ್ಲ? ಎಲ್ಲ ಕಾನೂನುಗಳೂ ಹಿಂದೂಗಳ ಇಂತಹ ಹಬ್ಬಗಳಿಗೆ ಮಾತ್ರ ಸೀಮಿತವೇ' ಎಂದು ಕೇಳಿದ್ದಾರೆ.

ಪ್ರಧಾನಿ ಮೋದಿಗೆ 'ನೀಚ ವ್ಯಕ್ತಿ' ಎಂದಿದ್ದ ಪ್ರಕರಣ: ಗುಜರಾತ್‌ ಆಪ್‌ ಅಧ್ಯಕ್ಷ ವಶಕ್ಕೆ

ದೆಹಲಿಯಲ್ಲಿ ದೀಪಾವಳಿಯಂದು ಪಟಾಕಿ ಸಿಡಿಸಿದರೆ 200 ರೂಪಾಯಿ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಸುವ ನಿರ್ಧಾರವನ್ನು ದೆಹಲಿ ಸರ್ಕಾರ (Delhi Governament) ಬುಧವಾರ ಹೊರತಂದಿದೆ. ಪಟಾಕಿಗಳನ್ನು ತಯಾರಿಸುವುದು, ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು 5,000 ರೂಪಾಯಿಗಳವರೆಗೆ ದಂಡ ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 9B ಅಡಿಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಶಿಕ್ಷಾರ್ಹ ಅಪರಾಧ ಎಂದು ಸರ್ಕಾರ ಘೋಷಿಸಿದೆ.

Follow Us:
Download App:
  • android
  • ios