Asianet Suvarna News Asianet Suvarna News

ಪ್ರಧಾನಿ ಮೋದಿಗೆ 'ನೀಚ ವ್ಯಕ್ತಿ' ಎಂದಿದ್ದ ಪ್ರಕರಣ: ಗುಜರಾತ್‌ ಆಪ್‌ ಅಧ್ಯಕ್ಷ ವಶಕ್ಕೆ

Gopal Italia Detained: ಪ್ರಧಾನಿ ಮೋದಿ ಅವರನ್ನು ‘ನೀಚ ವ್ಯಕ್ತಿ’ ಎಂದಿದ್ದ ಗುಜರಾತ್‌ನ ಆಪ್‌ ಅಧ್ಯಕ್ಷ ಗೋಪಾಲ್‌ ಇಟಾಲಿಯಾ ಅವರನ್ನು ಪೊಲೀಸರು ವಶಕ್ಕೆ ಪಡೆದು 3 ತಾಸು ವಿಚಾರಣೆ ನಡೆಸಿದ್ದಾರೆ 

AAP Gujarat chief Gopal Italia detained from NCW office released later mnj
Author
First Published Oct 14, 2022, 8:49 AM IST

ನವದೆಹಲಿ (ಅ. 14): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ‘ನೀಚ ವ್ಯಕ್ತಿ’ ಎಂದಿದ್ದ ಗುಜರಾತ್‌ನ ಆಪ್‌ ಅಧ್ಯಕ್ಷ ಗೋಪಾಲ್‌ ಇಟಾಲಿಯಾ (Gopal Italia) ಅವರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದು 3 ತಾಸು ವಿಚಾರಣೆ ನಡೆಸಿದ್ದಾರೆ ಹಾಗೂ ಬಳಿಕ ಬಿಡುಗಡೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಹಿಳಾ ಆಯೋಗದ ಎದುರು ಹೇಳಿಕೆ ದಾಖಲಿಸಲು ಆಗಮಿಸಿದ್ದ ವೇಳೆ ಈ ಪ್ರಸಂಗ ನಡೆದಿದೆ.

ಇತ್ತೀಚೆಗೆ 2019ರಲ್ಲಿ ಚಿತ್ರೀಕರಿಸಿದ್ದು ಎನ್ನಲಾದ ಇಟಾಲಿಯಾ ಅವರ ವಿಡಿಯೋವನ್ನು ಇತ್ತೀಚೆಗೆ ಬಿಜಡಪಿ ಬಿಡುಗಡೆ ಮಾಡಿತ್ತು. ಇದರಲ್ಲಿ ಇಟಾಲಿಯಾ ಮೋದಿ ಅವರಿಗೆ ‘ನೀಚ್‌ ಆದ್ಮಿ’ (ಕೀಳು ವ್ಯಕ್ತಿ) ಎಂದು ಕರೆದಂತೆ ಕೇಳಿಸುತ್ತಿತ್ತು. ಮಹಿಳೆಯರ ಬಗ್ಗೆಯೂ ಇಟಾಲಿಯಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರೆನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಆಯೋಗವು ಇಟಾಲಿಯಾಗೆ ಸಮನ್ಸ್‌ ಜಾರಿ ಮಾಡಿತ್ತು. ಈ ಬಗ್ಗೆ ವಿಚಾರಣೆಗೆ ಬಂದಾಗ ಇಟಾಲಿಯಾ ಅವರ ವಿಚಾರಣೆಯನ್ನು ಪೊಲೀಸರು ಕೂಡ ನಡೆಸಿದ್ದಾರೆ. ಆದರೆ ಆರೋಪಕಕ್ಕೆ ಪ್ರತಿಕ್ರಿಯಿಸಿರುವ ಇಟಾಲಿಯಾ, ‘ಇದು 2019ರ ವಿಡಿಯೋವಾಗಿದ್ದು, ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ. ತಿರುಚಲಾಗಿದೆ’ ಎಂದು ಹೇಳಿದ್ದಾರೆ.

ಆಮ್ ಆದ್ಮಿಯಿಂದ ಮತ್ತೆ ಹಿಂದೂ ವಿರೋಧಿ ಹೇಳಿಕೆ, ದೇವಸ್ಥಾನ ಶೋಷಣೆ ಕೇಂದ್ರ ಎಂದ ಆಪ್ ಅಧ್ಯಕ್ಷ

ಆದರೆ ಈ ಪ್ರಸಂಗವು ಆಪ್‌ ಹಾಗೂ ಬಿಜೆಪಿ ಮಧ್ಯೆ ಇನ್ನೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಹಾಡಿದೆ. ‘ಗುಜರಾತ್‌ ಚುನಾವಣೆಯಲ್ಲಿ ಇಟಾಲಿಯಾ ಜನಪ್ರಿಯ ಆಗುತ್ತಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿತ್ತು’ ಎಂದು ಆಪ್‌ ಸಂಚಾಲಕ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಇದಕ್ಕೂ ಮುನ್ನ, ‘ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ನನ್ನನ್ನು ಜೈಲಿಗೆ ಹಾಕಿಸುವುದಾಗಿ ಬೆದರಿಸಿದ್ದಾರೆ’ ಎಂದು ಇಟಾಲಿಯಾ ಆರೋಪಿಸಿದ್ದರು. ಇದಾದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದರು.

Follow Us:
Download App:
  • android
  • ios