Asianet Suvarna News Asianet Suvarna News

ನಟಿ ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣ; ಲಕ್ಷದ್ವೀಪದ 15 ಬಿಜೆಪಿ ನಾಯಕರು ರಾಜೀನಾಮೆ!

  • ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ವಿರುದ್ಧ ಜೈವಿಕ ಅಸ್ತ್ರ ಪ್ರಯೋಗ
  • ನಟಿ ಆಯಿಷಾ ಸುಲ್ತಾನಾ ವಿರುದ್ದ ದೇಶದ್ರೋಹ ಪ್ರಕರಣ
  • ಈ ಘಟನೆ ಬಳಿಕ ಲಕ್ಷದ್ವೀಪದ 15 ಬಿಜೆಪಿ ನಾಯಕರ ರಾಜೀನಾಮೆ
BJP leaders submit resignations after Sedition FIR Against Lakshadweep Filmmaker ckm
Author
Bengaluru, First Published Jun 12, 2021, 6:22 PM IST

ಲಕ್ಷದ್ವೀಪ(ಜೂ.12): ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಸಂಘರ್ಷ ಇದೀಗ ಮತ್ತೊಂದು ತಿರುವು ಪಡೆಯುವ ಲಕ್ಷಣಗಳು ಗೋಚರಿಸುತ್ತಿದೆ. ಲಕ್ಷದ್ವೀಪದಲ್ಲಿ ನಿಮಯಗಳ ತಿದ್ದುಪಡಿಯಿಂದ ಆರಂಭಗೊಂಡ ಸಂಘರ್ಷ ಇದೀಗ ನಟಿ ಆಯಿಷಾ ಜೈವಿಕ ಅಸ್ತ್ರ ಪ್ರಯೋಗದಿಂದ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಆಡಳಿತಾಧಿಕಾರಿ ಪ್ರಪುಲ್ ಪಟೇಲ್ ಖೋಡಾ ವಿರುದ್ಧ ಜೈವಿಕ ಅಸ್ತ್ರ ಪ್ರಯೋಗಕ್ಕೆ ದೇಶ ದೋಹ್ರ ಪ್ರಕರಣ ದಾಖಲಾಗಿದೆ. ಈ ಘಟನೆ ಬೆನ್ನಲ್ಲೇ ಬಿಜೆಪಿಯ 15 ನಾಯಕರು ರಾಜೀನಾಮೆ ನೀಡಿದ್ದಾರೆ.

ಹೊಸ ನಿಯಮದ ವಿರುದ್ಧ ಬೀದಿಗಿಳಿದ ಜನ; ಲಕ್ಷದ್ವೀಪದಲ್ಲಿ ನೀರಿನೊಳಗೆ ಪ್ರತಿಭಟನೆ!.

ಆಯಿಷಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು. ಇದೀಗ 15 ಬಿಜೆಪಿ ನಾಯಕರೇ ಇದರ ವಿರುದ್ದ ಅಸಮಾಧಾನಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. 

ಲಕ್ಷದ್ವೀಪದಲ್ಲಿ ನಡೆಯುತ್ತಿರುವ ಬೆಳವಣಿಗೆ , ನಿಯಮ ಬದಲಾವಣೆಯಿಂದ ಸ್ಥಳೀಯರು ಒತ್ತಡಕ್ಕೆ ಸಿಲುಕಿದ್ದಾರೆ. ಜನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ನೀತಿಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಆಡಳಿತಾಧಿಕಾರಿ ವಿರೋಧಿ ನೀತಿಯಿಂದ ಬೇಸತ್ತು ರಾಜೀನಾಮೆ ನೀಡುವುದಾಗಿ ಪತ್ರ ಬರೆದಿದ್ದಾರೆ.

ನಟಿ ಆಯಿಷಾಗೆ ಕಾಂಗ್ರೆಸ್ ನಾಯಕರು, ಕೇರಳ ಸೇರಿದಂತೆ ಹಲವರು ಬೆಂಬಲಕ್ಕೆ ನಿಂತಿದ್ದಾರೆ. ಇದೀಗ ಬಿಜೆಪಿ ನಾಯಕರು ಆಯಿಷಾ ಬೆಂಬಲಕ್ಕೆ ನಿಂತಿದ್ದಾರೆ ಎಂದು ವರದಿಯಾಗಿದೆ.

Follow Us:
Download App:
  • android
  • ios