ಕೇರಳದಲ್ಲಿ ನಿಂತು ಅಮೇಥಿ, ಉತ್ತರ ಭಾರತ ತೆಗಳಿದ ರಾಹುಲ್ ಗಾಂಧಿಗೆ ಮಂಗಳಾರತಿ!
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವರು ವೀರರೂ ಅಲ್ಲ ಧೀರರೂ ಅಲ್ಲ.. . ಅಲ್ಲಮನ ಈ ವಚನದಂತಾಗಿದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರಿಸ್ಥಿತಿ. ಇದಕ್ಕೆ ಕಾರಣ ಇಂದು ಕೇರಳದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ.
ತಿರುವನಂತಪುರಂ(ಫೆ.23): ರಾಹುಲ್ ಗಾಂಧಿ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಉತ್ತರ ಭಾರತೀಯ ಜನ ರಾಹುಲ್ ವಿರುದ್ಧ ಗುಡುಗಿದ್ದಾರೆ. ಇದಕ್ಕೆ ಕಾರಣ ಕೇರಳದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆ. ರಾಹುಲ್ ಗಾಂಧಿ ಹಾಗೂ ಕುಟಂಬಕ್ಕೆ ಮತ ನೀಡಿ ಪ್ರತಿ ಭಾರಿ ಗೆಲ್ಲಿಸಿದ ಜನತೆಗೆ ರಾಹುಲ್ ಅವಮಾನ ಮಾಡಿದ್ದಾರೆ. ಕೇರಳದಲ್ಲಿ ನಿಂತು ಅಮೇಥಿ ಹಾಗೂ ಉತ್ತರ ಭಾರತ ವಿರುದ್ಧ ನೀಡಿದ ಹೇಳಿಕೆ ರಾಹುಲ್‌ಗೆ ಮುಳ್ಳಾಗಿ ಪರಿಣಮಿಸಿದೆ.
ಗುಜರಾತ್‌ನಲ್ಲಿ ಕಾಂಗ್ರೆಸ್ ಧೂಳೀಪಟ; ಆದರೂ ರಾಹುಲ್ ಗಾಂಧಿ ಒಡೆದು ಆಳುವ ನೀತಿ ಬಿಟ್ಟಿಲ್ಲ ಎಂದ ನಡ್ಡಾ!
15 ವರ್ಷ ನಾನು ಉತ್ತರ ಭಾರತದಲ್ಲಿ ಸಂಸದನಾಗಿದ್ದೆ. ಬೇರೆ ರೀತಿಯ ರಾಜಕೀಯಕ್ಕೆ ಒಗ್ಗಿಕೊಂಡಿದ್ದೆ. ಕೇರಳಕ್ಕೆ ಬಂದು ಸ್ಪರ್ಧಿಸುವುದು ನನ್ನು ಉತ್ಸಾಹ ಹಾಗೂ ಉಲ್ಲಾಸವನ್ನೇ ಇಮ್ಮಡಿಮಾಡಿದೆ. ಇಲ್ಲಿನ ಜನರು ಜನರು ಸಮಸ್ಯೆಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ ಮತ್ತು ಸಮಸ್ಯೆಗಳಲ್ಲಿ ಆಳವಾಗಿ ಅರಿತುಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಗುಜರಾತ್ ಪಾಲಿಕೆ ಚುನಾವಣೆ ಫಲಿತಾಂಶ; ಭರ್ಜರಿ ಗೆಲುವಿಗೆ ಪ್ರಧಾನಿ ಮೋದಿ ಅಭಿನಂದನೆ!...
ಕೇರಳ ಜನ ಉತ್ತಮ, ಕೇರಳ ರಾಜಕೀಯ ನನ್ನ ಉತ್ಸಾಹ ಹೆಚ್ಚಿಸಿದೆ ಎಂದು ರಾಹುಲ್ ಹೇಳಿದ್ದಾರೆ. ಈ ಮೂಲಕ ಗಾಂಧಿ ಕುಟುಂಬಕ್ಕೆ ರಾಜೀಯ ಭದ್ರ ಬುನಾದಿ ಹಾಕಿದ ಅಮೇಥಿ ಹಾಗೂ ಉತ್ತರ ಭಾರತವನ್ನು ತೆಗೆಳಿದ್ದಾರೆ. ಇದೇ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ.
ಸತತ ಅವಕಾಶ ನೀಡಿದರೂ, ಯಾವುದೇ ಅಭಿವೃದ್ಧಿ ಮಾಡದೆ ಅಮೇಥಿಯಿಂದ ಲೋಕಸಭಾ ಸ್ಥಾನ ಉಳಿಸಲು ಕೇರಳಕ್ಕೆ ಓಡಿ ಬಂದ ರಾಹುಲ್ ಗಾಂಧಿ, ಇದೀಗ ಗಾಂಧಿ ಕುಟಂಬಕ್ಕೆ ನಿಷ್ಠೆಯಿಂದ ಮತದಾನ ಮಾಡಿ ಗೆಲ್ಲಿಸಿದ ಉತ್ತರಭಾರತೀಯರ ಬುದ್ದಿಮತ್ತೆಯನ್ನು ಪಶ್ನಿಸುತ್ತಿದ್ದಾರೆ. ವೈಫಲ್ಯ ಮತ್ತು ಅಸಮರ್ಥತೆಯನ್ನು ಸ್ವೀಕರಿಸಲು ಬದಲು ಕ್ಷೇತ್ರವನ್ನೇ ಬದಲಾಯಿಸಿದ್ದಾರೆ. ಈ ನಡೆಯಿಂದಲೇ ಕಾಂಗ್ರೆಸ್ ಈ ಸ್ಥಿತಿಗೆ ಬಂದಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಈಗಾಗಲೇ ಜೆಪಿ ನಡ್ಡ ರಾಹುಲ್ ಗಾಂಧಿಗೆ, ಗುಜರಾತ್ ಚುನಾವಣೆ ಫಲಿತಾಂಶದ ಮೂಲಕ ಒಡೆದು ಆಳುವ ನೀತಿಗೆ ಪಾಠ ಹೇಳಿದ್ದಾರೆ. ಇದೀಗ ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ನಾಯಕರು ರಾಹುಲ್ ಗಾಂಧಿ ರಾಜಕೀಯ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಭಾರತೀಯರು ರಾಹುಲ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.