* ಉತ್ತರ ಪ್ರದೇಶದಿಂದ ನಿರ್ಮಲಾ ರಾಜ್ಯಸಭೆಗೆ: ಬಿಜೆಪಿ ಚಿಂತನೆ?* ಈ ಬಾರಿ ಕರ್ನಾಟಕದಿಂದ ಇಬ್ಬರೂ ಕನ್ನಡಿಗರ ಆಯ್ಕೆ?
ಬೆಂಗಳೂರು(ಮೇ.23): ಕರ್ನಾಟಕದಿಂದ ರಾಜ್ಯಸಭೆಗೆ ಹಾಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮರು ಆಯ್ಕೆ ಮಾಡುವಂತೆ ರಾಜ್ಯ ಬಿಜೆಪಿಯಿಂದ ಶಿಫಾರಸು ಮಾಡಲಾಗಿದ್ದರೂ ನಿರ್ಮಲಾ ಅವರಿಗೇ ಟಿಕೆಟ್ ಸಿಗುವುದು ಅನುಮಾನವಾಗಿದೆ. ಕರ್ನಾಟಕದಿಂದ ಅನ್ಯರಾಜ್ಯದವರ ಆಯ್ಕೆಗೆ ಕಳೆದ ಬಾರಿ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿ ಕರ್ನಾಟಕ ಮೂಲದವರನ್ನೇ ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಹೀಗಾದರೆ ನಿರ್ಮಲಾ ಅವರು ಕರ್ನಾಟಕ ಬಿಟ್ಟು ಬೇರೆ ರಾಜ್ಯದಿಂದ ಆಯ್ಕೆಯಾಗಬೇಕಾಗುತ್ತದೆ. ವಿವರ ಪುಟ 5
ಉತ್ತರ ಪ್ರದೇಶದಿಂದ ನಿರ್ಮಲಾ ರಾಜ್ಯಸಭೆಗೆ: ಬಿಜೆಪಿ ಚಿಂತನೆ?
ಹೌದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಯಾವ ರಾಜ್ಯದಿಂದ ರಾಜ್ಯಸಭೆಗೆ ಮರುಪ್ರವೇಶ ಪಡೆಯಲಿದ್ದಾರೆ ಎಂಬುದು ಕುತೂಹಲಕರವಾಗಿದೆ.
PM Narendra Modi: ಅಭಿವೃದ್ಧಿಗೆ ಯುಪಿಎಗಿಂತ ಮೋದಿ ಸರ್ಕಾರ ದುಪ್ಪಟ್ಟು ವೆಚ್ಚ: ನಿರ್ಮಲಾ ಸೀತಾರಾಮನ್
ಕರ್ನಾಟಕದಿಂದ ಈ ಬಾರಿ ರಾಜ್ಯಸಭೆಗೆ ಎರಡು ಸ್ಥಾನಗಳು ಸುಲಭವಾಗಿ ಲಭ್ಯವಾಗುವುದರಿಂದ ಈ ಎರಡೂ ಸ್ಥಾನಗಳನ್ನು ರಾಜ್ಯದವರಿಗೇ ನೀಡುವ ಮೂಲಕ ನಿರ್ಮಲಾ ಸೀತಾರಾಮನ್ ಅವರನ್ನು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಚರ್ಚೆ ನಡೆದಿದೆ.
ಈ ಎರಡು ಸ್ಥಾನಗಳಿಗಾಗಿ ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚೆ ನಡೆದ ಬಳಿಕ ನಿರ್ಮಲಾ ಸೀತಾರಾಮನ್, ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ವಿಧಾನಪರಿಷತ್ತಿನ ಮಾಜಿ ಸದಸ್ಯ ಲೆಹರ್ ಸಿಂಗ್ ಸಿರೋಯ, ರಾಜ್ಯಸಭೆಯ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ, ಉದ್ಯಮಿ ಪ್ರಕಾಶ್ ಶೆಟ್ಟಿಅವರ ಹೆಸರುಗಳನ್ನು ಕೇಂದ್ರ ಘಟಕಕ್ಕೆ ಶಿಫಾರಸು ಮಾಡಲಾಗಿತ್ತು. ಈ ಪೈಕಿ ಒಂದು ಸ್ಥಾನ ನಿರ್ಮಲಾ ಸೀತಾರಾಮನ್ ಅವರಿಗೆ ಪಕ್ಕಾ ಎನ್ನಲಾಗಿತ್ತು.
ಆದರೆ, ಮುಂದಿನ ವರ್ಷದ ಚುನಾವಣೆಯ ಲೆಕ್ಕಾಚಾರ ಆಧರಿಸಿ ನಿರ್ಮಲಾ ಸೀತಾರಾಮನ್ ಅವರ ಸ್ಥಾನವನ್ನು ಬೇರೊಬ್ಬರಿಗೆ ನೀಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಹೇಗಿದ್ದರೂ ಉತ್ತರ ಪ್ರದೇಶದ ಚುನಾವಣೆ ಇತ್ತೀಚೆಗಷ್ಟೇ ಮುಗಿದಿರುವುದರಿಂದ ಅಲ್ಲಿಂದ ಅವರನ್ನು ರಾಜ್ಯಸಭೆಗೆ ಕಳುಹಿಸುವುದು ಸೂಕ್ತವಾಗಬಹುದು ಎಂಬ ಚಿಂತನೆ ಇದೆ. ಇದುವರೆಗೆ ನಿರ್ಧಾರ ಕೈಗೊಂಡಿಲ್ಲ.
ತೈಲ ಬೆಲೆ ಇಳಿಕೆ ನಷ್ಟ ಹೊಂದಿಸಲು 1 ಲಕ್ಷ ಕೋಟಿ ಸಾಲ?
ರಾಜ್ಯಸಭಾ ಚುನಾವಣೆಗೆ ಮಂಗಳವಾರ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಮೇ 31 ಕೊನೆಯ ದಿನವಾಗಿದೆ. ಹೀಗಾಗಿ, ಈ ಬಗ್ಗೆ 2-3 ದಿನಗಳಲ್ಲಿ ಸ್ಪಷ್ಟಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.
ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನ ಮೂಲದವರಾಗಿದ್ದು, ಅವರ ಪತಿ ಆಂಧ್ರಪ್ರದೇಶದವರಾಗಿದ್ದಾರೆ. ನಿರ್ಮಲಾರ ತಾಯಿಯ ಮನೆ ಬೆಂಗಳೂರಿನಲ್ಲಿದೆ. ಬಿಜೆಪಿ ಏಕೆ ಹೊರರಾಜ್ಯದವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸುತ್ತದೆ ಎಂದು ಕಳೆದ ಬಾರಿ ನಿರ್ಮಲಾರನ್ನು ಆಯ್ಕೆ ಮಾಡಿದಾಗ ವಿರೋಧ ವ್ಯಕ್ತವಾಗಿತ್ತು.
