ಬಂಗಾಳ ಬಿಜೆಪಿಯಲ್ಲಿ ತಳಮಳ; TMC ಭವನದಲ್ಲಿ ಮುಕುಲ್ ರಾಯ್- ಮಮತಾ ಭೇಟಿ!

  • ಟಿಎಂಸಿ ತೊರೆದು ಬಿಜೆಪಿ ಸೇರಿಕೊಂಡಿದ್ದ ಮುಕುಲ್ ರಾಯಲ್ ಘರ್ ವಾಪ್ಸಿ
  • ಮಮತಾ ಭೇಟಿಯಾಗಲು ಟಿಎಂಸಿ ಭವನದಲ್ಲಿ ರಾಯ್ ಹಾಜರ್
  • ಶೀಘ್ರದಲ್ಲೇ ಸುದ್ದಿಗೋಷ್ಟಿ ನಡೆಸಿ ಮಾತೃ ಪಕ್ಷಕ್ಕೆ ಸೇರ್ಪಡೆ ಖಚಿಪಡಿಸುವ ಸಾಧ್ಯತೆ
     
BJP leader Mukul Roy may join back Trinamool Congress meet Mamata banerjee at TMC Bhavav ckm

ಕೋಲ್ಕತಾ(ಜೂ.11): ಪಶ್ಚಿಮ ಬಂಗಾಳ ಚುನಾವಣೆ ಸೋಲು ಬಿಜೆಪಿ ಇನ್ನಿಲ್ಲದ ತಲೆನೋವು ತಂದಿದೆ. ಗೆಲುವಿನ ಭರವಸೆಯೊಂದಿಗೆ ಬಿಜೆಪಿ ಸೇರಿಕೊಂಡಿದ್ದ ಹಲವು ನಾಯಕರು ಇದೀಗ ಮತ್ತೆ ಟಿಎಂಸಿ ಸೇರಿಕೊಳ್ಳುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಪ್ರಭಾವಿ ನಾಯಕ ಮುಕುಲ್ ರಾಯ್ ಮತ್ತೆ ತೃಣಮೂಲಕ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ ದಟ್ಟವಾಗುತ್ತಿದೆ. ಕಾರಣ ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಭೇಟಿಯಾಗಲು ರಾಯ್, ಟಿಎಂಸಿ ಭವನಕ್ಕೆ ಹಾಜರಾಗಿದ್ದಾರೆ.

ಬಿಜೆಪಿಯಿಂದ ಮತ್ತೆ ಮೂಲಪಕ್ಷಕ್ಕೆ ಘರ್‌ವಾಪಸಿ : ಮೋದಿ ದೂರವಾಣಿ ಕರೆ

ಟಿಎಂಸಿ ಭವನದಲ್ಲಿ ಪಕ್ಷದ ಮುಖಂಡರ ಜೊತೆ ಸಭೆ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಶೀಘ್ರದಲ್ಲೇ ಮುಕುಲ್ ರಾಯ್ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಬಳಿಕ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವು ಹಾಗೂ ವಿರೋಧ ಪಕ್ಷದ ಅಧ್ಯಕ್ಷ ಸ್ಥಾನವನ್ನು ಟಿಎಂಸಿಯಿಂದ ಬಿಜೆಪಿಗೆ ಆಗಮಿಸಿದ ಸುವೇಂಧು ಅಧಿಕಾರಿಗೆ ನೀಡಲಾಗಿದೆ. ಇದರಿಂದ ಅಸಮಾಧಾನಗೊಂಡ ಮುಕುಲ್ ರಾಯ್ ಮತ್ತೆ ಟಿಎಂಸಿಗೆ ವಾಪಸ್ ಮರಳಲು ಇಚ್ಚಿಸಿದ್ದರು.

ದೀದಿ ಸೋದ​ರ​ಳಿಯಗೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಟ್ಟ!.

ಮಮತಾ ಬ್ಯಾನರ್ಜಿ ಸಂಬಂಧಿ, ಟಿಎಂಸಿ ಪ್ರಮುಖ ನಾಯಕ ಅಭಿಷೇಕ್ ಬ್ಯಾನರ್ಜಿ ಅನಾರೋಗ್ಯ ಕಾರಣ ಆಸ್ಪತ್ರೆ ದಾಖಲಾದ ವೇಳೆ ಮುಕುಲ್ ರಾಯ್ ಭೇಟಿ ನೀಡಿದ್ದರು. ಇದರೊಂದಿಗೆ ರಾಯ್ ಬಿಜೆಪಿ ತೊರೆದು ಟಿಎಂಸಿಗೆ ವಾಪಸ್ ಕುರಿತು ಚರ್ಚೆಗಳು ತೀವ್ರಗೊಂಡಿತ್ತು. ಇದೀಗ ಟಿಎಂಸಿ ಭವನಕ್ಕೆ ತೆರಳಿ, ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ಮುಂದಾಗಿರುವುದು ಈ ಎಲ್ಲಾ ಬೆಳವಣಿಗೆಗಳನ್ನು ಪುಷ್ಠೀಕರಿಸುತ್ತಿದೆ.

Latest Videos
Follow Us:
Download App:
  • android
  • ios