ದೀದಿ ಸೋದ​ರ​ಳಿಯಗೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಪಟ್ಟ!

* ಅಭಿಷೇಕ್‌ ಬ್ಯಾನರ್ಜಿಗೆ ಮಹತ್ವದ ಹುದ್ದೆ

* ದೀದಿ ಸೋದ​ರ​ಳಿಯಗೆ ಟಿಎಂಸಿ ಪ್ರಧಾನ ಕಾರ‍್ಯದರ್ಶಿ ಪಟ್ಟ

* ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅಭಿಷೇಕ್‌ರನ್ನು ನಂ.2 ನಾಯಕ ಎಂದು ಬಿಜೆಪಿಗರ ಟೀಕೆ

Abhishek Banerjee Mamata Banerjee Nephew Gets Key Role In Party Changes pod

ಕೋಲ್ಕ​ತಾ(ಜೂ.07): ಪಶ್ಚಿಮ ಬಂಗಾ​ಳದ ಮುಖ್ಯ​ಮಂತ್ರಿ ಹಾಗೂ ಟಿಎಂಸಿ ಅಧಿ​ನಾ​ಯಕಿ ಮಮ​ತಾ ಬ್ಯಾನರ್ಜಿ ಅವರು ತಮ್ಮ ಸೋದ​ರ ಅಳಿಯ ಅಭಿ​ಷೇಕ್‌ ಬ್ಯಾನರ್ಜಿ ಅವ​ರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ​ದ​ರ್ಶಿ​ಯಂಥ ಮಹ​ತ್ವದ ಹುದ್ದೆ​ಯನ್ನು ಕರು​ಣಿ​ಸಿ​ದ್ದಾರೆ.

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಅಭಿಷೇಕ್‌ರನ್ನು ನಂ.2 ನಾಯಕ ಎಂದು ಬಿಜೆಪಿಗರು ಟೀಕಿಸುತ್ತಿದ್ದರು. ಅದು ಈಗ ನಿಜ ಆದಂತಾಗಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ,

ಈ ಬಗ್ಗೆ ಶನಿ​ವಾರ ಸುದ್ದಿ​ಗೋ​ಷ್ಠಿ​ಯ​ನ್ನು​ದ್ದೇ​ಶಿಸಿ ಮಾತ​ನಾ​ಡಿದ ಪಕ್ಷದ ಹಿರಿಯ ನಾಯಕ ಪಾರ್ಥ ಚಟರ್ಜಿ ಅವರು, ‘ಡೈಮಂಡ್‌ ಹಾರ್ಬರ್‌ ಕ್ಷೇತ್ರದ ಸಂಸದ ಹಾಗೂ ತಮ್ಮ ಸೋದರ ಅಳಿ​ಯ ಅಭಿ​ಷೇಕ್‌ ಬ್ಯಾನರ್ಜಿ ಅವ​ರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯ​ದರ್ಶಿ ಸ್ಥಾನಕ್ಕೆ ನಾಮ ನಿರ್ದೇ​ಶನ ಮಾಡಿ​ದ್ದಾರೆ. ಜೊತೆಗೆ ಪಕ್ಷ​ದಲ್ಲಿ ಒಬ್ಬ​ರಿಗೆ ಒಂದೇ ಹುದ್ದೆ ಎಂಬ ನಿಯಮ ಜಾರಿಗೆ ತರಲು ಪಕ್ಷದ ಕೋರ್‌ ಕಮಿಟಿ ನಿರ್ಧ​ರಿ​ಸಿ​ದೆ’ ಎಂದು ಹೇಳಿದ್ದಾರೆ.

ಇನ್ನು ಸಿನಿಮಾ ನಟ ಹಾಗೂ ಟಿಎಂಸಿ ಮುಖಂಡ ಸಯೋನಿ ಘೋಷ್‌ ಅವ​ರನ್ನು ಪಕ್ಷದ ಯುವ ಘಟ​ಕದ ಅಧ್ಯ​ಕ್ಷ​ರ​ನ್ನಾಗಿ ಆಯ್ಕೆ ಮಾಡ​ಲಾ​ಗಿದೆ. ಆದಾಗ್ಯೂ, ಪಶ್ಚಿಮ ಬಂಗಾಳ ವಿಧಾ​ನ​ಸಭೆ ಚುನಾ​ವಣಾ ಪೂರ್ವ​ದಲ್ಲಿ ಟಿಎಂಸಿ​ಯಿಂದ ಬಿಜೆ​ಪಿಗೆ ಜಿಗಿದ ಹಾಗೂ ಇದೀಗ ಪಕ್ಷಕ್ಕೆ ಮರ​ಳಲು ಕಾತ​ರ​ರಾ​ಗಿ​ರುವ ಬಿಜೆಪಿ ನಾಯ​ಕ​ರನ್ನು ಪುನಃ ಪಕ್ಷಕ್ಕೆ ಸೇರಿ​ಸಿ​ಕೊ​ಳ್ಳ​ಬೇ​ಕೇ ಎಂಬ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಪಾರ್ಥ ಚಟರ್ಜಿ ಖಚಿ​ತ​ಪ​ಡಿ​ಸಿ​ದರು.

Latest Videos
Follow Us:
Download App:
  • android
  • ios