ಬಿಜೆಪಿ ನಾಯಕಿ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅಸ್ವಸ್ಥರಾಗಿದ್ದು, ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭೋಪಾಲ್‌: ಬಿಜೆಪಿ ನಾಯಕಿ, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅಸ್ವಸ್ಥರಾಗಿದ್ದು, ಶನಿವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಏಕಾಏಕಿ ನಾನು ಅಸ್ವಸ್ಥಳಾಗಿದ್ದು, ಸ್ಮಾರ್ಟ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಾನು ಈಗ ಸುಧಾರಿಸಿಕೊಂಡಿದ್ದೇನೆ. ಆದರೆ ನನಗೆ ಹಲವು ತಿಂಗಳ ವಿಶ್ರಾಂತಿ ಸೂಚಿಸಲಾಗಿದೆ’ ಎಂದು ಉಮಾ ಟ್ವೀಟ್‌ ಮಾಡಿದ್ದಾರೆ. ಇದಲ್ಲದೇ, ‘55 ವರ್ಷ ನಾನು ಜನಸೇವೆ ಮಾಡಿದ್ದೇನೆ. ನನ್ನನ್ನು ಮರೆಯಬೇಡಿ’ ಎಂದು ಜನತೆಗೆ ಕೋರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಒಂದು ಕಾಲದ ಬಿಜೆಪಿಯ ‘ಬೆಂಕಿಯ ಚೆಂಡು’ ಉಮಾ ಭಾರತಿ ತಮ್ಮ ಹೆಸರನ್ನು ‘ದೀದಿ ಮಾ’ ಎಂದು ಬದಲಿಸಿಕೊಂಡು ಸಾಂಸಾರಿಕ ಬದುಕನ್ನು ತ್ಯಜಿಸಲಿದ್ದಾರೆ. ನ.17ರಿಂದ (ಕಳೆದ ವರ್ಷ) ತಮ್ಮ ಹೆಸರು ‘ದೀದಿ ಮಾ’ ಎಂದು ಬದಲಾಗಲಿದೆ ಹಾಗೂ ಕುಟುಂಬದ ಜೊತೆಗಿನ ಎಲ್ಲಾ ನಂಟು ಕಡಿದುಕೊಂಡು ಜಗತ್ತನ್ನೇ ತಮ್ಮ ಕುಟುಂಬವನ್ನಾಗಿ ಮಾಡಿಕೊಳ್ಳುವುದಾಗಿ ಅವರು ಪ್ರಕಟಿಸಿದ್ದಾರೆ ಎಂದು ಈ ಹಿಂದೆ ವರದಿ ಆಗಿತ್ತು.

Dharam Singh: ಉಮಾ ಭಾರತಿಗಾಗಿ ವಿಶ್ವವಿದ್ಯಾಲಯವೇ ಜೈಲಾದ ಕತೆ: ಡಾ.ಡಿ.ವಿ.ಗುರುಪ್ರಸಾದ್‌

ಸಾಮಾಜಿಕ ಜಾಲತಾಣದಲ್ಲಿ(Social Media) ಈ ಬಗ್ಗೆ 17 ಪೋಸ್ಟ್‌ಗಳನ್ನು ಬರೆದಿರುವ ಉಮಾ ಭಾರತಿ, ಕರ್ನಾಟಕದಲ್ಲಿ(Karnataka) ಜನಿಸಿದ (ಈಗ ಬುಂದೇಲ್‌ಖಂಡದಲ್ಲಿದ್ದಾರೆ) ತಮ್ಮ ಗುರು ಜೈನ ಮುನಿ (Jain saint) ಆಚಾರ್ಯ ಶ್ರೀ ವಿದ್ಯಾಸಾಗರ ಜೀ ಮಹಾರಾಜ್‌ (Vidyasagar Ji maharaj) ಅವರ ಆದೇಶದಂತೆ ತಾವು ಸ್ವಂತ ಹೆಸರು ಹಾಗೂ ಕುಟುಂಬವನ್ನು ತ್ಯಜಿಸುತ್ತಿರುವುದಾಗಿ ಹೇಳಿಕೊಂಡಿದ್ದರು. 

ಉಮಾ ಭಾರತಿ (Uma Bharathi) 30 ವರ್ಷಗಳ ಹಿಂದೆ ಉಡುಪಿಯ ಪೇಜಾವರ ಮಠದ (Pejawara Mutt) ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಸನ್ಯಾಸ ದೀಕ್ಷೆ (sanyasa Deeksha) ಪಡೆದಿದ್ದರು. ಅದಕ್ಕೂ ಮೊದಲು 1997ರಲ್ಲಿ ಆನಂದಮಯಿ ಮಾ (Anandamayi ma) ಅವರಿಂದ ಬ್ರಹ್ಮಚರ್ಯ ದೀಕ್ಷೆ (Brahmacharya Deeksha) ಪಡೆದಿದ್ದರು. ನಂತರ ಮಧ್ಯಪ್ರದೇಶದ (Madhya Pradesh CM) ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವೆಯಾಗಿ ಸುದೀರ್ಘ ರಾಜಕಾರಣ ಮಾಡಿದ್ದರು.

ನೂಪುರ್ ಮೇಲೆ ಕ್ರಮ ಕೈಗೊಂಡಿದ್ದು ಸರಿ, ಈಗ ಆಕೆಯ ಭದ್ರತೆಯ ಬಗ್ಗೆ ಗಮನ ನೀಡಿ : ಉಮಾಭಾರತಿ