ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್, ಜಿಲ್ಲಾ ಪಂಚಾಯತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 31 ಸ್ಥಾನ ಗೆದ್ದು ಅಧಿಪತ್ಯ ಸಾಧಿಸಿದೆ. 

ಗೋವಾ (ಡಿ.22) ದೇಶದ ಹಲೆವೆಡೆ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರಬಂದಿದೆ. ಇದೀಗ ಮಹಾರಾಷ್ಟ್ರ, ಅರುಣಾಚಲ ಪ್ರದೇಶ ಬಳಿಕ ಗೋವಾದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದೆ. ಡಿಸೆಂಬರ್ 20 ರಂದು ಗೋವಾ ಜಿಲ್ಲಾ ಪಂಚಾಯತ್ ಸ್ಥಾನಗಳಿಗೆ ಚನಾವಣೆ ನಡೆದಿತ್ತು. ಇಂದು ಮತ ಎಣಿಕೆ ನಡೆದಿದು ಫಲಿತಾಶ ಹೊರಬಿದ್ದಿದೆ. 50 ಸ್ಥಾನಗಳ ಪೈಕಿ 31ರಲ್ಲಿ ಬಿಜಿಪಿ ಗೆಲುವು ದಾಖಲಿಸಿದೆ. ಇನ್ನು ಕಾಂಗ್ರೆಸ್ 10 ಸ್ಥಾನದಲ್ಲಿ ಗೆಲುವು ಕಂಡಿದೆ.

ಗೋವಾ ಜನತೆಗೆ ಪ್ರಧಾನಿ ಮೋದಿ ಧನ್ಯವಾದ

ಗೋವಾ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ. ಜನತೆ ಬಿಜೆಪಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ಗೋವಾದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಿದ ಬಿಜೆಪಿ ಪಕ್ಷದ ಕಾರ್ಯಕರ್ತರು, ನಾಯಕರು ಹಾಗೂ ಗೋವಾ ಜನತೆಗೆ ಧನ್ಯವಾದ. ಗೋವಾ ಜನತೆ ಉತ್ತಮ ಆಡಳಿತದ ಜೊತೆ ನಿಂತಿದೆ. ಗೋವಾ ಜನತೆ ಅಭಿವೃದ್ಧಿಯ ರಾಜಕೀಯಕ್ಕೆ ಮತ ನೀಡಿದ್ದಾರೆ ಎಂದು ಮೋದಿ ಎಕ್ಸ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಬಿಜೆಪಿ ಮೈತ್ರಿ ಪಕ್ಷಕ್ಕೆ 3 ಸ್ಥಾನ

ಗೋವಾ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ 31 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇತ್ತ ಬಿಜೆಪಿ ಮೈತ್ರಿ ಪಕ್ಷವಾಗಿರುವ ಮಹಾರಾಷ್ಟ್ರವಾದಿ ಗೊಮಂಟಕ್ ಪಾರ್ಟಿ 3 ಸ್ಥಾನ ಗೆದ್ದುಕೊಂಡಿದೆ. ಇನ್ನು 10 ಸ್ಥಾನ ಕಾಂಗ್ರೆಸ್ ಗೆದ್ದುಕೊಂಡರೆ, ಕಾಂಗ್ರೆಸ್ ಮೈತ್ರಿ ಪಕ್ಷ ಗೋವಾ ಫಾರ್ವಡ್ ಪಾರ್ಟಿ ಒಂದು ಸ್ಥಾನ ಗೆದ್ದುಕೊಂಡಿದೆ. 4 ಸ್ಥಾನ ಪಕ್ಷೇತರರು ಹಾಗೂ ಇತರರು ಗೆದ್ದುಕೊಂಡಿದ್ದಾರೆ.

ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಧನ್ಯವಾದ

ಗೋವಾದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಮುಖ್ಯಂತ್ರಿ ಪ್ರಮೋದ್ ಸಾವಂತ್ ಜನತೆಗೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಪಕ್ಷದ ಕಾರ್ಯಕರ್ತರು, ನಾಯಕರು, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಹೈಕಮಾಂಡ್ ನೆರವಿಗೆ ಧನ್ಯವಾದ ಹೇಳಿದ್ದಾರೆ. ಗೋವಾ ಜನತೆ ಉತ್ತಮ ಆಡಳಿತ ಬಯಸುತ್ತಾರೆ ಅನ್ನೋದಕ್ಕೆ ಇದು ನಿರ್ದಶನ ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ. ಇದೇ ವೇಳೆ ಗೋವಾ ಬಿಜೆಪಿ ಅಧ್ಯಶ್ರ ದಾಮೋದರ್ ನಾಯಕ್ ಗೆಲುವಿಗೆ ಸಂತಸ ವ್ಯಕ್ತಪಡಿಸಿದ್ದಾರೆ.ಅಭಿವೃದ್ಧಿ, ಜನರಿಗೆ ಮೂಲಭೂತ ಸೌಕರ್ಯ ಒದಗಿಸುವುದು, ಉತ್ತಮ ಜೀವನಕ್ಕೆ ದಾರಿ ಮಾಡಿಕೊಡುವುದರ ಮೂಲಕ ಬಿಜೆಪಿ ಗೋವಾ ಜನತೆಗೆ ಏಕೈಕ ಆಯ್ಕೆಯಾಗಿದೆ ಅನ್ನೋದು ಈ ಚುನಾವಣೆ ಸಾಬೀತು ಮಾಡಿದೆ. ಕಾಂಗ್ರೆಸ್ ನಾಯಕರು ಬಿಜೆಪಿ ಇವಿಎಂ ಮೂಲಕ ಗೆಲ್ಲುತ್ತಿದೆ ಎಂದು ಹೇಳಿದ್ದರು. ಗೋವಾ ಜಿಲ್ಲಾ ಪಂಚಾಯತ್ ಚುನಾವಣೆ ಕಾಂಗ್ರೆಸ್ ಆರೋಪಗಳಿಗೆ ಉತ್ತರ ನೀಡಿದೆ ಎಂದು ದಾಮೋದರ್ ನಾಯಕ್ ಹೇಳಿದ್ದಾರೆ.