ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ 170 ಸ್ಥಾನದ ಭರ್ಜರಿ ಗೆಲುವು, 7ಕ್ಕೆ ಕುಸಿದ ಕಾಂಗ್ರೆಸ್, ಮಹಾರಾಷ್ಟ್ರದ ಬೆನ್ನಲ್ಲೇ ಅರುಣಾಚಲ ಪ್ರದೇಶದಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವು ಕಂಡಿದೆ. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ.
ಅರುಣಾಚಲ ಪ್ರದೇಶ (ಡಿ.22) ದೇಶದ ಹಲೆವೆಡೆ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿದೆ. ಫಲಿತಾಂಶಗಳು ಒಂದೊಂದಾಗಿ ಘೋಷಣೆಯಾಗುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆಲುವಿನ ನಗೆ ಬೀರಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿದೆ. ಇದೀಗ ಅರುಣಾಚಲ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಭಾರಿಸಿದೆ. ಡಿಸೆಂಬರ್ 15ಕ್ಕೆ ನಡೆದ ಜಿಲ್ಲಾ ಪರಿಷತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಈ ಬೈಕಿ 245 ಜಿಲ್ಲಾ ಪರಿಷತ್ ಸ್ಥಾನದ ಬೈಕಿ 170 ಸ್ಥಾನ ಬಿಜೆಪಿ ಗೆದ್ದುಕೊಂಡಿದೆ. ಇತ್ತ ಕಾಂಗ್ರೆಸ್ ಕೇವಲ 7 ಸ್ಥಾನಕ್ಕೆ ಕುಸಿತ ತಂಡಿದೆ. ಇನ್ನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ 8208 ಸ್ಥಾನ ಪೈಕಿ 6,085 ಸ್ಥಾನ ಗೆದ್ದು ಸಂಭ್ರಮಾಚರಣೆ ಮಾಡಿದೆ.
ಜನತೆಗೆ ಮುಖ್ಯಮಂತ್ರಿ ಅಭಿನಂದನೆ
ಮುಖ್ಯಮಂತ್ರಿ ಪೆಮಾ ಖಂಡು ಅಭೂತಪೂರ್ವ ಗೆಲುವಿಗೆ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಚುನಾವಣಾ ಆಯೋಗದ ಫಲಿತಾಂಶದ ಪ್ರಕಾರ ಅರುಣಾಚಲ ಪ್ರದೇಶ ಜಿಲ್ಲಾ ಪರಿಷತ್ ಚುನಾವಣೆ ಫಲಿತಾಂಶದಲ್ಲಿ 245 ಸ್ಥಾನಗಳ ಬಿಜೆಪಿ 170 ಸ್ಥಾನ ಗೆದ್ದಿದೆ. ಇನ್ನು ಪೀಪಲ್ ಪಾರ್ಟಿ ಅರುಣಾಚಲ ಪ್ರದೇಶ (ಪಿಪಿಎ) 28 ಸ್ಥಾನ ಗೆದ್ದುಕೊಂಡಿದೆ. ತ್ತ ಕಾಂಗ್ರೆಸ್ ಕೇವಲ 7 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಾಂಗ್ರೆಸ್‌ಗೆ ಮೆಘಾಲಯದ ಮುಖ್ಯಮಂತ್ರಿ ಕೋನಾರ್ಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಠಕ್ಕರ್ ಕೊಟ್ಟಿದೆ. ನ್ಯಾಷನಲ್ ಪೀಪಲ್ಸ್ ಪಾರ್ಟಿ ಅರುಣಾಚಲ ಪ್ರದೇಶ ಸ್ಥಳೀಯ ಚುನಾವಣೆಯಲ್ಲಿ 5 ಸ್ಥಾನ ಗೆದ್ದುಕೊಂಡಿದೆ.
ಗ್ರಾಮ ಪಂಚಾಯತಿಯಲ್ಲೂ ಬಿಜೆಪಿ ಕ್ಲೀನ್ ಸ್ವೀಪ್
ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವು ಕಂಡಿದೆ. 8,208 ಸ್ಥಾನಗಳ ಪೈಕಿ ಬಿಜೆಪಿ 6,085 ಸ್ಥಾನ ಗೆದ್ದುಕೊಂಡಿದೆ. ಇನ್ನು ಪಿಪಿಎ ಪಾರ್ಟಿ 648 ಸ್ಥಾನ ಗೆದ್ದುಕೊಂಡಿದೆ. ಪಕ್ಷೇತರರು 627 ಸ್ಥಾನ ಗೆದ್ದುಕೊಂಡಿದೆ. ಕಾಂಗ್ರೆಸ್ 216 ಸ್ಥಾನ ಗೆದ್ದುಕೊಂಡಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) 396 ಸ್ಥಾನ ಗೆದ್ದುಕೊಂಡಿದೆ. ಇನ್ನು ಎನ್‌ಪಿಪಿ 160 ಸ್ಥಾನ, ಲೋಕ ಜನಶಕ್ತಿ ಪಾರ್ಟಿ 27 ಸ್ಥಾನ, ಆಮ್ ಆದ್ಮಿ ಪಾರ್ಟಿ 1 ಸ್ಥಾನ ಗೆದ್ದುಕೊಂಡಿದೆ.
ಮಹಾರಾಷ್ಟ್ರದಲ್ಲೂ ಬಿಜೆಪಿ ಕ್ಲೀನ್ ಸ್ವೀಪ್
ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ 207 ಸ್ಥಾನ ಗೆದ್ದುಕೊಂಡಿದೆ. ಒಟ್ಟು 288 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 117 ಸ್ಥಾನ ಗೆದ್ದುಕೊಂಡಿದೆ. ಇನ್ನು ಏಕನಾಥ್ ಶಿಂಧೆ ಬಣದ ಶಿವಸೇನೆ 53 ಸ್ಥಾನ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 37 ಸ್ಥಾನ ಗೆದ್ದುಕೊಂಡಿದೆ. ಇತ್ತ ಮಹಾ ವಿಕಾಸ್ ಅಘಾಡಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ 28, ಉದ್ಧವ್ ಠಾಕ್ರೆ ನೇತೃತ್ವದ ಶಿವ ಸೇನೆ 9 ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ 7 ಸ್ಥಾನ ಗೆದ್ದುಕೊಂಡಿದೆ.


