ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭದ ದಿನ ಮತ್ತೆ ಬರುತ್ತೇನೆ ಎಂದಿದ್ದ ಮೋದಿ!

ರಾಮ ಮಂದಿರ ನಿರ್ಮಿಸುವ ದಿನ ಮತ್ತೆ ಬರುತ್ತೇನೆ| 29 ವರ್ಷ ಹಿಂದೆ ಮೋದಿ ಹೇಳಿದ್ದ ಮಾತು ಮತ್ತೆ ವೈರಲ್| ಮಾಹಿತಿ ಹಂಚಿಕೊಂಡ ಫೋಟೋಗ್ರಾಫರ್

Narendra Modi Modi kept 1991 vow to return and build temple says photographer

ನವದೆಹಲಿ(ಜು.30): ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 5 ರಂದು ರಾಮ ಮಂದಿರದ ಭೂಮಿ ಪೂಜೆ ನಡೆಸಲು ಅಯೋಧ್ಯೆಗೆ ತೆರಳಲಿದ್ದಾರೆ. ಈ ಮೂಲಕ ತಿಳಿದೋ, ತಿಳಿಯದೆಯೋ ತನ್ನೊಂದಿಗೇ ಮಾಡಿದ ಪ್ರತಿಜ್ಞೆಯನ್ನೂ ಪೂರ್ಣಗೊಳಿಸುತ್ತಿದ್ದಾರೆ. 

ಹೌದು ಸರಿಯಾಗಿ 29 ವರ್ಷ ಮೊದಲು ರಾಮ ಮಂದಿರ ಆಂದೋಲನದ ವೇಳೆ 1991ರಲ್ಲಿ ಮೋದಿ ಫೋಟೋಗ್ರಾಫರ್ ಒಬ್ಬರ ಜೊತೆಗೆ ಮಾತನಾಡುತ್ತಾ ಯಾವ ದಿನ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತೋ ಅಂದು ನಾನು ಮತ್ತೆ ಬರುತ್ತೇನೆ ಎಂದಿದ್ದರು. ಈ ವಿಚಾರವನ್ನು ಸದ್ಯ ಸೋಶಿಯಲ್ ಮೀಡಿಯಾದಲ್ಲಿ 1991 ರಲ್ಲಿ ತೆಗೆದ ಮೋದಿ ಹಾಗೂ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿಯವರ ಫೋಟೋ ಕ್ಲಿಕ್ಕಿಸಿದ ಫೋಟೋಗ್ರಾಫರ್ ಮಹೇಂದ್ರ ತ್ರಿಪಾಠಿ ಬಹಿರಂಗಪಡಿಸಿದ್ದಾರೆ.

ಅಯೋಧ್ಯೆ ಟ್ರಸ್ಟ್‌ಗೆ ಚಿನ್ನ, ಬೆಳ್ಳಿ ದಾನ: ಲೋಹ ಬೇಡ ಹಣ ನೀಡಿ ಎಂದು ಮನವಿ!

ಜೋಶಿ ಜೊತೆ 1991ರಲ್ಲಿ ಅಯೋಧ್ಯೆಗೆ ಹೋಗಿದ್ದ ಮೋದಿ

ರಾಮ ಜನ್ಮ ಭೂಮಿ ಬಳಿ ಫೋಟೋ ಸ್ಟುಡಿಯೋ ಹೊಂದಿರುವ ಮಹೇಂದ್ರ ತ್ರಿಪಾಟಿ ಟೈಮ್ಸ್ ಆಫ್‌ ಇಂಡಿಯಾ ಜೊತೆ ಮಾತನಾಡುತ್ತಾ ವೈರಲ್ ಆಗುತ್ತಿರುವ ಫೋಟೋವನ್ನು ತಾವೇ 1991 ರ್ಲಿ ಕ್ಲಿಕ್ಕಿಸಿರುವುದಾಗಿ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ತಾನು ಪಿಎಂ ಮೋದಿಯನ್ನೂ ಮಾತನಾಡಿಸಿದ್ದೆ. ಅಂದು ಮೋದಿ ಹಾಗೂ ಜೋಶಿಯವರು ಅಯೋಧ್ಯೆಯ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಿದ್ದರು ಎಂದಿದ್ದಾರೆ.

ಮೋದಿಯನ್ನು ಪರಿಚಯಿಸಿದ್ದ ಜೋಶಿ

ಅಂದು ತಾನು ಅಯೋಧ್ಯೆಯಲ್ಲಿದ್ದ ಏಕಮಾತ್ರ ಫೋಟೋಗ್ರಾಫರ್ ಆಗಿದ್ದು, ವಿಎಚ್‌ಪಿ ಜೊತೆ ನನಗೆ ಸಂಪರ್ಕವಿತ್ತು. ಈಗಿರುವಾಗ ನಾನು ಈ ಫೋಟೋ ಕ್ಲಿಕ್ಕಿಸಿದ್ದೆ. ಅಂದು ಮೋದಿಯವರನ್ನು ಗುಜರಾತ್‌ ರಾಜಕಾರಣಿ ಎಂದು ಜೋಶಿಯವರು ಮಾಧ್ಯಮಗಳಿಗೆ ಪರಿಚಯಿಸಿದ್ದರು ಎಂದಿದ್ದಾರೆ.

22 ಕೇಜಿ ಬೆಳ್ಳಿ ಇಟ್ಟಿಗೆ ಇಟ್ಟು ಮಂದಿರಕ್ಕೆ ಆ.5ರಂದು ಮೋದಿ ಶಂಕು!

ಯಾವ ದಿನ ಮಂದಿರ ಕಾರ್ಯ ಆರಂಭವಾಗುತ್ತದೋ..

ಈ ವೇಳೆ ತ್ರಿಪಾಠಿ ಹಾಗೂ ಸ್ಥಲೀಯ ಪತ್ರಕರ್ತರು ಮೋದಿಯವರನ್ನು ಮಾತನಾಡಿಸುತ್ತಾ ಮತ್ತೆ ಯಾವಾಗ ಇಲ್ಲಿಗೆ ಬರುತ್ತೀರೆಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಮೋದಿ ಯಾವ ದಿನ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತದೋ ಅಂದು ಮರಳಿ ಬರುತ್ತೇನೆ ಎಂದಿದ್ದರು. ಇನ್ನು ಸುಪ್ರೀಂ ತೀರ್ಪಿನ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯದ ಹಾದಿ ಸುಗಮವಾಗಿದ್ದು, ಖುದ್ದು ಪ್ರಧಾನಿ ಮೋದಿಯೇ ಭೂಮಿ ಪೂಜೆಗೆ ಆಗಮಿಸುತ್ತಿರುವುದು ಕಾಕತಾಳಿಯವೇ ಸರಿ.

Latest Videos
Follow Us:
Download App:
  • android
  • ios