ನಟಿ ಖುಷ್ಬೂ, ಕರ್ನಾಟಕದ ನಿವೃತ್ತ ಐಪಿಎಸ್‌ ಅಣ್ಣಾಮಲೈಗೆ ಬಿಜೆಪಿ ಟಿಕೆಟ್‌| ಥೌಸಂಡ್‌ ಲೈಟ್ಸ್‌ನಿಂದ ಖುಷ್ಬೂ ಸ್ಪರ್ಧೆ| ಅರವಿಕುರಿಚಿಯಿಂದ ಅಣ್ಣಾಮಲೈ ಕಣಕ್ಕೆ

ಚೆನ್ನೈ(ಮಾ.15): ಕುತೂಹಲ ಕೆರಳಿಸಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಟಾರ್‌ ಅಭ್ಯರ್ಥಿಗಳ ಘೋಷಣೆ ಮಾಡಿದೆ. ನಟಿ ಖುಷ್ಬೂ, ಕರ್ನಾಟಕ ಕೇಡರ್‌ ನಿವೃತ್ತ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಸೇರಿದಂತೆ ಹಲವರು ಟಿಕೆಟ್‌ ಗಿಟ್ಟಿಸಿದ್ದಾರೆ.

20 ಸ್ಥಾನಗಳ ಅಭ್ಯರ್ಥಿ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ನಟಿ ಖುಷ್ಬೂ ಸುಂದರ್‌ ಚೆನ್ನೈನ ‘ಥೌಸಂಡ್‌ ಲೈಟ್ಸ್‌’ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಕೆ. ಅಣ್ಣಾಮಲೈ ಅವರು ಅರವಿಕುರಿಚಿಯಿಂದ ಚುನಾವಣಾ ಕಣಕ್ಕೆ ಪದಾರ್ಪಣೆ ಮಾಡಲಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್‌. ಮುರುಗನ್‌ ಧಾರಾಪುರಂನಿಂದ, ಎಚ್‌.ರಾಜಾ ಕಾರೈಕುಡಿಯಿಂದ ಸ್ಪರ್ಧಿಸಲಿದ್ದಾರೆ. ನಟ ಕಮಲ್‌ಹಾಸನ್‌ ಸ್ಪರ್ಧಿಸಿರುವ ಕೊಯಮತ್ತೂರು ದಕ್ಷಿಣದಿಂದ ವನಂತಿ ಶ್ರೀನಿವಾಸನ್‌ಗೆ ಟಿಕೆಟ್‌ ದೊರೆತಿದೆ.