ಮುಸ್ಲಿಂ ಅಗಸರಿಗೆ ಮಾತ್ರ ಉಚಿತ ವಿದ್ಯುತ್: ಕೆಸಿಆರ್ ವಿರುದ್ಧ ಬಿಜೆಪಿ ಕಿಡಿ
ತೆಲಂಗಾಣದ ಬಿಆರ್‌ಎಸ್ ಸರ್ಕಾರ, ಮುಸ್ಲಿಂ ಅಗಸರು ಹಾಗೂ ಇಸ್ತ್ರಿ ಅಂಗಡಿಯವರಿಗೆ ಮಾಸಿಕ 250 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿರುವುದನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.

ಹೈದರಾಬಾದ್: ತೆಲಂಗಾಣದ ಬಿಆರ್‌ಎಸ್ ಸರ್ಕಾರ, ಮುಸ್ಲಿಂ ಅಗಸರು ಹಾಗೂ ಇಸ್ತ್ರಿ ಅಂಗಡಿಯವರಿಗೆ ಮಾಸಿಕ 250 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿರುವುದನ್ನು ಬಿಜೆಪಿ ಕಟುವಾಗಿ ಟೀಕಿಸಿದೆ. ಈ ಕುರಿತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (Chandrashekar Rao) ವಿರುದ್ಧ ಆಕ್ರೋಶ ಹೊರಹಾಕಿರುವ ಬಿಜೆಪಿಯ ಬಂಡಿ ಸಂಜಯ್ ರೆಡ್ಡಿ, ಕೆಸಿಆರ್ (KCR) ತೆಲಂಗಾಣದ ನೂತನ ನಿಜಾಮರಂತೆ ವರ್ತಿಸುತ್ತಿದ್ದಾರೆ. ಸರ್ಕಾರದ ನಿರ್ಧಾರದಿಂದಾಗಿ ರಜಾಕರನ್ನು ಉದ್ಯೋಗ ರಹಿತರನ್ನಾಗಿ ಮಾಡಲಾಗುತ್ತಿದೆ. ಇದು ವಂಶಪಾರಂಪರ್ಯವಾಗಿ ಬೆಳೆದುಕೊಂಡು ಬಂದಿರುವ ಕಸುಬನ್ನು ಕಿತ್ತೊಗೆಯುತ್ತದೆ. ಈ ಕ್ರಮದ ಮೂಲಕ ಕೆಸಿಆರ್ ಎಂಐಎಂ (MIM) ಪಕ್ಷ ಹಾಗೂ ಅದರ ಅಧ್ಯಕ್ಷ ಓವೈಸಿಯ ಮನವೊಲಿಸಲು ಮುಂದಾಗಿದ’ ಎಂದು ಕಿಡಿಕಾರಿದರು.
ವಿಶ್ವಸಂಸ್ಥೆ: ಮತ್ತೆ ಕಾಶ್ಮೀರ ವಿಷಯ ಪ್ರಸ್ತಾಪಿಸಿ ಟರ್ಕಿ ಅಧ್ಯಕ್ಷ ಎರ್ಡೋಗನ್ ಕ್ಯಾತೆ
ವಿಶ್ವಸಂಸ್ಥೆ: ವಿಶ್ವ ಸಂಸ್ಥೆಯ 78ನೇ ಸಾಮಾನ್ಯ ಸಭೆಯಲ್ಲಿ ಟರ್ಕಿ ಅಧ್ಯಕ್ಷ (Turkish President) ತಯ್ಯಿಪ್ ಎರ್ಡೋಗನ್ (Tayyip Erdogan) ಜಮ್ಮು ಕಾಶ್ಮೀರ ವಿಷಯ ಪ್ರಸ್ತಾಪಿಸಿ ಖ್ಯಾತೆ ತೆಗೆದಿದ್ದಾರೆ. ವಿಶ್ವನಾಯಕರನ್ನುದ್ದೇಶಿಸಿ ಮಾತನಾಡುವ ವೇಳೆ,‘ದಕ್ಷಿಣ ಏಷ್ಯಾದಲ್ಲಿ ಪ್ರಾದೇಶಿಕ ಶಾಂತಿ ಸ್ಥಿರತೆ ಹಾಗೂ ಸಮೃದ್ಧಿ ಸ್ಥಾಪನೆಯಾಗಬೇಕಿದ್ದರೆ ಅದು ಜಮ್ಮು ಕಾಶ್ಮೀರದ (Jammu and Kashmir)ವಿಷಯದಲ್ಲಿ ಭಾರತ ಹಾಗೂ ಪಾಕಿಸ್ತಾನಗಳು ಮಾತುಕತೆ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ಕ್ರಮಕ್ಕೆ ಟರ್ಕಿ ಸದಾ ತನ್ನ ಬೆಂಬಲವನ್ನು ನೀಡುತ್ತದೆ’ ಎಂದು ಹೇಳಿದ್ದಾರೆ. ಎರ್ಡೋಗನ್ ಪ್ರತಿ ವರ್ಷ ವಿಶ್ವಸಂಸ್ಥೆಯಲ್ಲಿ ಜಮ್ಮು ಕಾಶ್ಮೀರದ ವಿಷಯ ತೆಗೆದು ಪಾಕ್ ಪರ ಮಾತನಾಡುತ್ತಾರೆ.
43 ಪೈಲಟ್ಗಳ ದಿಢೀರ್ ರಾಜೀನಾಮೆ: ರಾಕೇಶ್ ಝುಂಝುನ್ವಾಲಾ ಆರಂಭಿಸಿದ ಅಕಾಸ ಏರ್ಗೆ ಸಂಕಷ್ಟ
ವಿಮಾನದಲ್ಲಿ ತುರ್ತು ನಿರ್ಗಮನ ದ್ವಾರದ ಕವರ್ ತೆರೆಯಲು ಯತ್ನ
ನವದೆಹಲಿ: ದೆಹಲಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ತುರ್ತು ನಿರ್ಗಮನ ದ್ವಾರದ ಕವರ್ (emergency exit door) ಅನ್ನು ತೆಗೆಯಲು ಪ್ರಯತ್ನಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ವಿಮಾನ ಟೇಕ್ ಆಫ್ ಆಗುವ ಮೊದಲು ಈ ಅಶಿಸ್ತಿನ ವರ್ತನೆ ತೋರಿದ ಪ್ರಯಾಣಿಕನನ್ನು, ವಿಮಾನ ಚೆನ್ನೈನಲ್ಲಿ ಇಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಇನ್ನು ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಚಿಕ್ಕ ಮಕ್ಕಳಿಗೆ ಫುಲ್ ಟಿಕೆಟ್: ರೈಲ್ವೆಗೆ ಭರ್ಜರಿ ₹2800 ಕೋಟಿ ಆದಾಯ
ನವದೆಹಲಿ: ರೈಲಿನಲ್ಲಿ ಪ್ರಯಾಣ ಮಾಡುವ 5-12 ವರ್ಷದ ಮಕ್ಕಳಿಗೆ ಪೂರ್ಣ ಸೀಟು ಬೇಕಿದ್ದರೆ ಪೂರ್ಣ ಶುಲ್ಕ ನೀಡಬೇಕೆಂಬ ನಿಯಮ ಜಾರಿ ಬಳಿಕ ಭಾರತೀಯ ರೈಲ್ವೆಗೆ 7 ವರ್ಷದಲ್ಲಿ ಬರೋಬ್ಬರಿ 2800 ಕೋಟಿ ರು ಹೆಚ್ಚುವರಿ ಆದಾಯ ಹರಿದುಬಂದಿದೆ. ರೈಲ್ವೆ ಇಲಾಖೆ 2016ರಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವ 5-12 ವರ್ಷದ ಮಕ್ಕಳಿಗೆ ಇಡೀ ಹಾಸಿಗೆ/ಆಸನ ಬೇಕೆಂದರೆ ಅವರೂ ಪೂರ್ಣ ಹಣ ಪಾವತಿ ಮಾಡಬೇಕು ಎಂದು ನಿಯಮ ರೂಪಿಸಿತ್ತು. ಇದರನ್ವಯ, 7 ವರ್ಷದಲ್ಲಿ 3.6 ಕೋಟಿ ಮಕ್ಕಳು ತಮ್ಮ ಪೋಷಕರ ಆಸನದಲ್ಲಿಯೇ ಪ್ರಯಾಣ ಮಾಡಿದ್ದರೆ, 10 ಕೋಟಿ ಮಕ್ಕಳಿಗೆ ಜನರು ಪ್ರತ್ಯೇಕ ಆಸನ ಖರೀದಿಸಿದ್ದಾರೆ ಎಂದು ರೈಲ್ವೆ ಮಾಹಿತಿ ನೀಡಿದೆ.