ಹೂಡಿಕೆದಾರ ರಾಕೇಶ್‌ ಝುಂಝುನ್‌ವಾಲಾ (Rakesh Jhunjhunwala) ಆರಂಭಿಸಿದ್ದ ಅಕಾಸ ಏರ್‌ ಪ್ರತಿನಿತ್ಯ ಸುಮಾರು 120 ವಿಮಾನಗಳ ಸೇವೆ ನೀಡುತ್ತಿತ್ತು. ಇದೀಗ ಈ ಸಂಸ್ಥೆಯಲ್ಲಿನ 43 ಮಂದಿ ಪೈಲಟ್‌ಗಳು ರಾಜೀನಾಮೆ ಸಲ್ಲಿಸಿದ್ದಾರೆ. 

ನವದೆಹಲಿ: 13 ತಿಂಗಳುಗಳ ಹಿಂದಷ್ಟೇ ಆರಂಭವಾಗಿದ್ದ ವಿಮಾನಯಾನ ಸಂಸ್ಥೆ ‘ಅಕಾಸ ಏರ್‌’ ಇದೀಗ ತನ್ನ ಸೇವೆಯನ್ನು ಸ್ಥಗಿತಗೊಳಿಸುವ ಆತಂಕದ ಪರಿಸ್ಥಿತಿ ತಲುಪಿದೆ. ಇದ್ದಕ್ಕಿದ್ದಂತೆ 43 ಮಂದಿ ಪೈಲಟ್‌ಗಳು ರಾಜೀನಾಮೆ ನೀಡಿ ಪ್ರತಿಸ್ಪರ್ಧಿ ವಿಮಾನಯಾನ ಸಂಸ್ಥೆ ಸೇರಿದ ಕಾರಣದಿಂದಾಗಿ ವಿಮಾನಯಾನ ಸಂಸ್ಥೆ 700ಕ್ಕೂ ಹೆಚ್ಚು ವಿಮಾನಗಳನ್ನು ರದ್ದು ಮಾಡಬೇಕಾದ ಪರಿಸ್ಥಿತಿ ತಲುಪಿದೆ.

ಹೂಡಿಕೆದಾರ ರಾಕೇಶ್‌ ಝುಂಝುನ್‌ವಾಲಾ (Rakesh Jhunjhunwala) ಆರಂಭಿಸಿದ್ದ ಅಕಾಸ ಏರ್‌ ಪ್ರತಿನಿತ್ಯ ಸುಮಾರು 120 ವಿಮಾನಗಳ ಸೇವೆ ನೀಡುತ್ತಿತ್ತು. ಇದೀಗ ಈ ಸಂಸ್ಥೆಯಲ್ಲಿನ 43 ಮಂದಿ ಪೈಲಟ್‌ಗಳು ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಸೆಪ್ಟೆಂಬರ್‌ ತಿಂಗಳಲ್ಲಿ ಪ್ರತಿನಿತ್ಯ 24 ವಿಮಾನ ಸೇವೆಗಳನ್ನು ರದ್ದು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಹೀಗೆ ಮುಂದುವರೆದರೆ ಈ ತಿಂಗಳಿನಲ್ಲಿ 700ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಸಂಸ್ಥೆ ರದ್ದು ಮಾಡಬೇಕಿದೆ. ಆಗಸ್ಟ್‌ನಲ್ಲೂ ಸಹ ಅಕಾಸ ಏರ್‌ 700 ವಿಮಾನಗಳನ್ನು ರದ್ದು ಮಾಡಿತ್ತು.

ಟಾಟಾ ಗ್ರೂಪ್‌ ಒಡೆತನದ ಈ ಷೇರಿನಿಂದ ಒಂದು ತಿಂಗಳಲ್ಲಿ 1390 ಕೋಟಿ ರೂ. ಲಾಭ ಗಳಿಸಿದ ಜುಂಜುನ್ವಾಲಾ ಪತ್ನಿ

ಈ ನಡುವೆ ನಿಯಮ ಉಲ್ಲಂಘಿಸಿ ರಾಜೀನಾಮೆ ನೀಡಿದ ಕಾರಣ ಉಂಟಾಗಿರುವ ನಷ್ಟವನ್ನು ತುಂಬಿಕೊಡುವಂತೆ ಪೈಲಟ್‌ಗಳಿಗೆ ಸಂಸ್ಥೆ ನೋಟಿಸ್‌ ಜಾರಿ ಮಾಡಿದೆ. ನೋಟಿಸ್‌ ಅವಧಿ ಕೂಡ ಮುಗಿಸದೇ ಪೈಲಟ್‌ಗಳು ರಾಜೀನಾಮೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಪೈಲಟ್‌ಗಳ ರಾಜೀನಾಮೆಗೆ (resignationsಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿರುವ ಸಂಸ್ಥೆ, ಪೈಲಟ್‌ಗಳ ಈ ನಡೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡಿಜಿಸಿಎಗೆ ಸೂಚಿಸಬೇಕು ಎಂದು ಮನವಿ ಮಾಡಿದೆ.

ಈ ನಡುವೆ ಸಂಸ್ಥೆ ಮುಚ್ಚುವ ಕುರಿತ ವರದಿಗಳನ್ನು ಸಿಇಒ ನಿರಾಕರಿಸಿದ್ದು, ನಾವು ಸುದೀರ್ಘ ಸೇವೆ ಸಲ್ಲಿಸಲು ಇಲ್ಲಿದ್ದೇವೆ ಎಂದು ಹೇಳಿದ್ದಾರೆ.

TATA ಗ್ರೂಪ್‌ನ ಈ ಷೇರಿಂದ ಜುಂಜುನ್ವಾಲಾ ಪತ್ನಿಗೆ ಒಂದೇ ದಿನದಲ್ಲಿ 315 ಕೋಟಿ ಲಾಭ: ನೀವು ಯಾಕೆ ಟ್ರೈ ಮಾಡ್ಬಾರ್ದು!