ಸಂಸತ್‌ನಲ್ಲಿ ಲಂಚ ಪಡೆದು ಮತ ಹಾಕಿದ ಪ್ರಕರಣ : ಮರು ತನಿಖೆಗೆ ಸುಪ್ರೀಂ ಚಿಂತನೆ
1993ರಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರದ (Narasimha Rao government)ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರ ಪರ ಕೆಲವು ಜಾರ್ಖಂಡ್ ಮುಕ್ತಿ ಮೋರ್ಚಾ (Jharkhand Mukti Morcha) ಸಂಸದರು ಮತ ಹಾಕಿದ್ದರು. ಆದರೆ ಅವರು ಲಂಚ ಪಡೆದು ಸರ್ಕಾರದ ಪರ ಮತ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದು, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ನವದೆಹಲಿ: ‘ಹಣ ಪಡೆದು ಅವಿಶ್ವಾಸ ನಿರ್ಣಯದ ವೇಳೆ ಮತ ಹಾಕಿದರೂ, ಅದು ಸದನದ ಒಳಗಿನ ಪ್ರಕ್ರಿಯೆ ಆಗಿರುವ ಕಾರಣ, ಅಂಥ ಸಂಸದ/ಶಾಸಕರಿಗೆ ಕೋರ್ಟ್ ವಿಚಾರಣೆಯಿಂದ ವಿನಾಯ್ತಿ ಇರುತ್ತದೆ’ ಎಂಬ ತನ್ನದೇ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸಲು ಸುಪ್ರೀಂಕೋರ್ಟ್(Supreme Court) ನಿರ್ಧರಿಸಿದೆ. ‘ಜೆಎಂಎಂ ಮತಲಂಚ ಹಗರಣ’ (JMM corruption scam) ಎಂದೇ ಕುಖ್ಯಾತಿ ಪಡೆದಿದ್ದ ಈ ಪ್ರಕರಣದ ಮರು ವಿಚಾರಣೆಗೆ 7 ಸದಸ್ಯರ ಪೀಠ ರಚಿಸುವುದಾಗಿ ಕೋರ್ಟ್ ಘೋಷಿಸಿದೆ.
‘ತೀರಾ ಸಾರ್ವಜನಿಕ ಹಿತಾಸಕ್ತಿಯ ಪ್ರಕರಣ’ ಇದಾಗಿದ್ದರಿಂದ ಮರುವಿಚಾರಣೆ ನಡೆಸಲಾಗುವುದು ಎಂದು ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್ (D.Y. Chandrachud) ಅವರ ಪಂಚಸದಸ್ಯ ಪೀಠ ಬುಧವಾರ ಹೇಳಿದೆ.
ನರಸಿಂಹರಾವ್ ಕೋಮುವಾದಿ, ಭಾರತ ಹಿಂದೂ ದೇಶ ಎಂದಿದ್ದರು: ತನ್ನದೇ ಪಕ್ಷದ ಮಾಜಿ ಪ್ರಧಾನಿ ಬಗ್ಗೆ ಅಯ್ಯರ್ ಕಿಡಿ
ಏನಿದು ಪ್ರಕರಣ?:
1993ರಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರದ (Narasimha Rao government)ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆದಾಗ ಅವರ ಪರ ಕೆಲವು ಜಾರ್ಖಂಡ್ ಮುಕ್ತಿ ಮೋರ್ಚಾ (Jharkhand Mukti Morcha) ಸಂಸದರು ಮತ ಹಾಕಿದ್ದರು. ಆದರೆ ಅವರು ಲಂಚ ಪಡೆದು ಸರ್ಕಾರದ ಪರ ಮತ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದು, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈ ನಡುವೆ 1998ರಲ್ಲಿ ತೀರ್ಪು ನೀಡಿದ್ದ ಪಂಚಸದಸ್ಯ ಪೀಠ, ‘ಸದನದಲ್ಲಿ ಮತ ಚಲಾಯಿಸಲು ಲಂಚ ಪಡೆದ ಆರೋಪದಲ್ಲಿ ಸಂಸದರನ್ನು ಕ್ರಿಮಿನಲ್ ಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ’ ಎಂದು 3:2ರ ಬಹುಮತದ ತೀರ್ಪು ನೀಡಿತ್ತು. ಆದರೆ ಅದೇ ಪೀಠವು ತನ್ನ ತೀರ್ಪು ಮರುಪರಿಶೀಲನೆಗೆ ಒಳಗಾಗಬಹುದು ಎಂದಿತ್ತು. ಈ ನಡುವೆ, 2019ರಲ್ಲಿ ಅಂದಿನ ಮುಖ್ಯ ನ್ಯಾಯಾಧೀಶ ನ್ಯಾ। ರಂಜನ್ ಗೊಗೋಯ್ (Ranjan Gogoi) ಅವರು, ತೀರ್ಪಿನ ಮರು ವಿಚಾರಣೆಗೆ ನಿರ್ಧರಿಸಿ 5 ಸದಸ್ಯರ ಪೀಠ ರಚಿಸಿದ್ದರು. ಈಗ ನ್ಯಾ। ಚಂದ್ರಚೂಡ್ ಅವರು 7 ಸದಸ್ಯರ ಪೀಠ ರಚಿಸಿ ತೀರ್ಪಿನ ಸಮಗ್ರ ಮರುಪರಿಶೀಲನೆಗೆ ನಿರ್ಧರಿಸಿದ್ದಾರೆ.
ಮತ್ತೆ ಪಿವಿ ನರಸಿಂಹರಾವ್ ಕಡೆಗಣಿಸಿದ ಕಾಂಗ್ರೆಸ್; 100ನೇ ಜಯಂತಿಗೆ ರಾಹುಲ್ ಗಾಂಧಿ ಮೌನ!