ತಮಿಳುನಾಡಿನ ಆಡಳಿತರೂಢ ಡಿಎಂಕೆ ವಿರುದ್ಧ 5,600 ಕೋಟಿ ರು. ಅಕ್ರಮದ ಆರೋಪ ಮಾಡಿರುವ ಬಿಜೆಪಿ, ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದೆ.
ಚೆನ್ನೈ: ತಮಿಳುನಾಡಿನ ಆಡಳಿತರೂಢ ಡಿಎಂಕೆ ವಿರುದ್ಧ 5,600 ಕೋಟಿ ರು. ಅಕ್ರಮದ ಆರೋಪ ಮಾಡಿರುವ ಬಿಜೆಪಿ, ಈ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಮಾಡಿದೆ. ಡಿಎಂಕೆ ನಾಯಕರು ಬೇನಾಮಿ ಹೊಂದಿದ್ದಾರೆ ಎಂಬ ವಿಡಿಯೋವನ್ನು ಬಿಡುಗಡೆ ಮಾಡಲಾಗಿದ್ದು ಇದಕ್ಕೆ ಡಿಎಂಕೆ ಫೈಲ್ಸ್-2 ಎಂದು ಹೆಸರಿಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ, ಡಿಎಂಕೆಯ ಸಚಿವರು, ಶಾಸಕರು ಮತ್ತು ಸಂಸದರು ಹೊಂದಿದ್ದಾರೆ ಎನ್ನಲಾದ ಬೇನಾಮಿಯ ಕುರಿತಾಗಿ ಡಿಎಂಕೆ ಫೈಲ್ಸ್-2 ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ರಾಜ್ಯಪಾಲರು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಸುಮಾರು 5,600 ಕೋಟಿ ರು. ಮೊತ್ತದ 3 ಹಗರಣಗಳು ನಡೆದಿವೆ ಎಂದು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ವೈದ್ಯಕೀಯ ನಿಗಮದಲ್ಲಿ 600 ಕೋಟಿ ರು., ಸಾರಿಗೆ ಸಂಸ್ಥೆಯಲ್ಲಿ 2000 ಕೋಟಿ ರು., ವ್ಯಾಪಾರ ಸಂಸ್ಥೆಯೊಂದರಲ್ಲಿ 3 ಸಾವಿರ ಕೋಟಿ ರು. ಅಕ್ರಮ ಎಸಗಲಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಈ ದಾಖಲಾತಿಗಳನ್ನು ಹೊಂದಿದೆ ಎನ್ನಲಾದ 16 ನಿಮಿಷದ ವಿಡಿಯೋವನ್ನು ಬಿಡುಗಡೆ ಮಾಡಿದೆ. ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿ ಪತ್ರವನ್ನು ಹೊಂದಿರುವ ದೊಡ್ಡ ಬಾಕ್ಸ್‌ನಲ್ಲಿ ಡಿಎಂಕೆ ಫೈಲ್ಸ್-2 ಎಂದು ಬರೆಯಲಾಗಿದ್ದು, ಅದನ್ನು ರಾಜ್ಯಪಾಲರಿಗೆ ನೀಡಲಾಗಿದೆ. ಈ ಮೊದಲು 200 ಕೋಟಿ ರು. ಲಂಚ ಪಡೆದಿದ್ದಾರೆ ಎಂದು ಆರೋಪಿಸುರವ ಡಿಎಂಕೆ ಫೈಲ್ಸ್ ವಿಡಿಯೋವನ್ನು ಬಿಡುಗಡೆ ಮಾಡಿತ್ತು.
ಮಹಿಳೆಯೊಂದಿಗೆ ಕ್ರೈಸ್ತ ಪಾದ್ರಿ ನೃತ್ಯ: ವಿಡಿಯೋ ಪೋಸ್ಟ್ ಮಾಡಿದ ಕಾಲಿವುಡ್ ನಟ ಅರೆಸ್ಟ್; ನೆಟ್ಟಿಗರ ವಿರೋಧ
ರಾಜ್ಯಪಾಲರು ರಾಜಕೀಯ ಮಾತನಾಡಬಾರದು: ತಮಿಳುನಾಡು ಗವರ್ನರ್ ವಿರುದ್ಧ ಅಣ್ಣಾಮಲೈ ಕಿಡಿ
