ಈ ಜನ್ಮದಲ್ಲಿ ದೆಹಲಿ ಗೆಲ್ಲಲು ಮೋದಿಗೆ ಸಾಧ್ಯವಿಲ್ಲ, ಮತ್ತೊಂದು ಜನ್ಮ ತಾಳಿ ಬರಬೇಕು ಎಂದಿದ್ದ ಅರವಿಂದ ಕೇಜ್ರಿವಾಲ ಅವರ ವಿಡಿಯೋ ವೈರಲ್​ ಆಗುತ್ತಿದೆ.  

ದೆಹಲಿಯ ಚುನಾವಣೆಯ ಬಹುತೇಕ ಫಲಿತಾಂಶ ಹೊರಬಿದ್ದಿದೆ. 27 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿ ನಿಂತಿದೆ. ಸೋಲೇ ಇಲ್ಲದ ಸರದಾರ ಎಂದು ಹೇಳಿಕೊಂಡಿದ್ದ ಆಪ್​ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ಗೆ ಭಾರಿ ಮುಖಭಂಗವಾಗಿದೆ. ಇದರ ಜೊತೆ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಕೂಡ ಪರಾಭವಗೊಂಡಿದ್ದಾರೆ. ಹಾಲಿ ಮುಖ್ಯಮಂತ್ರಿ ಅತಿಶಿ ಅವರು ಕೆಲವೇ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ, ಆಪ್​ ಮರ್ಯಾದೆಯನ್ನು ಕಾಪಾಡಿದ್ದಾರೆ. ಇನ್ನು ಕಾಂಗ್ರೆಸ್​ ಕಳೆದೆರಡು ಚುನಾವಣೆಗಳಂತೆಯೇ ಸತತ ಮೂರನೆಯ ಬಾರಿ ಒಂದೂ ಖಾತೆ ತೆರೆಯದೇ ಜೀರೋದಲ್ಲಿಯೇ ಇದೆ.

ಬಿಜೆಪಿ ಕಾರ್ಯಕರ್ತರು ಫಲಿತಾಂಶದ ಖುಷಿಯನ್ನು ಸವಿಯುತ್ತಿರುವ ನಡುವೆಯೇ, ಇದೀಗ ದೆಹಲಿಯ ಸರದಾರ ನಾವೇ. ಪ್ರಧಾನಿ ನರೇಂದ್ರ ಮೋದಿ ಈ ಜನ್ಮದಲ್ಲಿ ಕನಸು ಕಾಣಬೇಕಷ್ಟೇ. ದೆಹಲಿಯನ್ನು ಆಳಬೇಕಿದ್ದರೆ ಮತ್ತೊಂದು ಜನ್ಮ ಎತ್ತಿ ಬರಬೇಕು ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ, ಆಪ್​ ನಾಯಕ ಅರವಿಂದ ಕೇಜ್ರಿವಾಲ ಅವರು ಹೇಳಿರುವ ವಿಡಿಯೋಗಳು ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ದೆಹಲಿ ಫಲಿತಾಂಶದ ಬೆನ್ನಲ್ಲೇ ಕೇಜ್ರಿವಾಲ್​, ಮೋದಿ ಗುದ್ದಾಟ: EVM ಗದ್ದಲ! ಅಬ್ಬಬ್ಬೋ ಜಾಲತಾಣದಲ್ಲಿ ಇದೇನಿದು?

ಒಂದರಲ್ಲಿ ಭಾಷಣ ಮಾಡುತ್ತಾ ಕೇಜ್ರಿವಾಲ ಅವರು, ದೆಹಲಿಯನ್ನು ಆಳುವ ಕನಸನ್ನು ಬಿಜೆಪಿ ಮತ್ತು ಮೋದಿ ಕಾಣುತ್ತಿದ್ದಾರೆ. ಇದಕ್ಕಾಗಿ ಹಲವಾರು ಹಗರಣಗಳಲ್ಲಿ ನಮ್ಮನ್ನು ಸಿಲುಕಿಸಿ ಜೈಲಿಗೆ ಅಟ್ಟಿದರು. ಆದರೆ ಮೋದಿಗೆ ಗೊತ್ತಿಲ್ಲ. ಜೈಲಿನಲ್ಲಿ ಇದ್ದುಕೊಂಡೇ ಗೆಲುವು ಸಾಧಿಸುವುದು ಹೇಗೆ ಎನ್ನುವುದು ನಮಗೆ ಗೊತ್ತು. ಜೈಲಿನಲ್ಲಿ ಇದ್ದುಕೊಂಡೇ ಆಪ್​ ಸರ್ಕಾರ ಮಾಡುತ್ತದೆ. ನೋಡುತ್ತಿರಿ, ನಿಮ್ಮ ಕನಸು ನನಸಾಗುವುದಿಲ್ಲ ಎಂದಿದ್ದರು. ಮೋದಿಜಿ ಗಮನವಿಟ್ಟು ಕೇಳಿ, ಈ ಜನ್ಮದಲ್ಲಿ ನೀವು ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ, ಬೇಕಿದ್ದರೆ ಮತ್ತೊಂದು ಜನ್ಮ ಎತ್ತಿ ಬನ್ನಿ ಎಂದು ಹೇಳಿದ್ದರು.

ಅದೇ ಇನ್ನೊಂದು ವಿಡಿಯೋದಲ್ಲಿ ಸದನದಲ್ಲಿ ಮಾತನಾಡುವ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲ ಅವರು, ದೆಹಲಿಯ ಬಾಸ್​ ನಾವು. ಆಪ್​ ಸರ್ಕಾರವೇ ಇಲ್ಲಿಯ ಬಾಸ್​. ಬೇರೆ ಯಾರೂ ಇದನ್ನು ಆಳಲು ಸಾಧ್ಯವಿಲ್ಲ. ಹಿಂದಿನ ಎರಡೂ ಅವಧಿಯಲ್ಲಿಯೂ ಆಮ್​ ಆದ್ಮಿ ಪಕ್ಷವೇ ಆಳಿದೆ. ಮುಂದಿನ ಚುನಾವಣೆಯಲ್ಲಿಯೂ ನಾವೇ ಆಳುವುದು. ಇದನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದಿದ್ದರು. ಈ ಎರಡೂ ವಿಡಿಯೋಗಳು ಈಗ ಥಹರೇವಾರಿ ಕಮೆಂಟ್ಸ್​ ಜೊತೆ ವೈರಲ್​ ಆಗುತ್ತಿವೆ. 

ದಿಲ್ಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಧಿಕಾರ, ಎಎಪಿ ಸೋಲಿಗೆ ಕಾರಣವೇನು?

Scroll to load tweet…