ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 27 ವರ್ಷಗಳ ನಂತರ ಅಧಿಕಾರಕ್ಕೆ ಮರಳಿದೆ. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೋಲುಂಡಿದ್ದಾರೆ. ಆತಿಶಿ ಕೂದಲೆಳೆಯ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಖಾತೆ ತೆರೆಯಲಿಲ್ಲ. ಭ್ರಷ್ಟಾಚಾರ ಆರೋಪಗಳು ಮತ್ತು ನಾಯಕತ್ವದ ಅಸ್ಥಿರತೆ ಆಪ್ ಸೋಲಿಗೆ ಕಾರಣ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್‌ಗಳ ಹರಿವು ಹೆಚ್ಚಿದೆ.

ದೆಹಲಿಯ ಚುನಾವಣೆಯ ಬಹುತೇಕ ಫಲಿತಾಂಶ ಹೊರಬಿದ್ದಿದೆ. 27 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗಿ ನಿಂತಿದೆ. ಸೋಲೇ ಇಲ್ಲದ ಸರದಾರ ಎಂದು ಹೇಳಿಕೊಂಡಿದ್ದ ಆಪ್​ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ಗೆ ಭಾರಿ ಮುಖಭಂಗವಾಗಿದೆ. ಇದರ ಜೊತೆ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಕೂಡ ಪರಾಭವಗೊಂಡಿದ್ದಾರೆ. ಹಾಲಿ ಮುಖ್ಯಮಂತ್ರಿ ಅತಿಶಿ ಅವರು ಕೆಲವೇ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ, ಆಪ್​ ಮರ್ಯಾದೆಯನ್ನು ಕಾಪಾಡಿದ್ದಾರೆ. ಇನ್ನು ಕಾಂಗ್ರೆಸ್​ ಕಳೆದೆರಡು ಚುನಾವಣೆಗಳಂತೆಯೇ ಸತತ ಮೂರನೆಯ ಬಾರಿ ಒಂದೂ ಖಾತೆ ತೆರೆಯದೇ ಜೀರೋದಲ್ಲಿಯೇ ಇದೆ. ಈ ಹಿನ್ನೆಲೆಯಲ್ಲಿ, ಸೋಷಿಯಲ್​ ಮೀಡಿಯಾದಲ್ಲಿ ಕೇಳಬೇಕೆ? ಮೀಮ್ಸ್​ಗಳ ಸುರಿಮಳೆಯಾಗುತ್ತಿದೆ. 


ಪ್ರತಿ ಬಾರಿಯ ಚುನಾವಣೆಗಳಲ್ಲಿಯೂ ಎಲ್ಲೆಲ್ಲಿ ಕಾಂಗ್ರೆಸ್​ ಅಧಿಕಾರ ಕಳೆದುಕೊಳ್ಳುತ್ತದೆಯೋ, ಆ ಸಮಯದಲ್ಲಿ ಇವಿಎಂ ಮತ ಯಂತ್ರದ ಮೇಲೆ ಗೂಬೆ ಕೂರಿಸುವುದು ಸರ್ವೇ ಸಾಮಾನ್ಯವಾಗಿದೆ. ಇದು ಪ್ರತಿ ಚುನಾವಣೆಯಲ್ಲಿಯೂ ನಡೆದುಕೊಂಡೇ ಬಂದಿದೆ. ಬಿಜೆಪಿಯೇತರ ಪಕ್ಷಗಳು ಗೆಲುವು ಸಾಧಿಸಿದ ಕ್ಷೇತ್ರಗಳಲ್ಲಿ ಮಾತ್ರ ಇವಿಎಂ ಚೆನ್ನಾಗಿ ಕೆಲಸ ಮಾಡುತ್ತಿತ್ತು, ಉಳಿದ ಕಡೆಗಳಲ್ಲಿ ಅನ್ಯಾಯವಾಗಿದೆ ಎಂದು ಬಿಜೆಪಿಯೇತರ ಪಕ್ಷಗಳು ಹಾಗೂ ಅವರ ಬೆಂಬಲಿಗರು ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ಇಲ್ಲಿಯವರೆಗೆ ದೆಹಲಿಯ ಚುನಾವಣೆಯ ಫಲಿತಾಂಶ ಹೊರಬಿದ್ದರೂ ಇವಿಎಂ ಬಗ್ಗೆ ಯಾರೂ ಮಾತನಾಡದೇ ಇರುವುದು ಕೂಡ ತರ್ಲೆ ನೆಟ್ಟಿಗರ ತಲೆ ಕೆಡಿಸಿದೆ.

ದಿಲ್ಲಿಯಲ್ಲಿ 27 ವರ್ಷಗಳ ನಂತರ ಬಿಜೆಪಿಗೆ ಅಧಿಕಾರ, ಎಎಪಿ ಸೋಲಿಗೆ ಕಾರಣವೇನು?

ಈ ಎಲ್ಲಾ ಹಿನ್ನೆಲೆಯಲ್ಲಿ, ಮೀಮ್ಸ್​ಗಳ ಭರಾಟೆ ಜೋರಾಗಿದೆ. ಕುಸ್ತಿಯ ಕಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅರವಿಂದ ಕೇಜ್ರಿವಾಲ ಅವರು ಫೈಟ್​ ಮಾಡುತ್ತಿರುವುದು, ಮೋದಿ, ಕೇಜ್ರಿವಾಲ ಅವರನ್ನು ಕೆಳಕ್ಕೆ ಬೀಳಿಸುತ್ತಿರುವ ವಿಡಿಯೋ ಸಕತ್​ ಸೌಂಡ್​ ಮಾಡುತ್ತಿದೆ. ಅದರ ಜೊತೆಗೆ, ಇವಿಎಂ ಮೇಲೆ ಆಪ್​ ಮತ್ತು ಕಾಂಗ್ರೆಸ್​ ನಾಯಕರು ಆರೋಪ ಹೊರಿಸುತ್ತಿರುವ ಮೀಮ್ಸ್​, ಜೋಕ್​ಗಳೂ ಹರಿದಾಡುತ್ತಿವೆ. ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಇನ್ನಿಲ್ಲದಂತೆ ಮೀಮ್ಸ್​ಗಳನ್ನು ತಯಾರು ಮಾಡಿ ಬಿಡಲಾಗುತ್ತಿದೆ. 


ಇದೇ ವೇಳೆ ಮಾಜಿ ಸಿಂಎ ಅರವಿಂದ ಕೇಜ್ರಿವಾಲ ಅವರ ಸೋಲಿನ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡುವುದೇ ಗುರಿ ಎಂದು ರಾಜಕೀಯಕ್ಕೆ ಕಾಲಿಟ್ಟ ಕೇಜ್ರಿವಾಲ್ ಅವರೇ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವುದು ಈ ಪಕ್ಷದ ಸೋಲಿಗೆ ಪ್ರಮುಖ ಕಾರಣ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಾರೆ. ಆಮ್ ಆದ್ಮಿ ಪಕ್ಷದ ಪ್ರಮುಖ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ಮೇಲೆ ಭ್ರಷ್ಟಾಚಾರ ಆರೋಪಗಳು ಬಂದಿರುವುದು, ಕೇಜ್ರಿವಾಲ್ ಸೇರಿದಂತೆ ಹಲವು ನಾಯಕರು ಜೈಲಿಗೆ ಹೋಗಿರುವುದು ಪಕ್ಷದ ಘನತೆಗೆ ಧಕ್ಕೆ ತಂದಿದೆ. ಕೇಜ್ರಿವಾಲ್ ಬಂಧನ ಆ ಪಕ್ಷಕ್ಕೆ ದೊಡ್ಡ ಹೊಡೆತ ಎನ್ನಬಹುದು. ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ವ್ಯಕ್ತಿ ಮದ್ಯ ಹಗರಣದಲ್ಲಿ ಜೈಲಿಗೆ ಹೋಗುವುದು, ನಂತರ ಅವರು ರಾಜೀನಾಮೆ ನೀಡುವುದು ನಾಯಕತ್ವದ ಅಸ್ಥಿರತೆಗೆ ಕಾರಣವಾಯಿತು. ಹೊಸ ಮುಖ್ಯಮಂತ್ರಿಯಾಗಿ ಆತಿಶಿಯನ್ನು ನೇಮಿಸುವುದು, ತಕ್ಷಣವೇ ಚುನಾವಣೆಗಳು ಬರುವುದು ಇವೆಲ್ಲವೂ ಆಪ್ ಮೇಲೆ ಪರಿಣಾಮ ಬೀರಿದವು. ಕೇಜ್ರಿವಾಲ್ ವಿಶ್ವಾಸಾರ್ಹತೆಯ ಮೇಲೆ ಜನರ ನಂಬಿಕೆ ಕಡಿಮೆಯಾಗಿದೆ.

Delhi Elections 2025: ದೆಹಲಿ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಹೀನಾಯ ಸೋಲು

Scroll to load tweet…