Asianet Suvarna News Asianet Suvarna News

ಬಿಜೆಪಿಗೆ ಪವರ್ ಸ್ಟಾರ್ ಬೆಂಬಲ: ಜೊತೆಯಾಗಿ ಹೋಗುವ ಹಂಬಲ!

ಬಿಜೆಪಿಗೆ ಬೆಂಬಲ ಘೋಷಿಸಿದ ಪವರ್ ಸ್ಟಾರ್| ಜೊತೆಯಾಗಿ ಚುನಾವಣೆ ಎದುರಿಸುವ ನಿರ್ಧಾರ| ಆಂಧ್ರದಲ್ಲಿ ಬಿಜೆಪಿ-ಜನಸೇನಾ ಪಕ್ಷದ ನಡುವೆ ಮೈತ್ರಿ| 2024ರಲ್ಲಿ ಜನಸೇನಾ-ಬಿಜೆಪಿ ಮೈತ್ರಿ ಸರ್ಕಾರ ಶತಸಿದ್ಧ ಎಂದ ಪವನ್ ಕಲ್ಯಾಣ್| ರಾಜ್ಯಕ್ಕೆ ಪ್ರಧಾನಿ ಮೋದಿ ಮಾರ್ಗದರ್ಶನದ ಅಗತ್ಯವಿದೆ ಎಂದ ಪವನ್ ಕಲ್ಯಾಣ್| 

BJP and Pawan Kalyan Jana Sena Join Hands In Andhra Pradesh
Author
Bengaluru, First Published Jan 16, 2020, 8:55 PM IST

ವಿಜಯವಾಡ(ಜ.16): ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷ ಆಂಧ್ರಪ್ರದೇಶದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ.

2024ರ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಸರ್ಕಾರ ರಚಿಸುವ ಗುರಿ ಹೊಂದಲಾಗಿದೆ ಎಂದು ಪವನ್ ಕಲ್ಯಾಣ್ ಘೋಷಿಸಿದ್ದಾರೆ.

ಸಾಮಾನ್ಯರಂತೆ ಆಶ್ರಮದಲ್ಲಿದ್ದಾರೆ ಪವರ್ ಸ್ಟಾರ್; ಸಾಕ್ಷಿಗೆ ಸಿಕ್ತು ಈ ಫೋಟೋಗಳು!

ಇಂದು ವಿಜಯವಾಡದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪವನ್ ಕಲ್ಯಾಣ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಣ್ಣ ಲಕ್ಷ್ಮಿನಾರಾಯಣ, ರಾಜ್ಯದಲ್ಲಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದಾಗಿ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಅವರು, ಸಂವಹನ ಕೊರತೆಯಿಂದ ಇಷ್ಟು ದಿನ ಮೈತ್ರಿ ಸಾಧ್ಯವಾಗಿರಲಿಲ್ಲ. ಈಗ ಅಂಧ್ರ ಪ್ರದೇಶದ ಭವಿಷ್ಯಕ್ಕಾಗಿ ಜನ ಸೇನಾ, ಬಿಜೆಪಿಯೊಂದಿಗೆ ಯಾವುದೇ ಷರತ್ತುಗಳಿಲ್ಲದೆ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದರು.

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ  ಮಾರ್ಗದರ್ಶನದ ಅಗತ್ಯ ಇದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಪವನ್ ಕಲ್ಯಾಣ್ ಸ್ಪಷ್ಟಪಡಿಸಿದರು.

2014ರಲ್ಲಿ ಸ್ಥಾಪನೆಯಾದ ಜನ ಸೇನಾ ಪಕ್ಷ ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿತ್ತು. ಆದರೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. 

ಮೋದಿಗೆ ಶಾಕ್ ಕೊಡುತ್ತಾ ಜನಸೇನಾ ಪವರ್?

ನಂತರ 2019ರ ಚುನಾವಣೆಯಲ್ಲಿ ಬಿಜೆಪಿಯಿಂದ ದೂರ ಉಳಿದ ಜನ ಸೇನಾ, ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತ್ತು.

Follow Us:
Download App:
  • android
  • ios