ಸೊರೋಸ್ ನೆರವಿನ ಸಂಸ್ಥೆ ಜೊತೆ ಸೋನಿಯಾ ಗಾಂಧಿಗೆ ನಂಟು: ಬಿಜೆಪಿ

ಅಮೆರಿಕದ ಉದ್ಯಮಿ, ಭಾರತ ವಿರೋಧಿ ಜಾರ್ಜ್‌ ಸೊರೋಸ್‌ ಫೌಂಡೇಶನ್‌ನಿಂದ ಹಣಕಾಸು ನೆರವು ಪಡೆಯುವ ಹಾಗೂ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗುವುದನ್ನು ಬೆಂಬಲಿಸಿದ ಸಂಸ್ಥೆಯೊಂದಿಗೆ ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನಂಟು ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

BJP Alleged connection between the Sonia Gandhi and George Soros mrq

ನವದೆಹಲಿ: ಅಮೆರಿಕದ ಉದ್ಯಮಿ, ಭಾರತ ವಿರೋಧಿ ಜಾರ್ಜ್‌ ಸೊರೋಸ್‌ ಫೌಂಡೇಶನ್‌ನಿಂದ ಹಣಕಾಸು ನೆರವು ಪಡೆಯುವ ಹಾಗೂ ಕಾಶ್ಮೀರ ಪ್ರತ್ಯೇಕ ರಾಷ್ಟ್ರವಾಗುವುದನ್ನು ಬೆಂಬಲಿಸಿದ ಸಂಸ್ಥೆಯೊಂದಿಗೆ ಮಾಜಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನಂಟು ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ‘ಸೊರೋಸ್‌ರಿಂದ ನೆರವು ಪಡೆಯುವ ‘ಫೋರಂ ಆಫ್‌ ಡಿ ಡೆಮಾಕ್ರಟಿಕ್‌ ಲೀಡರ್ಸ್‌ ಇನ್‌ ಏಷ್ಯಾ ಪೆಸಿಫಿಕ್‌’ (ಎಫ್‌ಡಿಎಲ್‌-ಎಪಿ) ಸಂಸ್ಥೆ ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವಾಗಿ ಪರಿಗಣಿಸುತ್ತದೆ. ಸೋನಿಯಾ ಗಾಂಧಿ ಇದರ ಸಹ ಅಧ್ಯಕ್ಷೆಯಾಗಿದ್ದಾರೆ. ಇದು ಭಾರತದ ಆಂತರಿಕ ವಿಷಯಗಳಲ್ಲಿ ವಿದೇಶಿ ಕಂಪನಿಗಳ ಪ್ರಭಾವವನ್ನು ತೋರಿಸುತ್ತದೆ’ ಎಂದು ಆರೋಪಿಸಿದೆ.

ಈ ವೇಳೆ, ಸೊರೋಸ್‌ರನ್ನು ಹಳೆಯ ಮಿತ್ರ ಎಂದು ಕರೆದಿದ್ದ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರ ಹೇಳಿಕೆಯನ್ನೂ ಬಿಜೆಪಿ ನೆನಪಿಸಿದೆ. ಈ ಮೊದಲು, ಭಾರತದ ಘನತೆಗೆ ಧಕ್ಕೆ ತರುವ ಕೆಲಸದಲ್ಲಿ ತೊಡಗಿರುವ, ಸೊರೋಸ್‌ರಿಂದ ನೆರವು ಪಡೆಯುವ ಮಾಧ್ಯಮ ಸಂಸ್ಥೆ ಒಸಿಸಿಆರ್‌ಪಿ ಹಾಗೂ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಅಮೆರಿಕ ಸೇರಿಕೊಂಡಿದೆ ಎಂದು ಆಡಳಿತ ಪಕ್ಷ ಆರೋಪಿಸಿತ್ತು.

ಇದನ್ನೂ ಓದಿ: ರಾಹುಲ್‌ ಗಾಂಧಿಯನ್ನು ದೇಶದ್ರೋಹಿ ಎಂದವರೇ ನಿಜವಾದ ದೇಶದ್ರೋಹಿ: ಸಿದ್ದರಾಮಯ್ಯ

Latest Videos
Follow Us:
Download App:
  • android
  • ios