ಮೊಲ ಕಚ್ಚಿದಕ್ಕೆ ರೇಬಿಸ್‌ ಲಸಿಕೆ ಪಡೆದುಕೊಂಡಿದ್ದ ವೃದ್ಧೆ ಸಾವು!

ಸಾಕಿದ ಮೊಲ ಕಚ್ಚಿದ್ದಕ್ಕೆ ರೇಬಿಸ್‌ ವಿರೋಧಿ ಲಸಿಕೆ ಪಡೆದ ಬಳಿಕ ಅಸ್ವಸ್ಥರಾದ ವೃದ್ಧೆ ಆಲಪ್ಪುಳ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದರು.

bitten by rabbit Elderly Woman Dies After Rabies Vaccination in Alappuzha  san

ಆಲಪ್ಪುಳ (ನ.21): ಸಾಕಿದ ಮೊಲ ಕಚ್ಚಿದ್ದ ಕಾರಣಕ್ಕೆ ರೇಬಿಸ್‌ ವಿರೋಧಿ ಲಸಿಕೆ ಪಡೆದುಕೊಂಡು ಅಸ್ವಸ್ಥರಾಗಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆಲಪ್ಪುಳ ತಕಳಿ ಕಲ್ಲೆಪುರದ ಸೋಮನ್ ಅವರ ಪತ್ನಿ ಶಾಂತಮ್ಮ (63) ಮೃತರು. ತಮ್ಮ ಮನೆಯಲ್ಲಿ ಸಾಕಿದ್ದ ಮೊಲ ಕಚ್ಚಿದ್ದರಿಂದ ರೇಬೀಸ್ ಲಸಿಕೆ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಅಸ್ವಸ್ಥರಾಗಿದ್ದರು. ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ ಬಳಿಕ ಅಸ್ವಸ್ಥರಾದ ವೃದ್ಧೆ ಆಲಪ್ಪುಳ ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಇವರನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೂ ದಾಖಲಿಸಲಾಗಿತ್ತು. ಇಲ್ಲಿಂದ ಬಿಡುಗಡೆಯಾಗಿ ಮನೆಗೆ ಕರೆತರಲಾಗಿತ್ತು. ಶಾಂತಮ್ಮ ಅವರ ಚಿಕಿತ್ಸೆಗಾಗಿ ಮನೆಯವರು ಆಸ್ಪತ್ರೆಯಲ್ಲಿದ್ದಾಗ ಮನೆಯಲ್ಲಿ ಇಲಿ ಹಿಡಿಯಲು ಇಲಿ ವಿಷ ಹಚ್ಚಿದ್ದ ತೆಂಗಿನಕಾಯಿ ತಿಂದು ಇವರ ಮೊಮ್ಮಗಳು ಸಾವನ್ನಪ್ಪಿದ್ದ ಘಟನೆಯೂ ನಡೆದಿತ್ತು. ಒಂದೇ ವಾರದ ಅಂತರದಲ್ಲಿ ಮನೆಯಲ್ಲಿ ಎರಡು ಸಾವುಗಳನ್ನು ಕಂಡು ಕುಟುಂಬ ಆಘಾತಗೊಂಡಿದೆ.

ಅಕ್ಟೋಬರ್ 21 ರಂದು ಆಲಪ್ಪುಳ ವೈದ್ಯಕೀಯ ಕಾಲೇಜಿನಲ್ಲಿ ಶಾಂತಮ್ಮ ರೇಬಿಸ್‌ ವಿರೋಧಿ ಲಸಿಕೆ ಹಾಕಿಸಿಕೊಂಡಿದ್ದರು. ಲಸಿಕೆ ಪಡೆದ ಬಳಿಕವೇ ಅವರ ಆರೋಗ್ಯ ಹದಗೆಟ್ಟಿತ್ತು. ಲಸಿಕೆ ಪಡೆದ ಬಳಿಕ ಶಾಂತಮ್ಮ ಅವರ ದೇಹ ಸಂಪೂರ್ಣವಾಗಿ ನಿಶ್ಚಲವಾಗಿತ್ತು ಮತ್ತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು.

ಪರೀಕ್ಷಾ ಡೋಸ್‌ನಲ್ಲೇ ಅಲರ್ಜಿ ಕಾಣಿಸಿಕೊಂಡಿದ್ದರೂ ಮೂರು ಡೋಸ್ ಲಸಿಕೆಗಳನ್ನು ನೀಡಲಾಗಿತ್ತು. ಮೂರನೇ ಬಾರಿಗೆ ಲಸಿಕೆ ಪಡೆದ ಬಳಿಕ ಶಾಂತಮ್ಮ ಕುಸಿದು ಬಿದ್ದರು ಮತ್ತು ಅವರಲ್ಲಿ ಯಾವ ಚಲನೆಯೂ ಇದ್ದಿರಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಬಳಿಕ ವೆಂಟಿಲೇಟರ್‌ನಲ್ಲಿದ್ದ ಶಾಂತಮ್ಮ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಲಸಿಕೆ ಪಡೆದ ಬಳಿಕ ಉಂಟಾಗುವ ಅಪರೂಪದ ಅಡ್ಡಪರಿಣಾಮದಿಂದಾಗಿ ಈ ಸ್ಥಿತಿ ಉಂಟಾಗಿರಬಹುದು ಎಂದು ವೈದ್ಯಕೀಯ ಕಾಲೇಜು ಅಧಿಕಾರಿಗಳು ವಿವರಿಸಿದ್ದರು.

ಸೀರೆಯುಟ್ಟು ಓಡಿ ಬಂದ ನಿವೇದಿತಾ ಗೌಡ, 'ಸಿಂಗಲ್ಸ್‌ಗಳ ಜನ್ಮ ಹಾಳ್‌ ಮಾಡ್ತಿದ್ದೀರಾ' ಅನ್ನೋದಾ?

ಪರೀಕ್ಷಾ ಡೋಸ್‌ನಲ್ಲಿ ಅಲರ್ಜಿ ಕಾಣಿಸಿಕೊಂಡಾಗಲೇ ಔಷಧ ನೀಡಲಾಗಿತ್ತು. ಆದರೆ ಲಸಿಕೆ ಪಡೆದಾಗ ಗಂಭೀರ ಸ್ಥಿತಿ ಉಂಟಾಯಿತು. ಕೆಲವೇ ಜನರಲ್ಲಿ ಈ ರೀತಿಯ ಘಟನೆಗಳು ವರದಿಯಾಗಿವೆ ಎಂದು ವೈದ್ಯಕೀಯ ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ. ಶಾಂತಮ್ಮ ಅವರ ಮಗಳು ಸೋನಿಯಾ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

2 ರೂಪಾಯಿ ಇದ್ದ ಷೇರಿನ ಬೆಲೆ ಈಗ 65 ರೂಪಾಯಿ, 4 ವರ್ಷದಲ್ಲೇ 3700% ಲಾಭ!

Latest Videos
Follow Us:
Download App:
  • android
  • ios