ಕರ್ನಾಟಕದಲ್ಲಿ ಲವ್ ಜಿಹಾದ್ ಪ್ರಕರಣ ಕಾವು ಜೋರಾಗುತ್ತಿದೆ. ಇದರ ನಡುವೆ ಮತ್ತೊಂದು ವಿವಾದ ಭುಗಿಲೆದ್ದಿದೆ. ರಾಷ್ಟ್ರ ರಾಜಧಾನಿಯಲ್ಲಿ ಶ್ರೀರಾಮ ಚಿತ್ರವಿರುವ ಪ್ಲೇಟ್‌ನಲ್ಲಿ ಮಾಂಸಾಹಾರಿ ಬಿರಿಯಾನಿ ಮಾರಾಟ ಮಾಡಲಾಗಿದೆ. ಈ ಕುರಿತು ಹಿಂದೂ ಸಂಘಟನೆಗಳ ದೂರಿನ ಬಳಿಕ ಪೊಲೀಸರು ಬಿರಿಯಾನಿ ಶಾಪ್‌ಗೆ ದಾಳಿ ಮಾಡಿದ್ದಾರೆ. 

ನವದೆಹಲಿ(ಏ.23) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂದೂ ನಂಬಿಕೆಗೆ ಧಕ್ಕೆಯಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ದೆಹಲಿಯ ಜಹಾಂಗೀರ್‌ಪುರಿ ವಲಯದಲ್ಲಿನ ಬಿರಿಯಾನಿ ಶಾಪ್‌ನಲ್ಲಿ ಶ್ರೀರಾಮನ ಭಾವಚಿತ್ರವಿರುವ ಪ್ಲೇಟ್‌ನಲ್ಲಿ ಮಾಂಸಾಹಾರಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ ಅನ್ನೋ ವಿವಾದ ಜೋರಾಗಿದೆ. ಹಿಂದೂ ಸಂಘಟನೆಗಳ ದೂರಿನ ಬಳಿಕ ಬಿರಿಯಾನಿ ಶಾಪ್‌ಗೆ ದಾಳಿ ಮಾಡಿದ ಪೊಲೀಸರು, ಶ್ರೀರಾಮ ಚಿತ್ರವಿರುವ ಬಳಸಿ ಬಿಸಾಡುವ ಪ್ಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರೆ.

ಜಹಾಂಗೀರಪುರಿಯಲ್ಲಿನ ಬಿರಿಯಾನಿ ಶಾಪ್‌ನಲ್ಲಿ ಭಾನುವಾರದಿಂದ ಶ್ರೀರಾಮನ ಚಿತ್ರವಿರುವ ಯೂಸ್ ಅಂಡ್ ಥ್ರೋ ಪ್ಲೇಟ್‌ನಲ್ಲಿ ಮಾಂಸಾಹಾರಿ ಬಿರಿಯಾನಿ ಮಾರಾಟ ಮಾಡುತ್ತಿದ್ದಾರೆ ಎಂದು ಹಿಂದೂ ಸಂಘಟನೆಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಿಂದೂ ನಂಬಿಕೆಗೆ ಧಕ್ಕೆ ತರಲಾಗಿದೆ. ಉದ್ದೇಶಪೂರ್ವಕವಾಗಿ ಈ ಕೃತ್ಯ ಎಸಲಾಗಿದ್ದು, ಹಿಂದೂ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರು ದಾಖಲಿಸಲಾಗಿದೆ.

ಫುಡ್‌ ಜಿಹಾದ್‌ ಚಿತ್ರ 'ಅನ್ನಪೂರ್ಣಿ' ನಟಿ ನಯನತಾರಾ ಮೇಲೂ ಬಿತ್ತು ಕೇಸ್‌!

ಈ ದೂರಿನ ಆಧಾರದಲ್ಲಿ ಸೋಮವಾರದ ದೆಹಲಿ ಪೊಲೀಸರು ಬಿರಿಯಾನಿ ಶಾಪ್‌ಗೆ ದಾಳಿ ಮಾಡಿದ್ದಾರೆ. ಈ ವೇಳೆ ಶ್ರೀರಾಮನ ಭಾವಚಿತ್ರವಿರುವ ಪ್ಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. 4 ಪ್ಯಾಕ್ ಶ್ರೀರಾಮ ಚಿತ್ರವಿರುವ ಪ್ಲೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದೆಹಲಿಯ ಕೆಲ ಬಿರಿಯಾನಿ ಶಾಪ್‌ಗಳಲ್ಲಿ ಶ್ರೀರಾಮನ ಭಾವಚಿತ್ರವಿರುವ ಪ್ಲೇಟ್‌ಗಳು ಲೋಟಗಳನ್ನು ನೀಡಲಾಗುತ್ತಿದೆ. ಇದು ಉದ್ದೇಶಪೂರ್ವಕವಾಗಿ ಹಿಂದೂ ಭಾವನೆಗಳಿಗೆ ಧಕ್ಕೆ ತರಲು ಮಾಡಿರುವ ಕೆಲಸ ಎಂದು ಹಿಂದೂಸಂಘಟನೆಗಳು ಆರೋಪಿಸಿದೆ. ಈ ಪ್ಲೇಟ್ ಉತ್ಪಾದಿಸುತ್ತಿರುವ ಕೇಂದ್ರಗಳಿಗೆ ದಾಳಿ ಮಾಡಿ ಸೀಜ್ ಮಾಡಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದೆ.

ತುಮಕೂರು; ದೇವರ ಮೂರ್ತಿ ಮೇಲೆ ಚಪ್ಪಲಿ ಕಾಲಿಟ್ಟು ಯುವಕನ ವಿಕೃತಿ

ತನಿಖೆ ಭರವಸೆ ನೀಡಿರುವ ಪೊಲೀಸರು ಹಲವರಿಂದ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಬಿರಿಯಾನಿ ಶಾಪ್‌ಗೆ ಪ್ಲೇಟ್ ವಿತರಣೆ ಮಾಡುತ್ತಿರುವ, ಖರಿದಿಸುತ್ತಿರುವ ಡೀಲರ್‌ಗಳನ್ನು ವಿಚಾರಣೆ ನಡೆಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ.