ಪುಟ್ಟ ಹಕ್ಕಿಯ ಸುಂದರ ವಿಡಿಯೋ ವೈರಲ್‌ ಗೂಡು ಕಟ್ಟಲು ಕಡ್ಡಿ ಆರಿಸಿ ಪುಕ್ಕದಲ್ಲಿ ಸಂಗ್ರಹಿಸುವ ಹಕ್ಕಿ ಕೊಲಂಬಿಡೆ ಕುಟುಂಬಕ್ಕೆ ಸೇರಿದ ನೀಲಿ ಹಸಿರು ಮಿಶ್ರಿತ ಬಣ್ಣದ ಹಕ್ಕಿ

ಹಕ್ಕಿಯೊಂದು ಗೂಡು ಕಟ್ಟುವ ಸಲುವಾಗಿ ತನ್ನ ಪುಕ್ಕದ ಕೆಳಗೆ ಎಲೆಗಳು ಮತ್ತು ಅದರ ಕಡ್ಡಿಗಳನ್ನು ಸಂಗ್ರಹಿಸುತ್ತಿರುವ ಅಪರೂಪದ ವಿಡಿಯೊವೊಂದು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಈ ಅಪರೂಪದ ವಿಡಿಯೋ ನೋಡುಗರನ್ನು ಸೋಜಿಗ ಗೊಳಿಸುತ್ತಿದೆ. ಹಲವು ಜೀವ ವೈವಿಧ್ಯಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿರುವ ಪ್ರಕೃತಿ ಸೌಂದರ್ಯಕ್ಕೆ ಸರಿಸಾಟಿಯಾದುದು ಬೇರೆ ಯಾವುದು ಇಲ್ಲ. ಈ ವಿಡಿಯೋ ಪ್ರಕೃತಿಯ ಸಹಜ ಸೌಂದರ್ಯಕ್ಕೊಂದು ಉದಾಹರಣೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ (IPS officer) ದೀಪಾಂಶು ಕಾಬ್ರಾ ( Dipanshu Kabra) ಅವರು ನಿನ್ನೆ ಶುಕ್ರವಾರ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಡಿಯೋವನ್ನು ಈಗಾಗಲೇ 60 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ವೈರಲ್ ಆಗಿರುವ ವಿಡಿಯೋದಲ್ಲಿ ಕೊಲಂಬಿಡೆ(Columbidae) ಕುಟುಂಬಕ್ಕೆ ಸೇರಿದ ಸುಂದರವಾದ ನೀಲಿ-ಹಸಿರು ಹಕ್ಕಿ ತನ್ನ ಗೂಡು ಕಟ್ಟುತ್ತಿರುವುದನ್ನು ಕಾಣಬಹುದು. ಎಷ್ಟು ನಾಜುಕಾಗಿ ಇದು ಕೆಲಸ ಮಾಡುತ್ತಿದೆ ಎಂಬುದು ಈ ವಿಡಿಯೋದಲ್ಲಿ ಕಾಣುತ್ತಿದೆ. ಸ್ಪಷ್ಟವಾಗಿ ಅದು ಎಲೆಯೊಂದರ ಮಧ್ಯೆ ಇರುವ ದಂಡನ್ನು ತನ್ನ ಕೊಕ್ಕಿನಿಂದ ಬಿಡಿಸಿ ತೆಗೆಯುವ ಈ ಹಕ್ಕಿ ಅದನ್ನು ಅಷ್ಟೇ ನಾಜೂಕಾಗಿ ತನ್ನ ಹಿಂಭಾಗದ ಪುಕ್ಕದ ಕೆಳಗೆ ಸಿಕ್ಕಿಸಿಕೊಳ್ಳುತ್ತದೆ. ಈ ಹಕ್ಕಿಯ ಚಾಣಾಕ್ಷತನ ನೋಡುಗರಿಗೆ ಅಚ್ಚರಿ ಮೂಡಿಸಿದೆ. 

Scroll to load tweet…
Scroll to load tweet…
Scroll to load tweet…

ಪ್ರಕೃತಿಯ ಅತ್ಯಂತ ನುರಿತ ವಾಸ್ತುಶಿಲ್ಪಿ ಎಂದು ಈ ಪಕ್ಷಿಯನ್ನು ಪರಿಗಣಿಸಬಹುದು ಎಂದು ಬರೆದು ದೀಪಾಂಶು ಕಬ್ರಾ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಪಕ್ಷಿಯ ಪರಿಣತಿ ಮತ್ತು ಕೌಶಲ್ಯಗಳನ್ನು ಶ್ಲಾಘಿಸಿ ಕಾಮೆಂಟ್ ಮಾಡಿದ್ದಾರೆ. 

ಮೊಟ್ಟೆ ಕದಿಯಲು ಗೂಡಿಗೆ ಬಂದ ಕಳ್ಳ ಹಾವನ್ನು ಪುಟ್ಟ ಹಕ್ಕಿ ಹೇಗೆ ಓಡಿಸಿತು ನೋಡಿ... ವಿಡಿಯೋ ವೈರಲ್‌

ಸಂಗ್ರಹಣೆ (Procurement), ಸಾಗಣೆ (transporting) ಮತ್ತು ಉತ್ಪಾದನೆ (manufacture) ಎಲ್ಲವನ್ನು ಏಕಾಂಗಿಯಾಗಿ ಮಾಡುವ ಈ ಹಕ್ಕಿ 3 ಇಲಾಖೆಗಳೊಂದಿಗೆ ವ್ಯವಹರಿಸುವುದಕ್ಕೆ ಉತ್ತಮ ಉದಾಹರಣೆ ಎಂದು ನೋಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ನೋಡುಗರು, 'ಇವರು ಪ್ರಕೃತಿಯ ಅತ್ಯುತ್ತಮ ವಾಸ್ತುಶಿಲ್ಪಿಗಳು' ಎಂದು ಕಾಮೆಂಟ್ ಮಾಡಿದ್ದಾರೆ. ಕೊಲಂಬಿಡೆ ಪಕ್ಷಿ ಕುಟುಂಬವು ಪಾರಿವಾಳಗಳನ್ನು ಒಳಗೊಂಡಿದೆ. ಅವು ಚಿಕ್ಕದಾಗಿ ದಪ್ಪವಾಗಿ ಇರುವ ಪಕ್ಷಿಗಳಾಗಿದ್ದು, ಚಿಕ್ಕ ಕುತ್ತಿಗೆ ಮತ್ತು ತೆಳ್ಳಗಿನ ಕೊಕ್ಕುಗಳನ್ನು ಹೊಂದಿರುತ್ತವೆ. ಬೀಜಗಳು, ಹಣ್ಣುಗಳು ಮತ್ತು ಸಸ್ಯಗಳನ್ನು ತಿನ್ನುತ್ತವೆ.

No Visa No Passport... ತಮಿಳುನಾಡಿನ ಈ ಪಕ್ಷಿಧಾಮದಲ್ಲಿ ಈಗ ವಿದೇಶಿಯರದ್ದೇ ಕಲರವ...!

ಹಕ್ಕಿಯೊಂದು ತನ್ನ ಮರಿ ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಹಾವಿನ ಜೊತೆ ಹೋರಾಡುವ ವಿಡಿಯೋವೊಂದು ನಿನ್ನೆಯಷ್ಟೇ ವೈರಲ್‌ ಆಗಿತ್ತು.