ಇತ್ತೀಚಿನ ವರ್ಷಗಳಲ್ಲೇ ದೊಡ್ಡ ಚಂಡಮಾರುತಕ್ಕೆ ಒಂದೂ ಸಾವು ಸಂಭವಿಸದ ನಿದರ್ಶನ ಇದಾಗಿದೆ. ಆದರೆ 23 ಜನರು ಗಾಯಗೊಂಡಿದ್ದಾರೆ. ಚಂಡಮಾರುತ ಈಗ ದುರ್ಬಲಗೊಂಡು ರಾಜಸ್ಥಾನದತ್ತ ತೆರಳಿದೆ.

ಅಹಮದಾಬಾದ್‌ (ಜೂನ್ 17, 2023): ಅರಬ್ಬಿ ಸಮುದ್ರದಲ್ಲಿ ಎದ್ದ ಶಕ್ತಿಶಾಲಿ ಬಿಪೊರ್‌ಜೊಯ್‌ ಚಂಡಮಾರುತದ ಸವಾಲನ್ನು ಗೆಲ್ಲುವಲ್ಲಿ ಗುಜರಾತ್‌ ಯಶಸ್ವಿಯಾಗಿದೆ. ಗುರುವಾರ ಜಕಾವು ಬಂದರಿಗೆ ಅಪ್ಪಳಿಸಿದ ಚಂಡಮಾರುತ ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ ಸುರಿಸಿ ಶುಕ್ರವಾರ ಸಂಜೆಯವರೆಗೂ ಅಪಾರ ಹಾನಿ ಉಂಟುಮಾಡಿದೆ. ಆದರೆ ರಾಜ್ಯ ಸರ್ಕಾರ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದ್ದ ಕಾರಣ ಒಂದೇ ಒಂದು ಜೀವಹಾನಿ ಸಂಭವಿಸಿಲ್ಲ. 

ಇತ್ತೀಚಿನ ವರ್ಷಗಳಲ್ಲೇ ದೊಡ್ಡ ಚಂಡಮಾರುತಕ್ಕೆ ಒಂದೂ ಸಾವು ಸಂಭವಿಸದ ನಿದರ್ಶನ ಇದಾಗಿದೆ. ಆದರೆ 23 ಜನರು ಗಾಯಗೊಂಡಿದ್ದಾರೆ. ಚಂಡಮಾರುತ ಈಗ ದುರ್ಬಲಗೊಂಡು ರಾಜಸ್ಥಾನದತ್ತ ತೆರಳಿದೆ.

ಇದನ್ನು ಓದಿ: ಗಂಟೆಗೆ 150 ಕಿ.ಮೀ. ವೇಗ​ದಲ್ಲಿ ‘ಬಿ​ಪೊ​ರ್‌​ಜೊ​ಯ್‌’ ಚಂಡ​ಮಾ​ರು​ತದ ಅಬ್ಬ​ರ: ಸಂಜೆ ಅಪ್ಪ​ಳಿ​ಸ​ಲಿದೆ ಡೆಡ್ಲಿ ಸೈಕ್ಲೋನ್‌

ಆದರೂ, ಗುಜರಾತ್‌ನ ಕರಾವಳಿಗೆ ಅಪ್ಪಳಿಸಿದ ಬಿಪೊರ್‌ಜೊಯ್‌ ಚಂಡಮಾರುತದಿಂದಾಗಿ ರಾಜ್ಯದಲ್ಲಿ ಅಪಾರ ಹಾನಿ ಉಂಟಾಗಿದೆ. 

ಹಾನಿಯ ಪ್ರಮಾಣ

  • 5120 - ವಿದ್ಯುತ್‌ ಕಂಬಗಳು ಧರಾಶಾಹಿ
  • 4600 - ಗ್ರಾಮಗಳಿಗೆ ವಿದ್ಯುತ್‌ ಕಡಿತ (ಈ ಪೈಕಿ 3560 ಗ್ರಾಮಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ)
  • 524 - ಜಾನೂವಾರು / ಪ್ರಾಣಿಗಳು ಸಾವು
  • 476 - ಮನೆಗಳಿಗೆ ಭಾಗಶ: ಹಾನಿ ಉಂಟಾಗಿದೆ

ಇದನ್ನೂ ಓದಿ: ನಾಳೆ ಅಪ್ಪಳಿಸಲಿದೆ ಬಿಪೊರ್‌ಜೊಯ್‌ ಚಂಡಮಾರುತ: ಗುಜರಾತ್‌ಗೆ ಗಂಡಾಂತರ; 90 ರೈಲು ಸಂಚಾರ ರದ್ದು

ಸಂಭಾವ್ಯ ಹೆಚ್ಚಿನ ಹಾನಿ ತಪ್ಪಿಸಿದ್ದು ಹೇಗೆ?
1. ಚಂಡಮಾರುತದ ಸುಳಿವು ಸಿಕ್ಕ ಬೆನ್ನಲ್ಲೇ ಕರಾವಳಿ ಪ್ರದೇಶದಿಂದ 1 ಲಕ್ಷ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿತ್ತು
2. ಚಂಡಮಾರುತದ ವೇಳೆ ಬಿದ್ದು ಅನಾಹುತ ಉಂಟುಮಾಡುವ 4 ಸಾವಿರಕ್ಕೂ ಹೆಚ್ಚು ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಲಾಗಿತ್ತು
3. ಗಿರ್‌ ಅರಣ್ಯದಲ್ಲಿ 200 ಸಿಬ್ಬಂದಿಗಳನ್ನು ಬಳಸಿ ಸುಮಾರು 700 ಏಷ್ಯಾಟಿಕ್‌ ಸಿಂಹಗಳನ್ನು ಸುರಕ್ಷಿತ ಸ್ಥಳಗಳ ಕಡೆಗೆ ಓಡಿಸಲಾಗಿತ್ತು
4. ಪ್ರವಾಹದಿಂದ ಜನರನ್ನು ರಕ್ಷಿಸಲು 18 ಎನ್‌ಡಿಆರ್‌ಎಫ್‌, 12 ಎಸ್‌ಡಿಆರ್‌ಎಫ್‌, 115 ರಸ್ತೆ ನಿರ್ಮಾಣ ತಂಡಗಳ ನಿಯೋಜನೆ
5. ವಿದ್ಯುತ್‌ ಇಲಾಖೆಯ 400 ತಂಡ ನಿಯೋಜನೆ. ಜೊತೆಗೆ ಸೇನೆ, ನೌಕಾಪಡೆ, ವಾಯಪಡೆ, ಕರಾವಳಿ ಪಡೆ ಕೂಡಾ ಕಾರ‍್ಯಸನ್ನದ್ಧ
6. ಸಮುದ್ರ ತೀರದ ಬಂದರುಗಳಲ್ಲಿ ನಿಂತಿದ್ದ ಬೃಹತ್‌ ಹಡಗುಗಳನ್ನು ಮೊದಲೇ ಸ್ಥಳಾಂತರಿಸಿ ಸಂಭವನೀಯ ಹಾನಿಯಿಂದ ರಕ್ಷಣೆ
7. ಬಿರುಗಾಳಿಯಿಂದ ಬೀಳಬಹುದು ಎಂದು ದ್ವಾರಕಾದಲ್ಲಿರುವ ರೇಡಿಯೋ ಸ್ಟೇಶನ್‌ನ ಟವರ್‌ ಕೂಡ ಮೊದಲೇ ಕಳಚಿಡಲಾಗಿತ್ತು

ಇದನ್ನು ಓದಿ: ನಾಳೆ ಅಪ್ಪಳಿಸಲಿದೆ ಬಿಪೊರ್‌ಜೊಯ್‌ ಚಂಡಮಾರುತ: ಗುಜರಾತ್‌ಗೆ ಗಂಡಾಂತರ; 90 ರೈಲು ಸಂಚಾರ ರದ್ದು