ಪ್ರಧಾನಿ ನರೇಂದ್ರ ಮೋದಿ ನಡೆಸಿಕೊಡುವ ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಕಂತು ಎಪ್ರಿಲ್ 30ಕ್ಕೆ ಪ್ರಸಾರವಾಗಲಿದೆ. ಇದೀಗ ಈ ಕಾರ್ಯಕ್ರಮವನ್ನು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಕೊಂಡಾಡಿದ್ದಾರೆ. ಕಾರ್ಯಕ್ರಮ ಹಾಗೂ ಪ್ರಧಾನಿ ನರೇಂದ್ರ ಮೋದಿ ಕುರಿತು ಮಹತ್ವದ ಮಾತುಗಳನ್ನಾಡಿದ್ದಾರೆ. 

ನವದೆಹಲಿ(ಏ.29): ದೇಶ ವಿದೇಶದಲ್ಲಿ ಜನಪ್ರಿಯವಾಗಿರುವ ಮನ್ ಕಿ ಬಾತ್ 100ನೇ ಕಂತು ಎಪ್ರಿಲ್ 30ಕ್ಕೆ ಪ್ರಸಾರವಾಗುತ್ತಿದೆ. ಈ ವಿಶೇಷ ಕಂತು ಈಗಾಗಲೇ ಭಾರಿ ಸಂಚಲನ ಸೃಷ್ಟಿಸಿದೆ. ಮನ್ ಕಿ ಬಾತ್ 100ನೇ ವಿಶೇಷ ಕಾರ್ಯಕ್ರಮದಲ್ಲಿ ದೇಶದ ಹಲವು ಗಣ್ಯರು ಪಾಲ್ಗೊಂಡು ಮಾತನಾಡಿದ್ದಾರೆ. ಇಡೀ ದೇಶವೇ ಮನ್ ಕಿ ಬಾತ್ 100ನೇ ಕಂತಿನ ಸಂಭ್ರಮದಲ್ಲಿದೆ. ಇದೀಗ ಈ ಸಂಭ್ರಮ ಡಬಲ್ ಆಗಿದೆ. ಮೈಕ್ರೋಸಾಫ್ಟ್ ಸಂಹ ಸಂಸ್ಥಾಪಕ, ವಿಶ್ವದ 4ನೇ ಶ್ರೀಮಂತ ಬಿಲ್ ಗೇಟ್ಸ್, ಮನ್ ಕಿ ಬಾತ್ ಕಾರ್ಯಕ್ರವನ್ನು ಮೆಚ್ಚಿಕೊಂಡಿದ್ದಾರೆ. ದೇಶದಲ್ಲಿ ನಾಗರೀಕರ ಪ್ರಜ್ಞೆಯ ಜೊತೆಗೆ ಸುಸ್ಥಿರ ಅಭಿವೃದ್ಧಿ ವೇಗದಲ್ಲಿ ಮನ್ ಕಿ ಬಾತ್ ಮಹತ್ತರ ಕೊಡುಗೆ ನೀಡಿದೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.

ಮನ್ ಕಿ ಬಾತ್ ಕಾರ್ಯಕ್ರದ ಮೂಲಕ ಭಾರತದಲ್ಲಿ ನೈರ್ಮಲ್ಯ, ಆರೋಗ್ಯ, ಮಹಿಳಾ ಆರ್ಥಿಕ ಸಬಲೀಕರಣದ ಜೊತೆಗೆ ಸುಸ್ಥಿರ ಅಭಿವೃದ್ಧಿ, ಸಮುದಾಯ ನೇತೃತ್ವದ ಕಾರ್ಯಕ್ರಮಗಳ ವೇಗ ಹೆಚ್ಚಿಸಿದೆ. 100ನೇ ಕಂತಿಗೆ ಸಜ್ಜಾಗಿರುವ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಎಂದು ಬಿಲ್ ಗೇಟ್ಸ್ ಟ್ವೀಟ್ ಮಾಡಿದ್ದಾರೆ.

ಮನ್‌ ಕೀ ಬಾತ್‌' 100ನೇ ಸಂಚಿಕೆ: ವಿವಿಧ ಕ್ಷೇತ್ರದ ದಿಗ್ಗಜರಿಂದ ಪ್ರಶಂಸೆಯ ಸುರಿಮಳೆ

2014ರಲ್ಲಿ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮ ಆರಂಭಿಸಿದರು. ರೇಡಿಯೋ ಮೂಲಕ ಪ್ರಸಾರವಾಗುವ ಈ ಕಾರ್ಯಕ್ರಮ ಅಷ್ಟೇ ವೇಗದಲ್ಲಿ ಭಾರತದಲ್ಲಿ ಜನಪ್ರಿಯವಾಗಿದೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯ, ದೇಶದ ಸಂಸ್ಕೃತಿ, ಕಲೆ, ಪ್ರತಿಭೆಗಳನ್ನು ಉಲ್ಲೇಖಿದ್ದಾರೆ. ಸಾಧಕರ ನಡೆ, ಪ್ರಯತ್ನ, ಮೂಲಭೂತ ಸೌಕರ್ಯ, ಮಹಿಳಾ ಸಂಘಗಳ ಆರ್ಥಿಕ ಸಬಲೀಕರಣ ಸೇರಿದಂತೆ ಹಲವು ವಿಚಾರಗಳ ಕುರಿತು ಮೋದಿ ಬೆಳಕು ಚೆಲ್ಲಿದ್ದಾರೆ. 

ಮನ್‌ ಕೀ ಬಾತ್‌ಗೆ 100ನೇ ಸಂಚಿಕೆ ತುಂಬುತ್ತಿರುವ ಹಿನ್ನೆಲೆಯಲ್ಲಿ ರೋಹ್ಟಕ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಈ ಸಮೀಕ್ಷೆ ನಡೆಸಿದೆ. ವಿಶೇಷವೆಂದರೆ ಈ ರೆಡಿಯೋ ಕಾರ್ಯಕ್ರಮವನ್ನು ಶೇ.44.7ರಷ್ಟುಜನರು ಟೀವಿ ಮೂಲಕ, ಶೇ.37.6ರಷ್ಟುಜನರು ಮೊಬೈಲ್‌ ಮೂಲಕ ಮತ್ತು ಶೇ.17.6ರಷ್ಟುಜನರು ರೇಡಿಯೋ ಮೂಲಕ ಆಲಿಸುತ್ತಾರೆ. ಶೇ.65ರಷ್ಟುಜನ ಈ ಕಾರ್ಯಕ್ರಮವನ್ನು ಹಿಂದಿಯಲ್ಲಿ ಕೇಳಲು ಇಷ್ಟಪಡುತ್ತಾರೆ. ಈ ಕಾರ್ಯಕ್ರಮವನ್ನು 100 ಕೋಟಿ ಜನರು ಒಮ್ಮೆಯಾದರೂ ಕೇಳಿದ್ದಾರೆ. ಶೇ.41 ಕೋಟಿ ಜನರು ಸಾಂದರ್ಭಿಕ ಕೇಳುಗರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

Mann Ki Baat ಮೋದಿ ಕಾರ್ಯಕ್ರಮದಲ್ಲಿ ಗರಿಷ್ಠ ಬಾರಿ ಕರ್ನಾಟಕದ ಸಂಸ್ಕೃತಿ, ಸಾಧನೆ ಉಲ್ಲೇಖ!

ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು 22 ಭಾರತೀಯ ಭಾಷೆಗಳ ಜೊತೆಗೆ 29 ಆಡುಭಾಷೆಗಳಲ್ಲೂ ಪ್ರಸಾರ ಮಾಡಲಾಗುತ್ತದೆ. ಅಲ್ಲದೇ ಈ ಕಾರ್ಯಕ್ರಮ ಫ್ರೆಂಚ್‌, ಚೈನೀಸ್‌, ಇಂಡೋನೇಷಿಯನ್‌, ಟಿಬೇಟಿಯನ್‌, ಬರ್ಮೀಸ್‌, ಬಲೂಚಿ, ಅರೇಬಿಕ್‌, ಪಾಷ್ತು. ಪರ್ಶಿಯನ್‌, ದಾರಿ ಮತ್ತು ಸ್ವಾಹಿಲಿ ಭಾಷೆಗಳಲ್ಲೂ ಪ್ರಸಾರವಾಗುತ್ತದೆ.ಮನ್‌ ಕೀ ಬಾತ್‌ ಕೇಳಿದ ಬಳಿಕ ಶೇ.73ರಷ್ಟುಮಂದಿ ಸರ್ಕಾರದ ಪರವಾಗಿ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಶೇ.58ರಷ್ಟುಮಂದಿ ತಮ್ಮ ಜೀವನ ಮಟ್ಟಸುಧಾರಿಸಿದೆ ಎಂದು ಹೇಳಿದ್ದಾರೆ. ಶೇ.59ರಷ್ಟುಮಂದಿ ಸರ್ಕಾರದ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ಮನ್‌ ಕೀ ಬಾತ್‌‌ಗೆ ಅಮೀರ್ ಖಾನ್ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕಿ ಬಾತ್‌’ ಕಾರ‍್ಯಕ್ರಮವು ಮೋದಿ ಮತ್ತು ದೇಶದ ನಾಗರೀಕರ ನಡುವೆ ಸಂಪರ್ಕ ಬೆಸೆಯುವ ಬಹುಮುಖ್ಯ ಸಾಧನ’ ಎಂದು ಬಾಲಿವುಡ್‌ ನಟ ಅಮೀರ್‌ ಖಾನ್‌ ಪ್ರಶಂಸಿಸಿದ್ದಾರೆ. ‘ಮನ್‌ ಕಿ ಬಾತ್‌’ ರೇಡಿಯೋ ಕಾರ‍್ಯಕ್ರಮದ 100ನೇ ಸಂಚಿಕೆ ಏ.30ಕ್ಕೆ ಬಿತ್ತರ ಆಗುತ್ತಿರುವ ಅಂಗವಾಗಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದ ನಾಯಕನೊಬ್ಬ ತನ್ನ ಪ್ರಜೆಗಳೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸುವುದು, ತನ್ನ ಆಲೋಚನೆಗಳನ್ನು ವ್ಯಕ್ತಪಡಿಸುವುದು, ಸಲಹೆಗಳನ್ನು ನೀಡುವುದು ಬಹಳ ಅಗತ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು. ಸಮಾವೇಶವನ್ನು ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಅವರು ಉದ್ಘಾಟಿಸಿದರು. ಕೇಂದ್ರ ವಾರ್ತಾ ಸಚಿವ ಅನುರಾಗ್‌ ಠಾಕೂರ್‌ ಉಪಸ್ಥಿತರಿದ್ದರು.