Mann Ki Baat ಮೋದಿ ಕಾರ್ಯಕ್ರಮದಲ್ಲಿ ಗರಿಷ್ಠ ಬಾರಿ ಕರ್ನಾಟಕದ ಸಂಸ್ಕೃತಿ, ಸಾಧನೆ ಉಲ್ಲೇಖ!

ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್‌ಗೆ 100ರ ಸಂಭ್ರಮ. ಕಳೆದ 99 ಕಂತುಗಳಲ್ಲಿ ಮೋದಿ, ದೇಶದ ಹಲವು ಸಾಧಕರು, ಸಂಸ್ಕೃತಿ, ಮಾದರಿ ನಡೆ ಸೇರಿದಂತೆ ಹಲವು ಘಟನೆಗಳನ್ನು ಉಲ್ಲೇಖಿಸಿದ್ದಾರೆ. ಇದರಲ್ಲಿ ಗರಿಷ್ಠ ಬಾರಿ ಕರ್ನಾಟಕ ಸ್ಥಾನ ಪಡೆದಿದೆ. ಮನ್ ಕಿ ಬಾತ್ ಮೂಲಕ ಮೋದಿ ಕರ್ನಾಟಕದ ಸಂಸ್ಕೃತಿ, ಮಾದರಿ ನಡೆ, ಕೃಷಿ, ತಂತ್ರಜ್ಞಾನ, ಸಾಧನೆ ಸೇರಿದಂತೆ ಹಲವು ಘಟನೆಗಳನ್ನು ಉಲ್ಲೇಖಿಸಿದ್ದಾರೆ. 
 

Mann Ki Baat special PM Modi showcase Karnataka vibrant culture innovative technology agriculture last 99 episode ckm

ನವದೆಹಲಿ(ಏ.22): ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಆರಂಭಿಸಿದ ಮನ್ ಕಿ ಬಾತ್ ರೇಡಿಯಾ ಕಾರ್ಯಕ್ರಮ ದೇಶದ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದೆ. ಭಾರತದ ಎಲ್ಲಾ ರಾಜ್ಯ ಭಾಷೆಗಳು, ಉಪಭಾಷೆ, 11 ವಿದೇಶಿ ಭಾಷೆಗಳಲ್ಲಿ ಸೇರಿ ಒಟ್ಟು 52 ಭಾಷೆಗಳಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. 99 ಕಂತುಗಳನ್ನು ಪೂರೈಸಿರುವ ಮನ್ ಕಿ ಬಾತ್, ಈ ತಿಂಗಳ ಅಂತ್ಯದಲ್ಲಿ 100ನೇ ಕಂತು ಪ್ರಸಾರವಾಗಲಿದೆ. ಕಳೆದ 99 ಎಪಿಸೋಡ್‌ಗಳಲ್ಲಿ ಮೋದಿ ದೇಶದಲ್ಲಿ ಮೂಲೆ ಮೂಲೆಯಲ್ಲಿನ ವಿಶಿಷ್ಠ, ಮಾದರಿ ವಿಚಾರಗಳನ್ನು ಬೆಳಕಿಗೆ ತಂದಿದ್ದಾರೆ. ಹಲವು ರಾಜ್ಯಗಳ ಸಂಸ್ಕೃತಿಯನ್ನು ದೇಶ ವಿದೇಶಕ್ಕೆ ಪರಿಚಯಿಸಿದ್ದಾರೆ. ಹೀಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕರ್ನಾಟಕದ ಸಂಸ್ಕೃತಿ, ಇಲ್ಲಿನ ಆವಿಷ್ಕಾರ, ತಂತ್ರಜ್ಞಾನ, ಸಾಧನೆ ಸೇರಿದಂತೆ ಹಲವು ವಿಚಾರಗಳ ಕುರಿತು ಗರಿಷ್ಠ ಬಾರಿ ಬೆಳಕು ಚೆಲ್ಲಿದ್ದಾರೆ. 

ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಬೀದರ್ ಜಿಲ್ಲೆಯ ಹುಲ್ಸೂರು ಸಿರಿಧಾನ್ಯ ಕಂಪನಿ ಹಾಗೂ ಕಲಬುರಗಿಯ ಅಳಂದ  ಭೂತಾಯಿ ಸಿರಿಧಾನ್ಯ ಕಂಪನಿ ಕುರಿತು ಉಲ್ಲೇಖಿಸಿದ್ದರು. ಮಹಿಳೆರೇ ನಡೆಸುತ್ತಿರುವ ಈ ಕಂಪನಿ ಸಿರಿಧಾನ್ಯ ಕೃಷಿ ಜೊತೆ ಹಿಟ್ಟನ್ನು ತಯಾರಿಸುತ್ತಿದ್ದಾರೆ. ಇದರಿಂದ ಇವರ ಆದಾಯ ಇಮ್ಮಡಿಯಾಗಿದೆ. ಈ ಮಹಿಯರ ಸ್ವಾವಲಂಬಿ ಬದುಕು ಹಾಗೂ, ದೇಶದಲ್ಲಿ ಸಿರಿಧಾನ್ಯವನ್ನು ಮತ್ತಷ್ಟು ಬೆಳೆಯುವಂತಾಗಲು ಇವರ ಕಾರ್ಯ ಮಾದರಿಯಾಗಿದೆ ಎಂದು ಮೋದಿ ಹೇಳಿದ್ದರು. 

ಶಿವಮೊಗ್ಗ ದಂಪತಿ, ಗದಗ ಉದ್ಯಮಿಗೆ ಮೋದಿ ಪ್ರಶಂಸೆ

ಕೋವಿಡ್ ಸಂದರ್ಭದಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದ ಮಹಿಳೆಯರು ವಿಶೇಷವಾದ ದೋಸೆ, ಗುಲಬ್ ಜಾಮೂನು ಸೇರಿದಂತೆ ಇತರ ಆಹಾರ ಉತ್ಪನ್ನಗಳ ಉದ್ಯಮ ಆರಂಭಿಸಿದ್ದಾರೆ. ಬಾಳೆಹಣ್ಣಿನ ಸ್ವಾದವಿರುವ ಈ ಉತ್ಪನ್ನಗಳು ಅತ್ಯಂತ ಜನಪ್ರಿಯವಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ಈ ಉತ್ಪನ್ನಗಳ ಕುರಿತು ಮಾಹಿತಿ ಪಡೆದ ಮಹಿಳೆಯರು ಬಳಿಕ ಸ್ವಂತ ಉದ್ದಿಮೆ ಆರಂಭಿಸಿ ಯಶಸ್ವಿಯಾಗಿದ್ದಾರೆ. ಇದೀಗ ಈ ಉತ್ಪನ್ನಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. 

ಮೋದಿ ತಮ್ಮ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವಾ ಬ್ರಿಗೇಡ್ ತಂಡವನ್ನು ಅಭಿನಂದಿಸಿದ್ದರು. ಯುವಾ ಬ್ರಿಗೇಡ್ ರಾಜ್ಯದ ಹಲವು ಪವಿತ್ರ ಕ್ಷೇತ್ರಗಳನ್ನು ಶುಚಿಗೊಳಿಸುವ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ. ಶ್ರೀರಂಗಪಟ್ಟಣ ಸಮೀಪದಲ್ಲಿರುವ ಅತ್ಯಂತ ಪುರಾತನವಾದ ಪಾಳುಬಿದ್ದ ವೀರಭದ್ರ ಸ್ವಾಮಿ ದೇವಸ್ಥಾನ ಹಾಗೂ ಆವರಣ ಶುಚಿಗೊಳಿಸಿತ್ತು. ಈ ದೇವಸ್ಥಾನಕ್ಕೆ ಹೊಸ ಕಾಯಕಲ್ಪ ನೀಡಿತ್ತು. ಸೋಮವೇಶ್ವರ ಸಮುದ್ರ ಕಿನಾರೆ ಶುಚಿಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಯುವಾ ಬ್ರಿಗೇಡ್ ಕಾರ್ಯವನ್ನು ಮನ್ ಕಿ ಬಾತ್‌ನಲ್ಲಿ ಹೇಳುವ ಮೂಲಕ ಇತರರಿಗೆ ಸ್ಪೂರ್ತಿ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣಗಳಲ್ಲಿ ಹಲವು ಬಾರಿ ಬಸವೇಶ್ವರರ ಕುರಿತು ಮಾತನಾಡಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ್, ರಾಮಾನುಜಚಾರ್ಯರ ಕುರಿತು ಮಾತನಾಡುವಾಗಿ ಬಸವಣ್ಣನ ಕಾಯಕವೇ ಕೈಲಾಸದ ವಿಶೇಷತೆ ಹಾಗೂ ಅರ್ಥವನ್ನು ಹೇಳಿದ್ದರು. 

Mann Ki Baat: ಏಕತಾ ದಿನದ ಸ್ಪರ್ಧೆ ವಿಜೇತ ಚಾಮರಾಜನಗರ ಜಿಲ್ಲೆಯ ಮಂಜುನಾಥ್‌ಗೆ ಪ್ರಧಾನಿ ಮೋದಿ ಶ್ಲಾಘನೆ

ದೇಶದಲ್ಲಿ ಅತೀ ಹೆಚ್ಚಿನ ಸ್ಟಾರ್ಟ್ಅಪ್ ಬೆಂಗಳೂರಿನಲ್ಲಿ ಜನ್ಮತಾಳಿ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಇದರಲ್ಲಿ ಇ ವೇಸ್ಟ್ ಮ್ಯಾನೇಜ್ಮೆಂಟ್ ಕುರಿತ ಇ ಪರಿಸರ ಸ್ಟಾರ್ಟ್ ಅಪ್ ಕಂಪನಿ ಕುರಿತು ಉಲ್ಲೇಖಿಸಿದ್ದರು. ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಉತ್ಪನ್ನ ತಯಾರಿಸುವ ಈ ಮೂಲಕ ಇ ತ್ಯಾಜ್ಯ ಕಡಿಮೆ ಮಾಡುವ ಈ ಸ್ಟಾರ್ಟ್ ಅಪ್ ಕಂಪನಿ ಭವಿಷ್ಯದಲ್ಲಿ ಅತ್ಯಂತ ಉಪಯುಕ್ತ ಎಂದಿದ್ದರು. 

ಪದ್ಮಶ್ರೀ ಪುರಸ್ಕೃತ ಸೂಲಗತ್ತಿ ನರಸಮ್ಮ ಕುರಿತು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ. ಶಿವಕುಮಾರ ಸ್ವಾಮೀಜಿಯ ಅವರ ತುಮಕೂರು ಜಿಲ್ಲೆಯ ಹಳ್ಳಿಯಲ್ಲಿ ನರಸಮ್ಮ ಗರ್ಭೀಣಿ ಮಹಿಳೆಯರು ಆರೈಕೆಯಲ್ಲಿ ತೊಡಗಿ ದೇಶಕ್ಕೆ ಮಾದರಿಯಾದ್ದಾರೆ ಎಂದಿದ್ದರು. ಭಾರತದ ಸಾಂಪ್ರಾದಾಯಿಕ ಆಟಿಕೆಗಳಲ್ಲಿ ಇತಿಹಾಸಹೊಂದಿದೆ. ಈ ಕುರಿತು ಮಾತನಾಡುವಾಗ ಮೋದಿ, ಚನ್ನಪಟ್ಟಣದ ಗೊಂಬೆಗಳ ಕುರಿತು ಉಲ್ಲೇಖಿಸಿದ್ದಾರೆ.

ಕರ್ನಾಟಕದ ಕೆಲವರು ದೇಶಕ್ಕೆ ಮಾದರಿಯಾಗಿದ್ದಾರೆ. ಇವರ ಕೆಲ ನಿರ್ಧಾರಗಳು ದೇಶಕ್ಕೆ ಸ್ಪೂರ್ತಿ ನೀಡಲಿದೆ ಎಂದ ಪ್ರಧಾನಿ ಮೋದಿ, ಕೊಪ್ಪಳ ಜಿಲ್ಲೆಯ ಮಲ್ಲಮ್ಮನ ಕುರಿತು ಹೇಳಿದ್ದಾರೆ. ಶೌಚಾಲಯಕ್ಕಾಗಿ ಸತ್ಯಾಗ್ರಹ ಕುಳಿತ ಮಲ್ಲಮ್ಮ, ವೈಟ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ಅಕ್ಷಯ ಬಸವಣಿ ಕಾಮತ್ ದೇಶಕ್ಕೆ ಸ್ಪೂರ್ತಿಯಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ. 

ಬೆಂಗಳೂರಿನ ಸಹಕಾರನಗರದಲ್ಲಿ ಹಸಿರು ಸಂಪತ್ತು ಉಳಿಸುವ ಕಾರ್ಯದಲ್ಲಿ ತೊಡಗಿರುವ ಸುರೇಶ್ ಕುಮಾರ್ ಕಾರ್ಯವನ್ನು ಮೋದಿ ಶ್ಲಾಘಿಸಿದ್ದರು. ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ  ಸಹಕಾರನಗರಲ್ಲಿ ಬಸ್ ನಿಲ್ದಾಣ ನಿರ್ಮಿಸಿದ್ದಾರೆ. ನೀರು ಉಳಿಸಲು ಮಂಡವಲಿಯ ಕಾಮೇಗೌಡ ಅವರ ನಿರಂತರ ಪ್ರಯತ್ನವನ್ನು ಮೋದಿ ಶ್ಲಾಘಿಸಿದ್ದಾರೆ. ನೀರಿನ ಕುಂಡಗಳನ್ನು ಮಾಡಿ ವನ್ಯ ಜೀವಿಗಳಿಗೆ ಬಿಸಿಲ ಬೇಗೆಯಲ್ಲಿ ನೀರುಣಿಸುತ್ತಿರುವ ಕಾಮೇಗೌಡ ಅವರನ್ನು ಮೋದಿ ಪ್ರಶಂಸಿಸಿದ್ದರು.

Mann Ki Baat: ಪ್ರಧಾನಿ ಮೋದಿ ಪ್ರಶಂಸಿದ ಕೊಳ್ಳೇಗಾಲದ ಕವಿ ಮಂಜುನಾಥ್ ಮನೆಗೆ ಶಾಸಕ ಮಹೇಶ್ ಭೇಟಿ

ಕರ್ನಾಟಕ ಕಲೆ ಸಂಸ್ಕೃತಿಯನ್ನು ಕಲಾ ಚೇತನ ರಂಗವೇದಿಕೆ ಮೂಲಕ ಪೋಷಿಸುತ್ತಿರುವ ಖುಮೇಶ್ರಿ, ತೆಂಗಿನ ನಾರಿನಿನಿಂದ ಉತ್ಪನ್ನ ತಯಾರಿಸಿ ದೇಶ ವಿದೇಶದಲ್ಲಿ ಮಾರುಕಟ್ಟೆ ಪಡೆದಿರುವ ಸುರೇಶ್ ಹಾಗೂ ಅವರ ಪತ್ನಿ ಮಿಥಿಲಿ, ಬೆಂಗಳೂರಿನ ಆಟಿಕ ಕಂಪನಿ ಶುಮ್ಮೆ ಟಾಯ್ಸ್,  ಶಿರಸಿಯ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಸೇರಿದಂತೆ ಹಲವು ಸಾಧಕರನ್ನು ಮುಧೂಳದ ನಾಯಿ ಸೇರಿದಂತೆ ಹಲವು ನೈಸರ್ಗಿಕ ಶಕ್ತಿಯನ್ನು ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ.  

Latest Videos
Follow Us:
Download App:
  • android
  • ios