Asianet Suvarna News Asianet Suvarna News

ಮದ್ವೆಗೆ ಇಷ್ಟವಿಲ್ಲದೇ ಓಡಿ ಹೋದ ವರನ ಹಿಡಿದು ತಂದು ಮದ್ವೆಯಾದ ವಧು: ವೈರಲ್ ವಿಡಿಯೋ

ಮದ್ವೆಯಿಂದ ತಪ್ಪಿಸಿಕೊಂಡು ಓಡಿ ಹೋದ ವರನನ್ನು ವಧುವೇ ಬೆನ್ನಟ್ಟಿ ಹಿಡಿದ ಘಟನೆ ಬಿಹಾರದಲ್ಲಿ ನಡೆದಿದೆ.

Bihar woman chased and catchs groom in middle of the road, who run before marriage akb
Author
First Published Aug 30, 2022, 4:57 PM IST

ಕೆಲವೊಂದು ಮದ್ವೆಗಳು ಹೇಗೆ ಸಂಭವಿಸುತ್ತವೆ ಎಂದು ಹೇಳಲಾಗದು, ಅದರಲ್ಲೂ ಭಾರತದ ಮದುವೆಗಳಲ್ಲಿ ನಡೆಯುವ ನಾಟಕಗಳಿಗೆ ಲೆಕ್ಕವೇ ಇಲ್ಲ. ಕೆಲವೊಂದು ಮದುವೆ ದೃಶ್ಯಗಳು ಯಾವುದೇ ಸಿನಿಮಾ ಕತೆಗೂ ಕಡಿಮೆ ಇಲ್ಲದಷ್ಟು ರೋಚಕವಾಗಿರುತ್ತದೆ. ಅದರಲ್ಲೂ ಇತ್ತೀಚೆಗೆ ವಧು ಕೊನೆ ಕ್ಷಣದಲ್ಲಿ ಮದ್ವೆ ಮಂಟಪದಲ್ಲಿ ಮದುವೆ ನಿರಾಕರಿಸುವುದು ಸಾಮಾನ್ಯ ಎನಿಸಿದೆ. ಆದರೆ ಬಿಹಾರದಲ್ಲಿ ವರನೋರ್ವ ಮದುವೆಗೆ ಕೆಲ ಕ್ಷಣಗಳಿಗೆ ಮೊದಲು ಮದ್ವೆ ಮಂಟಪದಿಂದ ಓಡಿ ಹೋಗಿದ್ದಾನೆ. ಅದಕ್ಕಿಂತಲೂ ರೋಚಕ ವಿಚಾರ ಎಂದರೆ ಹೀಗೆ ಓಡಿ ಹೋದ ಹುಡುಗನನ್ನು ಹುಡುಗಿಯೇ ಬೆನ್ನಟ್ಟಿ ಹಿಡಿದುಕೊಂಡು ಬಂದಿದ್ದಾಳೆ. ಬಿಹಾರದ ನವಾಡದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಘಟನೆ ಯಾವುದೇ ಸಿನಿಮಾಗೂ ಕಡಿಮೆ ಇಲ್ಲದಂತೆ ನಡೆದಿದೆ. ಮದುವೆ ನಿರಾಕರಿಸಿ ರಸ್ತೆಯಲ್ಲಿ ಓಡುತ್ತಿದ್ದ ಆತನನ್ನು ಯುವತಿ ರಸ್ತೆಯಲ್ಲೇ ಬೆನ್ನಟ್ಟಿದ್ದಾಳೆ. ಹುಡುಗನ ಹಿಂದೆಯೇ ಹುಡುಗಿ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ನವಾಡದ ಭಗತ್ ಸಿಂಗ್ ಚೌಕ್‌ನಲ್ಲಿ ಈ ಘಟನೆ ನಡೆದಿದೆ. ಆಕೆಯ ಗಂಡನಾಗಬೇಕಾದ ಹುಡುಗ ಓಡಿ ಹೋಗುತ್ತಿರುವುದನ್ನು ನೋಡಿ ಸುಮ್ಮನೆ ಕೂರದ ವಧು ರಸ್ತೆ ಎಂಬುದನ್ನು ಕೂಡ ನೋಡದೇ ಓಡಿ ಹೋಗಿ ಆತನನ್ನು ಹಿಡಿದಿದ್ದಾಳೆ. ಈ ವೇಳೆ ಆಕೆಯ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಆತ ಮಾಡಿದ್ದಾನೆ. ಇದೇ ವೇಳೆ ಆಕೆಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಯುವತಿ ದಯವಿಟ್ಟು ನನ್ನನ್ನು ಮದುವೆಯಾಗು ಎಂದು ಆಕೆಯನ್ನು ಬೇಡುತ್ತಾಳೆ. 

ಈ ಘಟನೆಯಿಂದ ರಸ್ತೆಯಲ್ಲಿದ್ದವರೆಲ್ಲ ಕುತೂಹಲದಿಂದ ಸಿನಿಮಾ ನೋಡುವಂತೆ ಇವರನ್ನು ನೋಡುತ್ತಿದ್ದಾರೆ. ಹುಡುಗನನ್ನು ಕರೆದುಕೊಂಡು ಬಂದ ನಂತರವೂ ಆತ ತಪ್ಪಿಸಿಕೊಳ್ಳಲು ಹಲವು ಪ್ರಯತ್ನಗಳನ್ನು ಮಾಡಿದ್ದಾನೆ.

ನಮ್‌ ದುಡ್ಡು, ನಮ್‌ ಮದುವೆ; ಭಾರತದಲ್ಲಿ ಹೆಚ್ತಿದೆ ಸ್ವಂತ ಹಣದಲ್ಲೇ ನಡೆಯೋ ವೆಡ್ಡಿಂಗ್‌

ಆದರೆ ಮಾಧ್ಯಮಗಳ ವರದಿ ಪ್ರಕಾರ ಮಹಿಳೆಯ ಕುಟುಂಬ ಹೇಳುವಂತೆ ಈ ಹುಡುಗ ಹಾಗೂ ಹುಡುಗಿಗೆ ಮೂರು ತಿಂಗಳ ಹಿಂದೆ ಮದುವೆ ನಿಗದಿಯಾಗಿತ್ತು. ಅಲ್ಲದೇ ಯುವಕನ ಕುಟುಂಬಕ್ಕೆ 50 ಸಾವಿರ ರೂಪಾಯಿ ಹಾಗೂ ಒಂದು ಬೈಕ್‌ನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದಾಗ್ಯೂ ವರ ಮಾತ್ರ ಇಲ್ಲದ ನೆಪವೊಡ್ಡಿ ಮದುವೆಯನ್ನು ಮುಂದೂಡುತ್ತಲೇ ಇದ್ದ. ಈ ಮಧ್ಯೆ ಮದುವೆ ದಿನಾಂಕ ನಿಗದಿಯಾಗಿದ್ದು, ವರ ಕೊನೆ ಕ್ಷಣದವರೆಗೂ ಮದುವೆಗೆ ನಿರಾಕರಿಸುತ್ತಲೇ ಇದ್ದನ್ನಲ್ಲದೇ ಕೊನೆಕ್ಷಣದಲ್ಲಿ ಓಡಿ ಹೋಗಲು ನೋಡಿದ್ದಾನೆ. ಆದರೆ ಆತನನ್ನು ಸುಮ್ಮನೇ ಬಿಡದ ಯುವತಿ ಹಿಡಿದುಕೊಂಡು ಬಂದಿದ್ದಾಳೆ. ನಂತರ ಇದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಹುಡುಗ ಹಾಗೂ ಹುಡುಗಿ ಎರಡೂ ಕಡೆಯವರನ್ನು ಪೊಲೀಸ್ ಠಾಣೆಯಲ್ಲಿ ಕುಳ್ಳಿರಿಸಿ ಪಂಚಾತಿಕೆ ಮಾಡಿದ್ದಾರೆ. ಇದಾದ ಬಳಿಕ ಯುವಕ ಮದುವೆಗೆ ಒಪ್ಪಿದ್ದಾನೆ. ನಂತರ ಪೊಲೀಸ್ ಠಾಣೆಯ ಸಮೀಪದಲ್ಲೇ ಇದ್ದ ದೇಗುಲವೊಂದರಲ್ಲಿ ಯುವತಿ ಹಾಗೂ ಯುವಕನ ಮದುವೆ ನೆರವೇರಿದೆ. 

ಇದು ಪಾಕಿಸ್ತಾನದ ದಿಲ್ ಚಾಹ್ತಾ ಹೈ.. 70 ವರ್ಷದ ಅಜ್ಜಿಯನ್ನು ವಿವಾಹವಾದ 37 ವರ್ಷದ ಯುವಕ!

Follow Us:
Download App:
  • android
  • ios