ಪ್ರವಾದಿ ಮೊಹಮ್ಮದ್ ಮರ್ಯಾದ ಪುರುಷೋತ್ತಮ, ಇಸ್ಲಾಂ ಹೊಗಳಿ ಸನಾತನಧರ್ಮ ತೆಗಳಿದ ಮತ್ತೊಬ್ಬ ಸಚಿವ!
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ತೆಗಳಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ಶಿಕ್ಷಣ ಸಚಿವ ಧರ್ಮ ತೆಗೆಳಿದ್ದು ಮಾತ್ರವಲ್ಲ, ಇಸ್ಲಾಂ ಹೊಗಳುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.

ಪಾಟ್ನಾ(ಸೆ.09) ಸನಾತನ ಧರ್ಮ ತೆಗಳುವುದ ಇದೀಗ ಫ್ಯಾಶನ್ ಆಗಿದೆ. ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದನಿಧಿ ಸ್ಟಾಲಿನ್ ಸತಾನ ಧರ್ಮದ ನಾಶ ಕರೆಕೊಟ್ಟು ಭಾರಿ ವಿವಾದ ಸೃಷ್ಟಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಹಾರದ ಶಿಕ್ಷಣ ಸಚಿವ ಎಡವಟ್ಟು ಮಾಡಿದ್ದಾರೆ. ಇಸ್ಲಾಂ ಧರ್ಮ ಸ್ಥಾಪಕ ಪ್ರವಾದಿ ಮೊಹಮ್ಮದ್ ಮರ್ಯಾದ ಪುರುಷೋತ್ತಮ ಎಂದು ಕರೆದಿದ್ದಾರೆ. ಇಷ್ಟೇ ಅಲ್ಲ ಜಗತ್ತಿನಲ್ಲಿ ಸನಾತ ಧರ್ಮ ಹೆಚ್ಚಾದಾಗ ಅಧರ್ಮ ಹೆಚ್ಚಾಯಿತು, ಧರ್ಮದ ಮೇಲಿನ ನಂಬಿಕೆ ಇಲ್ಲವಾಯಿತು. ಈ ವೇಳೆ ಹುಟ್ಟಿಕೊಂಡ ಧರ್ಮವೇ ಇಸ್ಲಾಂ ಎಂದಿದ್ದಾರೆ. ಈ ಮಾತನ್ನು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಆಡಿದ್ದಾರೆ.
ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ನೀಡಿರುವ ಹೇಳಿಕೆ ಇದೀ ಭಾರಿ ವಿವಾದಕ್ಕೆ ಕಾರಣವಾಗಿದೆ. ವಿಶ್ವದಲ್ಲಿ ಸನಾತನ ಧರ್ಮದ ಅನುಯಾಯಿಗಳು ಹೆಚ್ಚಾದಾಗ ಪೈಶಾಚಿಕತೆ ಹೆಚ್ಚಾಯಿತು. ನಂಬಿಕೆ ಕೊನೆಗೊಂಡಿತು. ಅಪ್ರಮಾಣಿಕ ಜನರು ದೆವ್ವಗಳು ತಾಂಡವವಾಡಲು ಆರಂಭಿಸಿತು. ಈ ವೇಳೆ ಮಧ್ಯ ಏಷ್ಯಾದಲ್ಲಿ ದೇವರಲ್ಲಿನ ನಂಬಿಕೆಯನ್ನು ಪುನಸ್ಥಾಪಿಸಲು ಮಹಾನ್ ಮರ್ಯಾದಾ ಪುರುಷೋತ್ತಮ ಅವತರಿಸಿದ. ಅವರ ಹೆಸರು ಪ್ರವಾದಿ ಮೊಹಮ್ಮದ್ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ಸನಾತನ ಧರ್ಮ ಹೆಚ್‌ಐವಿ, ಕುಷ್ಠರೋಗದಿಂದ ಕೂಡಿದೆ: ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ರೆಡಿ ಎಂದ ಎ. ರಾಜಾ
ಇಸ್ಲಾಂ ಧರ್ಮ ಹುಟ್ಟಿದ್ದು ಭಕ್ತರಿಗಾಗಿ, ಇಸ್ಲಾಂ ಧರ್ಮ ಅಪ್ರಮಾಣಿಕ ಜನರನ್ನು ಸದೆಬಡಿದು ಒಳ್ಳೆತನ ನೆಲಸಲು ಅವತರಿಸಿತು. ಕೆಟ್ಟದ ವಿರುದ್ಧ ಇಸ್ಲಾಂ ಧರ್ಮ ಹುಟ್ಟಿಕೊಂಡಿತು ಎಂದು ಚಂದ್ರಶೇಖರ್ ಹೇಳಿದ್ದಾರೆ. ಇಸ್ಲಾಂ ಹೊಗಳುವ ಭರದಲ್ಲಿ ಸನಾತನ ಧರ್ಮವನ್ನು ಟೀಕಿಸಿದ್ದಾರೆ. ರಾಷ್ಟ್ರೀಯ ಜನತಾ ದಳ ನಾಯಕನ ಮಾತು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಶ್ರೀಕೃಷ್ಣಜನ್ಮಾಷ್ಠಮಿ ಕಾರ್ಯಕ್ರಮಕ್ಕೆ ಆಗಮಿಸಿದ ಶಿಕ್ಷಣ ಸಚಿವ ಚಂದ್ರಶೇಕರ್ ಶ್ರೀಕೃಷ್ಣನ ಕುರಿತು ಒಂದು ಮಾತು ಆಡಿಲ್ಲ. ತಮ್ಮ ಇಡೀ ಭಾಷಣವನ್ನು ಇಸ್ಲಾಂ ಧರ್ಮವನ್ನು ಹೊಗಳಲು ಹಾಗೂ ಸನಾತನ ಧರ್ಮ ತೆಗಳಲು ಮೀಸಲಿಟ್ಟಿರು. ಚಂದ್ರಶೇಖರ್ ಮಾತಿಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಲಾಲು ಪ್ರಸಾದ್ ಯಾದವ್ ಅರ್‌ಜೆಡಿ ಪಕ್ಷ ಇದೀಗ ಹಿಂದೂ ಧರ್ಮವನ್ನು ತೆಗಳಿ ಅಲ್ಪಸಂಖ್ಯಾತ ಮತಗಳಿಸುವ ಪ್ಲಾನ್ ಮಾಡಿದೆ. ಆದರೆ ಈ ರೀತಿಯ ವಿವಾದವನ್ನು ಜನರುಒಪ್ಪಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಹೇಳಿದೆ.
ತಮಿಳುನಾಡಿನಲ್ಲಿ ಮುಂದುವರಿದ ಸನಾತನ ಸಂಘರ್ಷ, ಮಗನಿಗೆ ಕ್ಲಿನ್‌ಚಿಟ್ ನೀಡಿದ ಸ್ಟ್ಯಾಲಿನ್
ಚಂದ್ರಶೇಖರ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ರಾಮಾಯಣ ವಿರುದ್ದ ಹೇಳಿಕೆ ನೀಡಿದ್ದರು. ಇದೀಗ ಸನಾತನ ಧರ್ಮವನ್ನು ತೆಗಳಿದ್ದಾರೆ. ಈಮೂಲಕ ಕೋಟ್ಯಾಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಸಚಿವರಿಗೆ ಯಾವುದೇ ಧರ್ಮವನ್ನು ಹೊಗಳುವ ಅಥವಾ ಈ ಧರ್ಮಕ್ಕೆ ಮತಾಂತವಾಗುವ ಹಕ್ಕಿದೆ. ಆದರೆ ಯಾವುದೇ ಧರ್ಮವನ್ನು ತೆಗಳುವು ಹಕ್ಕಿಲ್ಲ, ಸಚಿವರು ಹಿಂದೂ ಧರ್ಮದ ಭಾವನೆಗೆಧಕ್ಕೆ ತಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.