Asianet Suvarna News Asianet Suvarna News

ವೈದ್ಯಕೀಯ ಸಲಕರಣೆ ಕೊರತೆ, ಯೂರಿನ್‌ ಬ್ಯಾಗ್‌ ಬದಲು ಸ್ಪ್ರೈಟ್ ಬಾಟಲಿ ಬಳಸಿದ ಆಸ್ಪತ್ರೆ!

ಅಗತ್ಯ ಉಪಕರಣಗಳು ಮತ್ತು ಔಷಧಿಗಳ ಕೊರತೆಯಿಂದಾಗಿ, ಬಿಹಾರದ ಆಸ್ಪತ್ರೆಯ ಆಸ್ಪತ್ರೆಯ ಸಿಬ್ಬಂದಿ ಮೂತ್ರ ಚೀಲದ ಬದಲಿಗೆ ಸ್ಪ್ರೈಟ್ ಬಾಟಲಿಯನ್ನು ಜೋಡಿಸಿದ ಅಮಾನವೀಯ ಘಟನೆ ನಡೆದಿದೆ.

Bihar Jamui Sadar Hospital  Sprite Cold Drink Bottle Replaced By Urine Bag san
Author
First Published Aug 9, 2023, 12:11 PM IST

ನವದೆಹಲಿ (ಆ.9): ಬಿಹಾರದ ಆಸ್ಪತ್ರೆಯೊಂದರಲ್ಲಿ ತೀವ್ರ ನಿರ್ಲಕ್ಷ್ಯದ ಘಟನೆ ವರದಿಯಾಗಿದೆ. ಜೀವರಕ್ಷಕ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಕೊರತೆಯಿಂದಾಗಿ ಬಿಹಾರದ ಆಸ್ಪತ್ರೆಯ ಸಿಬ್ಬಂದಿಗಳು ಒಳರೋಗಿಯಾಗಿ ದಾಖಲಾಗಿರುವ ವ್ಯಕ್ತಿಗೆ ಮೂತ್ರ ಚೀಲ(ಯೂರಿನ್‌ ಬ್ಯಾಗ್‌) ಹಾಕುವ ಬದಲು ಸ್ಪ್ರೈಟ್ ಬಾಟಲಿಯನ್ನು ಬಳಸಿದ್ದಾರೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಜಾಮುನೈ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ರೋಗಿಯ ತಪಾಸಣೆ ಮಾಡಿದ್ದ ವೈದ್ಯರು, ರೋಗಿಗೆ ಯೂರಿನ್‌ ಬ್ಯಾಗ್‌ಅನ್ನು ಜೋಡಿಸುವಂತೆ ನರ್ಸ್‌ಗೆ ಸೂಚಿಸಿದ್ದಲ್ಲದೆ, ಇನ್ಸುಲಿನ್‌ ಚುಚ್ಚುಮದ್ದನ್ನು ನೀಡಿ ಗ್ಯಾಸ್‌ ಪೈಪ್‌ ಜೋಡಿಸುವ ಮೂಲಕ ಅವರಿಗೆ ಪ್ರಜ್ಞೆ ತರಿಸುವ ಪ್ರಯತ್ನವನ್ನು ವೈದ್ಯರು ಮಾಡಿದ್ದರು. ಆದರೆ, ಆಸ್ಪತ್ರೆಯಲ್ಲಿ ಅಗತ್ಯ ಉಪಕರಣಗಳು ಹಾಗೂ ಔಷಧಗಳ ಕೊರತೆ ಇದ್ದ ಕಾರಣಕ್ಕೆ ರೋಗಿಗೆ ಯೂರಿನ್‌ ಬ್ಯಾಗ್‌ ಅನ್ನು ಜೋಡಿಸುವ ಬದಲು, ಸ್ಪ್ರೈಟ್ ಬಾಟಲಿಯನ್ನು ಜೋಡಿಸಿ ನಿರ್ಲಕ್ಷ್ಯ ತೋರಿದ್ದಾರೆ. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ರೋಗಿಯ ಕುಟುಂಬದವರು ಆಸ್ಪತ್ರೆಯ ವ್ಯವಸ್ಥಾಪಕ ರಮೇಶ್ ಪಾಂಡೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಮಂಗಳವಾರ ಬೆಳಗ್ಗೆ ಪರಿಸ್ಥಿತಿ ತಿಳಿಗೊಳಿಸಿ ಮೂತ್ರ ಚೀಲ ಸೇರಿದಂತೆ ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಆಸ್ಪತ್ರೆಯ ತೋರಿದ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆ ಎದುರಾದಾಗ ಇದನ್ನು ಡಿಫೆಂಡ್‌ ಮಾಡಿಕೊಂಡ ರಮೇಶ್‌ ಪಾಂಡೆ, ಯೂರಿನಲ್‌ ಬ್ಯಾಗ್‌ಗಳ ಕೊರತೆಯ ಬಗ್ಗೆ ನನಗೆ ತಿಳಿದಿಲ್ಲ. ಮಾಹಿತಿ ಬಂದ ತಕ್ಷಣ ಇದರ ವ್ಯವಸ್ಥೆ ಮಾಡಲಾಗಿದೆ.

ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಕಾಲು ಮುರಿದುಕೊಂಡಿದ್ದರು. ಆದ್ದರಿಂದ ಔಷಧದ ಕೊರತೆಯ ಬಗ್ಗೆ ನನಗೆ ತಿಳಿಸಿರಲಿಲ್ಲ' ಎಂದು ರಮೇಶ್‌ ತಿಳಿಸಿದ್ದು, ಈಗ ಅಗತ್ಯವಿರುವ ಎಲ್ಲಾ ಔಷಧಗಳನ್ನು ಸರಬರಾಜು ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ. ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಮೂತ್ರ ಚೀಲಗಳು ಖಾಲಿಯಾಗಿವೆ. ಆದರೆ, ಮೂತ್ರ ಚೀಲದ ಬದಲು ತಂಪು ಪಾನೀಯ ಬಾಟಲಿ ಹಾಕಿರುವುದು ಗಂಭೀರ ವಿಚಾರ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸೋಮವಾರ ರಾತ್ರಿ ಜಾಝಾ ರೈಲ್ವೆ ಪೊಲೀಸ್‌ ಅಧಿಕಾರಿಗಳು, ರೈಲ್ವೆ ಟ್ರ್ಯಾಕ್‌ನ ಬಳಿ ಅಂದಾಜು 60 ವರ್ಷದ ವ್ಯಕ್ತಿ ಕಾಲು ಮುರಿದುಕೊಂಡು ಬಿದ್ದಿದ್ದರು. ಅವರನ್ನು ಪೊಲೀಸ್‌ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಮಾಹಿತಿ ಪಡೆದು ಅವರ ಕುಟುಂಬದವರಿಗೆ ತಿಳಿಸಿದ್ದರು.

'ಇಷ್ಟ ಆಗಿಲ್ಲ ಅಂದ್ರೆ ನೋಡಬೇಡಿ' ಟಿವಿ ಚಾನೆಲ್‌ಗಳ ನಿಯಂತ್ರಣಕ್ಕೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ

ಈ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಇರುವುದು ಇದು ಮೊದಲೇನಲ್ಲ. ಹಿಂದೆಯೂ ಹಲವು ಬಾರಿ ಇಂಥ ಘಟನೆಗಳು ಆಗಿದ್ದವು ಎಂದು ಜನರು ಹೇಳಿದ್ದಾರೆ. ಮೂತ್ರ ಚೀಲದ ಬದಲು ತಂಪು ಪಾನೀಯದ ಬಾಟಲಿಯನ್ನು ಜೋಡಿಸಿರುವುದು ಇಲ್ಲಿನ ಆಸ್ಪತ್ರೆಯ ಅವ್ಯವಸ್ಥೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ ಎಂದಿದ್ದಾರೆ.

ದೇಶದಲ್ಲಿ 22 ಅಧಿಕೃತ ಭಾಷೆ ಇರಬಹುದು, ಆದರೆ, ಹಿಂದಿ ರಾಷ್ಟ್ರಭಾಷೆ: ಸುಪ್ರೀಂ ಕೋರ್ಟ್‌

Follow Us:
Download App:
  • android
  • ios