Asianet Suvarna News Asianet Suvarna News

'ಇಷ್ಟ ಆಗಿಲ್ಲ ಅಂದ್ರೆ ನೋಡಬೇಡಿ' ಟಿವಿ ಚಾನೆಲ್‌ಗಳ ನಿಯಂತ್ರಣಕ್ಕೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂ

ಟಿವಿ ಸುದ್ದಿ ವಾಹಿನಿಗಳ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಮತ್ತು ಪ್ರಸಾರವಾಗುತ್ತಿರುವ ವಿಷಯಕ್ಕೆ ಸಂಬಂಧಿಸಿದ ಕುಂದುಕೊರತೆ ಪರಿಹಾರಕ್ಕಾಗಿ ಮಾಧ್ಯಮ ನ್ಯಾಯಮಂಡಳಿಗಳನ್ನು ರಚಿಸುವಂತೆ ಸಲ್ಲಿಕೆಯಾಗಿದ್ದ ಎರಡು ಅರ್ಜಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
 

Supreme Court on pleas to regulate TV news channels Dont watch if you dont like san
Author
First Published Aug 9, 2023, 11:08 AM IST

ನವದೆಹಲಿ (ಆ.9): ದೇಶದಲ್ಲಿ ಟಿವಿ ನ್ಯೂಸ್‌ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಗಳಲ್ಲಿ ನಿಯಂತ್ರಣ ಹೇರಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.  ನ್ಯಾಯಮೂರ್ತಿ ಅಭಯ್ ಓಕಾ ನೇತೃತ್ವದ ವಿಭಾಗೀಯ ಪೀಠವು ಈ ಚಾನೆಲ್‌ಗಳನ್ನು ನೋಡಬೇಕೆ ಅಥವಾ ಬೇಡವೇ ಎಂಬುದನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ವೀಕ್ಷಕರಿಗೆ ಇದೆ. ಹಾಗಾಗಿ ಟಿವಿ ನ್ಯೂಸ್‌ ಚಾನೆಲ್‌ಗಳನ್ನ ನಿಯಂತ್ರಿಸಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ. ದೇಶದಲ್ಲಿ ಆಗುವ ಸಣ್ಣ ಪುಟ್ಟ ವಿಚಾರಗಳನ್ನೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ಪ್ರವೃತ್ತಿಯ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಬರುವ ಮುನ್ನ ಹೈಕೋರ್ಟ್‌ಗೆ ಯಾಕೆ ಹೋಗಲಿಲ್ಲ ಎನ್ನುವುದನ್ನು ಪ್ರಶ್ನೆ ಮಾಡಿದೆ.  ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಧೀಶರ ಕುರಿತು ನೀಡಿರುವ ಹೇಳಿಕೆಗಳ ವಿಚಾರವಾಗಿಯೂ ನ್ಯಾಯಾಲಯ ಮಾತನಾಡಿಎ. "ನಾವು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸೋಶಿಯಲ್‌ ಮೀಡಿಯಾಗಳಲ್ಲಿ ಮಾರ್ಗಸೂಚಿಗಳನ್ನು ಹಾಕುವುದು ನಮ್ಮ ಕೆಲಸವಲ್ಲ' ಎಂದಿದೆ.

ಅದರೊಂದಿಗೆ, ಮಾಧ್ಯಮಗಳಲ್ಲಿ ಬರುತ್ತಿರುವ ಕಂಟೆಂಟ್‌ಗಳಿಗೆ ದೂರು ನೀಡಲು ಈಬಗ್ಗೆ ತ್ವರಿತವಾಗಿ ನಿರ್ಧರಿಸಲು ಸ್ವತಂತ್ರ ಮಾಧ್ಯಮ ನ್ಯಾಯಮಂಡಳಿ ಸ್ಥಾಪನೆಗೆ ಕರೆ ನೀಡಿದ ಮನವಿಗಳನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

ದೇಶದಲ್ಲಿ 22 ಅಧಿಕೃತ ಭಾಷೆ ಇರಬಹುದು, ಆದರೆ, ಹಿಂದಿ ರಾಷ್ಟ್ರಭಾಷೆ: ಸುಪ್ರೀಂ ಕೋರ್ಟ್‌

ಪ್ರಸಾರಕರು ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮುಕ್ತ ಭಾಷಣವನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸಲು ಮತ್ತು ನಿರ್ಣಾಯಕ ವಿಷಯಗಳ ಕುರಿತು ಟಿವಿ ಚಾನೆಲ್‌ಗಳು ಸಂವೇದನಾಶೀಲ ವರದಿ ಮಾಡುವುದನ್ನು ತಡೆಯಲು ಸುದ್ದಿ ಪ್ರಸಾರಕರಿಗೆ ಸ್ವತಂತ್ರ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವಂತೆ ಮನವಿಗಳು ಕೋರಿದ್ದವು.

ಕೇಂದ್ರ ಸರ್ಕಾರಕ್ಕೆ ಹಿನ್ನಡೆ, ಇಡಿ ನಿರ್ದೇಶಕ ಸಂಜಯ್‌ ಕುಮಾರ್‌ ಅವಧಿ ವಿಸ್ತರಣೆ ಅಕ್ರಮ ಎಂದ ಸುಪ್ರೀಂ ಕೋರ್ಟ್‌

Follow Us:
Download App:
  • android
  • ios