ಜಿಲ್ಲೆಯ ಪರಿಸ್ಥಿತಿ ಗಂಭೀರ, ಫೇಸ್‌ಬುಕ್, ವ್ಯಾಟ್ಸ್ಆ್ಯಪ್, ಟ್ವಿಟರ್ ಸೇರಿ 20 ಆ್ಯಪ್ ತಾತ್ಕಾಲಿಕ ನಿಷೇಧಿಸಿದ ಬಿಹಾರ!
ಗಲಭೆ ತೀವ್ರತೆ ಹೆಚ್ಚಾಗುವ, ಪ್ರಚೋದನೆ ಸಿಗುವ ಹಾಗೂ ಶಾಂತಿಕದಡುವ ಸಾಧ್ಯತೆಯಿಂದ ಫೇಸ್‌ಬುಕ್, ವ್ಯಾಟ್ಸ್ಆ್ಯಪ್, ಟ್ವಿಟರ್ ಸೇರಿದಂತೆ 23 ಆ್ಯಪ್‌ಗಳನ್ನು ಬಿಹಾರ ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿದೆ.

ಪಾಟ್ನಾ(ಫೆ.06): ಶಾಂತಿಕಾಪಾಡಲು ಬಿಹಾರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರ ಕಣಿವೆಯಲ್ಲಿ ಕಾಣುತ್ತಿದ್ದ ನಡೆಯೊಂದು ಇದೀಗ ಬಿಹಾರದಲ್ಲಿ ತೆಗೆದುಕೊಳ್ಳಲಾಗಿದೆ. ಬಿಹಾರದಲ್ಲಿ ಫೇಸ್‌ಬುಕ್, ವ್ಯಾಟ್ಸ್ಆ್ಯಪ್, ಟ್ವಿಟರ್, ಸ್ನಾಪ್‌ಚಾಟ್ ಸೇರಿದಂತೆ 23ಕ್ಕೂ ಹೆಚ್ಚು ಆ್ಯಪ್‌ಗಳನ್ನು ಬಿಹಾರ ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿದೆ. ಬಿಹಾರದ ಸರನ್ ಜಿಲ್ಲಿ ಹೊತ್ತಿ ಉರಿದಿದೆ. ಯುವಕನೊಬ್ಬನ್ನು ಕಿಡಿಗೇಡಿಗಳ ಗುಂಪು ತೀವ್ರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದರಿಂದ ಕೆರಳಿದ ಕೆಲ ಗುಂಪುಗಳು ಮುಬಾರಕಪುರ ಗ್ರಾಮದ 30ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದೆ. ಸರನ್ ಜಿಲ್ಲೆಯ ಗಲಭೆ ತಾರಕಕ್ಕೇರಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಾಗೂ ಗಲಭೆಗೆ ಎಡೆಮಾಡಿಕೊಡದಿರಲು 23 ಆ್ಯಪ್‌ಗಳನ್ನು ಬಿಹಾರ ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿದೆ.
ಫೆಬ್ರವರಿ 8ರ ರಾತ್ರಿ 11 ಗಂಟೆ ವರೆಗೆ ಸಾಮಾಜಿಕ ಜಾಲತಾಣ ಸೇರಿದಂತೆ 23 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಜಿಲ್ಲೆಯಲ್ಲಿ ಶಾಂತಿಸ್ಥಾಪನೆ ಹಾಗೂ ಪರಿಸ್ಥಿತಿ ನಿಯಂತ್ರಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಹಾರ ಸರ್ಕಾರ ಹೇಳಿದೆ. ಇದರ ಜೊತೆಗೆ ಸರ್ಕಾರ ಯೂಟ್ಯೂಬ್‌ಗೆ ವಿಡಿಯೋ , ಫೋಟೋ ಅಪ್ಲೋಡ್ ಮಾಡುವುದನ್ನು ನಿಷೇಧಿಸಿದೆ. ಇಷ್ಟೇ ಅಲ್ಲ ವಿಚಾಟ್, QQ, Qಝೋನ್, ಟಂಬ್ಲರ್, ಗೂಗಲ್ ಪ್ಲಸ್, ಬೈಡು, ವೈಬರ್, ಲೈನ್, ಪಿನ್‌ರೆಸ್ಟ್, ಟೆಲಿಗ್ರಾಂ, ರೆಡ್ಡಿಟ್, ಸ್ನಾಪ್‌ಟಿಶ್, ವೈನ್, ಎಕ್ಸಂಗ, ಬೌನೆಟ್, ಫ್ಲಿಕರ್ ಹಾಗೂ ಇತರ ಕೆಲ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದೆ. ಇದರಲ್ಲಿ ಮಾಸ್ ಮೆಸೇಜ್ ಮಾಡುವ ಸಾಧ್ಯತೆ ಇರುವುದರಿಂದ ಈ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗಿದೆ.
ರಾಮ ಮಂದಿರ ಸ್ಫೋಟಿಸಿ ಬಾಬ್ರಿ ಮಸೀದಿ ಕಟ್ಟಲು ಸಂಚು, ನಿಷೇಧಿತ PFI ಸಂಘಟನೆ ಸದಸ್ಯರ ಬಂಧನ!
ಜಿಲ್ಲಾಧಿಕಾರಿ, ಸೂಪರಿಡೆಂಟ್ ಆಫ್ ಪೊಲೀಸ್ ನೀಡಿರುವ ಮಾಹಿತಿ ಆಧಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪರಿಸ್ಥಿತಿ ನಿಯಂತ್ರಣ ಅತೀ ಅಗತ್ಯವಾಗಿದೆ. ಮತ್ತೊಂದು ಗಲಭೆಗೆ ಅವಕಾಶ ನೀಡದಿರಲು ಈ ಕ್ರಮ ಕೈಗೊಂಡಿದೆ ಎಂದು ಬಿಹಾರ ಸರ್ಕಾರ ಹೇಳಿದೆ.
ಸರನ್ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ
ಸಾಮಾಜಿಕ ಜಾಲತಾಣದಲ್ಲಿ ಒಂದು ಸಮುದಾಯಕ್ಕೆ ಸೇರಿದ ಮೂವರು ಯುವಕರ ಮೇಲೆ ಕೋಳಿ ಫಾರ್ಮ್ ಬಳಿ ಹಲ್ಲೆ ನಡೆಸಲಾಗಿದೆ. ಕಿಡಿಗೇಡಿಗಳ ಹಲ್ಲೆಗೆ ಓರ್ವ ಮೃತಪಟ್ಟಿದ್ದಾನೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಇಷ್ಟೇ ಅಲ್ಲ ಎಚ್ಚರಿಕೆ ಸಂದೇಶವನ್ನು ನೀಡಲಾಗಿತ್ತು. ಈ ವಿಡಿಯೋ ಕ್ಷಣಾರ್ಧದಲ್ಲೇ ವೈರಲ್ ಆಗಿದೆ. ಈ ವಿಡಿಯೋ ಹಲವರನ್ನು ಕೆರಳಿಸಿದೆ. ಇದರ ಬೆನ್ನಲ್ಲೇ ಕರಣಿ ಸೇನೆ ಸಂಘಟನೆ ಪ್ರತೀಕಾರಕ್ಕೆ ಕರೆಕೊಟ್ಟಿದೆ. ಸುಮಾರು 500ಕ್ಕೂ ಹೆಚ್ಚು ಕರಣಿ ಸೇನಾ ಸಂಘಟನೆ ಸದಸ್ಯರು ಮುಬಾರಕಪುರ ಗ್ರಾಮಕ್ಕೆ ತೆರಳಿ 30ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಟ್ಟಿದ್ದಾರೆ. ಈ ಘಟನೆಯಿಂದ ಸರನ್ ಜಿಲ್ಲೆಯ ಕೋಮುಗಲಭೆಗೆ ತಾರಕಕ್ಕೇರಿದೆ.
ಒಡಿಶಾ ಸಚಿವ ಹತ್ಯೆ ಬೆನ್ನಲ್ಲೇ ಜೆಡಿಯು ನಾಯಕನ ವಾಹನದ ಮೇಲೆ ದಾಳಿ..! ಗಲಭೆಯಲ್ಲಿ ಇಬ್ಬರಿಗೆ ಗಾಯ
ಯುವಕನ ಕೊಲೆ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲ ಪ್ರಚೋಜನೆ ನೀಡಿದ ಸೇರಿದಂತೆ ಘಟನಗೆ ಸಂಬಂಧಿಸಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ. ಸರನ್ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಸದ್ಯ ಸರನ್ ಜಿಲ್ಲೆಯಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಯಾರು ಗುಂಪು ಸೇರುವಂತಿಲ್ಲ. ಸಾಮಾಜಿಕ ಜಾಲತಾಣಗಳು ನಿಷೇಧಿಸಲಾಗಿದೆ. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.