ಕ್ವಾರಂಟೈನ್ ಮುಗಿಸಿದ ವಲಸಿಗರಿಗೆ ಕಾಂಡೋಂ ವಿತರಣೆ!
ಜನಸಂಖ್ಯಾ ಸ್ಫೋಟದ ಅಪಾಯ| ಕ್ವಾರಂಟೈನ್ ಮುಗಿಸಿದ ವಲಸಿಗರಿಗೆ ಕಾಂಡೋಂ ವಿತರಣೆ!|
ಪಟನಾ(ಜೂ.03): ಬಿಹಾರದಲ್ಲಿ ಈಗ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಕುಟುಂಬವನ್ನು ಸೇರಿಕೊಳ್ಳುತ್ತಿರುವುದರಿಂದ ಜನಸಂಖ್ಯಾ ಸ್ಫೋಟದ ಅಪಾಯ ಎದುರಾಗಿದೆ. ಹೀಗಾಗಿ ಬಯಸದ ಗರ್ಭಧಾರಣೆ ತಡೆಯುವ ಸಲುವಾಗಿ ಕ್ವಾರಂಟೈನ್ ಕೇಂದ್ರಗಳಿಂದ ಬಿಡುಗಡೆ ಆಗುವ ವಲಸೆ ಕಾರ್ಮಿಕರಿಗೆ ಬಿಹಾರದ ಆರೋಗ್ಯ ಇಲಾಖೆ ಉಚಿತವಾಗಿ ಕಾಂಡೋಮ್‌ಗಳನ್ನು ವಿತರಿಸುತ್ತಿದೆ.
ವಿವಿಧ ರಾಜ್ಯಗಳಿಂದ ಬಿಹಾರಕ್ಕೆ 28ರಿಂದ 29 ಲಕ್ಷ ವಲಸೆ ಕಾರ್ಮಿಕರು ಆಗಮಿಸಿದ್ದು, ಅವರ ಪೈಕಿ ಸುಮರು 9 ಲಕ್ಷ ಕಾರ್ಮಿಕರು 14 ದಿನಗಳ ಕ್ವಾರಂಟೈನ್ ಅನ್ನು ಮುಗಿಸಿ ಮನೆಗೆ ತೆರಳಿದ್ದಾರೆ. ಇದಲ್ಲದೇ ಸುಮಾರು 5.50 ಲಕ್ಷ ವಲಸೆ ಕಾರ್ಮಿಕರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಕ್ವಾರಂಟೈನ್ ಕೇಂದ್ರಗಳಲ್ಲಿ ತಂಗಿದ್ದಾರೆ.
ಕೊರೋನಾ ವೈರಸ್‌ಗೂ ಕಾಂಡೋಮ್ ವಿತರಣೆಗೂ ಯಾವುದೇ ಸಂಬಂಧ ಇಲ್ಲ. ಆದರೆ, ಜನಸಂಖ್ಯೆ ಏರಿಕೆಯನ್ನು ತಡೆಯುವುದು ನಮ್ಮ ಉದ್ದೇಶ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾre. ಸರ್ಕಾರದ ಸಾಂಸ್ಥಿಕ ಕ್ವಾರಂಟೈನ್ ಅಂತ್ಯಗೊಳ್ಳುವವರೆಗೂ ಈ ಕ್ರಮ ಮುಂದುವರಿಯಲಿದೆ.