Asianet Suvarna News Asianet Suvarna News

ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹೆಸ್ರಲ್ಲಿ ನಕಲಿ ಸಂಸ್ಥೆಗಳ ವಂಚನೆ: 5 ವರ್ಷದಲ್ಲಿ 145 ಕೋಟಿ ಹಗರಣ ಬೆಳಕಿಗೆ!

ದೇಶದ 34 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 100 ಜಿಲ್ಲೆಗಳಲ್ಲಿ ವಿಚಾರಣೆಗಳನ್ನು ಒಳಗೊಂಡಿತ್ತು.

biggest minority scholarship scam busted 53 percent of institutions cbi to probe ash
Author
First Published Aug 20, 2023, 6:02 PM IST

ನವದೆಹಲಿ (ಆಗಸ್ಟ್‌ 20, 2023): ಭಾರತದಲ್ಲಿನ ಅತಿದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹಗರಣ ಇತ್ತೀಚೆಗೆ ಬೆಳಕಿಗೆ ಬಂದಿದೆ.  ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಸಕ್ರಿಯವಾಗಿರುವ ಸುಮಾರು 53 ಪ್ರತಿಶತ ಸಂಸ್ಥೆಗಳು 'ನಕಲಿ' ಎಂದು ಕಂಡುಬಂದಿದೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ನಡೆಸಿದ ಆಂತರಿಕ ತನಿಖೆಯ ವೇಳೆ ಈ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ.

830 ಸಂಸ್ಥೆಗಳಲ್ಲಿ ಆಳವಾದ ಬೇರೂರಿರುವ ಭ್ರಷ್ಟಾಚಾರವನ್ನು ತನಿಖೆ ಬಹಿರಂಗಪಡಿಸಿದ್ದು, ಕಳೆದ 5 ವರ್ಷಗಳಲ್ಲಿ 144.83 ಕೋಟಿ ರೂಪಾಯಿಗಳ ಹಗರಣಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಚ್ಚಿನ ತನಿಖೆಗಾಗಿ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ನೀಡಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಜುಲೈ 10 ರಂದು ಈ ವಿಷಯದಲ್ಲಿ ತನ್ನ ದೂರನ್ನು ಅಧಿಕೃತವಾಗಿ ಸಲ್ಲಿಸಿದೆ ಎಂದೂ ತಿಳಿದುಬಂದಿದೆ.

ಇದನ್ನು ಓದಿ: ಶರದ್‌ ಪವಾರ್‌ ಆಪ್ತನ ಮನೇಲಿ 1 ಕೋಟಿಗೂ ಅಧಿಕ ಹಣ, 25 ಕೋಟಿ ಮೌಲ್ಯದ ಚಿನ್ನ, ವಜ್ರ ಸೀಜ್‌; ಸಾವಿರಾರು ಕೆಜಿ ಆಭರಣ ನಾಪತ್ತೆ!

ತನಿಖೆಯು ದೇಶದ 34 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 100 ಜಿಲ್ಲೆಗಳಲ್ಲಿ ವಿಚಾರಣೆಗಳನ್ನು ಒಳಗೊಂಡಿತ್ತು. 1572 ಸಂಸ್ಥೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, 830 ಸಂಸ್ಥೆಗಳು ಮೋಸದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. 34 ರಾಜ್ಯಗಳಲ್ಲಿ 21 ರಾಜ್ಯಗಳಿಂದ ಅಂಕಿ ಅಂಶಗಳು ಬಂದಿದ್ದು, ಉಳಿದ ರಾಜ್ಯಗಳಲ್ಲಿನ ಸಂಸ್ಥೆಗಳ ತನಿಖೆಗಳು ಇನ್ನೂ ನಡೆಯುತ್ತಿವೆ. ಸದ್ಯಕ್ಕೆ ಈ 830 ಸಂಸ್ಥೆಗಳಿಗೆ ಸಂಬಂಧಿಸಿದ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ. ಈ ಪೈಕಿ ಕರ್ನಾಟಕದಲ್ಲೂ ಶೇಕಡಾ 64 ರಷ್ಟು ಸಂಸ್ಥೆಗಳು ನಕಲಿ ಎಂದು ಕಂಡುಬಂದಿದೆ.

ಸಚಿವಾಲಯದ ವಿದ್ಯಾರ್ಥಿವೇತನ ಕಾರ್ಯಕ್ರಮವು ಸುಮಾರು 1,80,000 ಸಂಸ್ಥೆಗಳಿಗೆ ವಿಸ್ತರಿಸಿದ್ದು, 1 ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗಿನ ವಿದ್ಯಾರ್ಥಿಗಳನ್ನು ಒಳಗೊಂಡಿದೆ. 2007-2008ರ ಶೈಕ್ಷಣಿಕ ವರ್ಷದಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು, ಕಾರ್ಯಕ್ರಮಕ್ಕಾಗಿ ನಕಲಿ ಫಲಾನುಭವಿಗಳೊಂದಿಗೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಾದ ವಿದ್ಯಾರ್ಥಿವೇತನವನ್ನು ಪ್ರತಿ ವರ್ಷ ಈ ಸಂಸ್ಥೆಗಳು ಕ್ಲೈಮ್ ಮಾಡುತ್ತವೆ.

ಇದನ್ನೂ ಓದಿ: TATA ಗ್ರೂಪ್‌ನ ಈ ಷೇರಿಂದ ಜುಂಜುನ್ವಾಲಾ ಪತ್ನಿಗೆ ಒಂದೇ ದಿನದಲ್ಲಿ 315 ಕೋಟಿ ಲಾಭ: ನೀವು ಯಾಕೆ ಟ್ರೈ ಮಾಡ್ಬಾರ್ದು!

ಈ ಮಧ್ಯೆ, ಸಿಬಿಐ ಅನುಮೋದನೆ ವರದಿಗಳನ್ನು ನೀಡಿದ ಈ ಸಂಸ್ಥೆಗಳ ನೋಡಲ್ ಅಧಿಕಾರಿಗಳು, ನಕಲಿ ಪ್ರಕರಣಗಳನ್ನು ಪರಿಶೀಲಿಸಿದ ಜಿಲ್ಲಾ ನೋಡಲ್ ಅಧಿಕಾರಿಗಳು ಮತ್ತು ಹಲವಾರು ರಾಜ್ಯಗಳು ಈ ಹಗರಣವನ್ನು ವರ್ಷಗಳಿಂದ ಹೇಗೆ ಮುಂದುವರಿಸಲು ಅವಕಾಶ ಮಾಡಿಕೊಟ್ಟಿವೆ ಎಂಬುದನ್ನು ತನಿಖೆ ನಡೆಸುತ್ತದೆ. ನಕಲಿ ಆಧಾರ್ ಕಾರ್ಡ್‌ಗಳು ಮತ್ತು KYC ದಾಖಲೆಗಳೊಂದಿಗೆ ಫಲಾನುಭವಿಗಳಿಗೆ ನಕಲಿ ಖಾತೆಗಳನ್ನು ತೆರೆಯಲು ಬ್ಯಾಂಕ್‌ಗಳು ಹೇಗೆ ಅವಕಾಶ ಮಾಡಿಕೊಟ್ಟಿವೆ ಎಂಬ ಪ್ರಶ್ನೆ ಸಹ ಕೇಳಿಬಂದಿದೆ. 

ಇದನ್ನೂ ಓದಿ: ಹೇಗಿದೆ ನೋಡಿ ಅಲ್ಲು ಅರ್ಜುನ್ ಮಾವನ ‘ಪಾಲಿಟ್ರಿಕ್ಸ್‌’: RSS ಅಲ್ಲ, ಎಡ ಪಕ್ಷದ ಸಿದ್ಧಾಂತ ಫಾಲೋ ಮಾಡ್ತಿದ್ದ ಸಾವರ್ಕರ್‌?

Follow Us:
Download App:
  • android
  • ios