TATA ಗ್ರೂಪ್‌ನ ಈ ಷೇರಿಂದ ಜುಂಜುನ್ವಾಲಾ ಪತ್ನಿಗೆ ಒಂದೇ ದಿನದಲ್ಲಿ 315 ಕೋಟಿ ಲಾಭ: ನೀವು ಯಾಕೆ ಟ್ರೈ ಮಾಡ್ಬಾರ್ದು!
ಷೇರು ಮಾರುಕಟ್ಟೆ ಕಳೆದೊಂದು ವಾರದಿಂದ ದುರ್ಬಲವಾಗಿದ್ದರೂ ಟಾಟಾ ಗ್ರೂಪ್‌ನ ಈ ಷೇರಿನಿಂದ ರೇಖಾ ಜುಂಜುನ್ವಾಲಾ ಅವರು 315 ಕೋಟಿ ರೂ. ಲಾಭ ಮಾಡಿದ್ದಾರೆ. ಹೇಗೆ ಅಂತೀರಾ..? ಬನ್ನಿ ನೋಡೋಣ..
ಷೇರು ಮಾರುಕಟ್ಟೆ ಕಳೆದೊಂದು ವಾರದಿಂದ ದುರ್ಬಲವಾಗಿದ್ದರೂ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಹಲವು ಸೂಚ್ಯಂಕಗಳ ಮೌಲ್ಯ ಇಳಿಕೆ ಕಂಡಿದೆ. ಆದರೂ, ಟಾಟಾ ಗ್ರೂಪ್‌ನ ಈ ಷೇರು ನಿಫ್ಟಿಯಲ್ಲಿ ಹೆಚ್ಚು ಲಾಭ ಮಾಡಿದೆ.
ಟೈಟಾನ್‌ನ ಷೇರುಗಳು 2% ಲಾಭ ಗಳಿಸಿದ್ದು, 3100 ರೂ. ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಇದು ಇಂಟ್ರಾಡೇನಲ್ಲಿ 3075.50 ರೂ. ಗೆ ಏರಿಕೆಯಾಗಿತ್ತು. ಇದರಿಂದ, ಈ ಕಂಪನಿಯ ಹೂಡಿಕೆದಾರರಾದ ರೇಖಾ ಜುಂಜುನ್‌ವಾಲಾ, ಅಂದರೆ ಷೇರು ಮಾರುಕಟ್ಟೆಯ ಬಿಗ್ ಬುಲ್ ಎಂದೇ ಖ್ಯಾತರಾಗಿದ್ದ ದಿವಂಗತ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ಷೇರುಗಳ ತ್ವರಿತ ಏರಿಕೆಯಿಂದಾಗಿ ಭಾರಿ ಲಾಭ ಗಳಿಸಿದ್ದಾರೆ.
ಟೈಟಾನ್ ಕಂಪನಿಯ ಷೇರು 3075.50 ರೂ. ತಲುಪಿದ್ದ ಕಾರಣ ಇಂಟ್ರಾ ಡೇ ಟ್ರೇಡಿಂಗ್‌ನಲ್ಲಿ 66.15 ರೂ. ಜಿಗಿದಿದೆ. ಟೈಟಾನ್ ಕಂಪನಿಯಲ್ಲಿ ರೇಖಾ ಜುಂಜುನ್ವಾಲಾ ಅವರು 5.36% ಪಾಲು ಹೊಂದಿದ್ದಾರೆ, ಅಂದರೆ 47,595,970 ಷೇರುಗಳು. ಈ ಹಿನ್ನೆಲೆ ಪ್ರತಿ ಷೇರಿಗೆ 66.15 ರೂ. ಲಾಭದಂತೆ ಸುಮಾರು 315 ಕೋಟಿ ರೂ. ಲಾಭ ಮಾಡಿದ್ದಾರೆ. ಇದು ರೇಖಾ ಜುಂಜುನ್ವಾಲಾ ಅವರು ಇಂಟ್ರಾ ಡೇಯಿಂದ ಮಾಡಿದ ಅಧಿಕ ಲಾಭವಾಗಿದೆ.
ಮೊದಲ ತ್ರೈಮಾಸಿಕದಲ್ಲಿ ಹೆಚ್ಚು ಲಾಭ ಗಳಿಸಿದ್ದ ಟೈಟಾನ್
ಆಭರಣ ವ್ಯಾಪಾರದಲ್ಲಿ ಪ್ರಮುಖ ಕಂಪನಿಯಾದ ಟೈಟಾನ್ ತನ್ನ ಮೊದಲ ತ್ರೈಮಾಸಿಕ ಫಲಿತಾಂಶಗಳನ್ನು ಆಗಸ್ಟ್ 2 ರಂದು ಬಿಡುಗಡೆ ಮಾಡಿತು. ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಟೈಟಾನ್ 756 ಕೋಟಿ ರೂಪಾಯಿ ಲಾಭ ಗಳಿಸಿದೆ. ಕನ್ಸೋ ಆದಾಯ ಕೂಡ 11,897 ಕೋಟಿ ರೂ.ಗೆ ಏರಿಕೆಯಾಗಿದೆ. ಎಲ್ಲಾ ವಿಭಾಗಗಳಲ್ಲಿನ ಆದಾಯದ ಬೆಳವಣಿಗೆಯು ಎರಡಂಕಿಗಳಲ್ಲಿತ್ತು.
ಅದ್ಭುತ ರಿಟರ್ನ್ಸ್ ನೀಡುವ ಷೇರುಗಳು
ದುರ್ಬಲ ಮಾರುಕಟ್ಟೆಯಲ್ಲೂ ಟೈಟಾನ್ ಕಂಪನಿಯ ಷೇರುಗಳು ವೇಗವಾಗಿ ವಹಿವಾಟಾಗುತ್ತಿವೆ. ಕಳೆದ 6 ತಿಂಗಳಲ್ಲಿ ಶೇ. 22ಕ್ಕಿಂತ ಹೆಚ್ಚಿನ ಲಾಭವನ್ನು ಈ ಷೇರು ಗಳಿಸಿದ್ದು, ಹೂಡಿಕೆದಾರರು ಫುಲ್ ಖುಷ್ ಆಗಿದ್ದಾರೆ. ಈ ಷೇರುಗಳು 5 ವರ್ಷಗಳಲ್ಲಿ 224 ಪ್ರತಿಶತದಷ್ಟು ಬಲವಾದ ಬೆಳವಣಿಗೆಯನ್ನು ತೋರಿಸಿದೆ.