Asianet Suvarna News Asianet Suvarna News

ಚೀನಾದಿಂದ ದೆಹಲಿಗೆ ಬಂತು 3,600 ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್; ಇದುವರಿಗಿನ ಅತ್ಯಧಿಕ!

  • ಚೀನಾದಿಂದ ಭಾರತಕ್ಕೆ ಬಂತು ಆಕ್ಸಿಜನ್ ಕಾನ್ಸಟ್ರೇಟರ್ಸ್
  • ಗರಿಷ್ಠ ಪ್ರಮಾಣದಲ್ಲಿ ಆಮ್ಲಜನಕ ಪೂರೈಸಿದ ಚೀನಾ
  • 100 ಟನ್ ಆಕ್ಸಿಜನ್ ಪೂರೈಸಿದ ಚೀನಾ
Biggest ever single consignment of oxygen concentrators landed in New Delhi from China ckm
Author
Bengaluru, First Published May 16, 2021, 8:12 PM IST

ನವದೆಹಲಿ(ಮೇ.16): ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕೆ 40ಕ್ಕೂ ಹೆಚ್ಚು ರಾಷ್ಟ್ರಗಳು ಬೆಂಬಲ ನೀಡಿದೆ. ಇದೀಗ ಚೀನಾ ಗರಿಷ್ಠ ಪ್ರಮಾಣದಲ್ಲಿ ಆಕ್ಸಿಜನ್ ಕಾನ್ಸಟ್ರೇಟರ್ಸ್ ಪೂರೈಕೆ ಮಾಡಿದೆ. 3,600 ಆಕ್ಸಿಜನ್ ಕಾನ್ಸಟ್ರೇಟರ್ಸ್ ಭಾರತಕ್ಕೆ ಪೂರೈಕೆ ಮಾಡಿದೆ. ಟನ್‌ಗಳಲ್ಲಿ ಹೇಳುವುದಾದರೆ 100 ಟನ್ ಆಕ್ಸಿಜನ್ ಭಾರತಕ್ಕೆ ಬಂದಿದೆ.ಒಂದು ಬಾರಿ ಭಾರತಕ್ಕೆ ಆಗಮಿಸಿದ ಗರಿಷ್ಠ ಆಕ್ಸಿಜನ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

DRDO ಅಭಿವೃದ್ಧಿಪಡಿಸಿದ 1.5 ಲಕ್ಷ ಆಕ್ಸಿಕೇರ್ ಯುನಿಟ್ ಖರೀದಿಗೆ ಕೇಂದ್ರ ಗ್ರೀನ್ ಸಿಗ್ನಲ್!.

ಚೀನಾದ ಹಂಗ್‌ಝೋ ಏರ್‌ಪೋರ್ಟ್‌ನಿಂದ ಬೋಯಿಂಗ್ 747-400 ವಿಮಾನದ ಮೂಲಕ ದೆಹಲಿಗೆ ಬಂದಿಳಿದಿದೆ. ಬಹುರಾಷ್ಟ್ರೀಯ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯಾದ ಬೊಲ್ಲೂರ್ ಲಾಜಿಸ್ಟಿಕ್ಸ್ ಇಂಡಿಯಾ ಈ ಆಕ್ಸಿಜನ್ ಆಮದಿನ ನೇತೃತ್ವ ವಹಿಸಿದೆ. ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿ ಸುಲಭವಾಗಿ ಆಕ್ಸಿಜನ್ ಕಾನ್ಸಟ್ರೇಟರ್ಸ್ ಭಾರತಕ್ಕೆ ತಲುಪಿಸುವಲ್ಲಿ ಕಾರ್ಯನಿರ್ವಹಿಸಿದೆ.

ಭಾರತಕ್ಕೆ ಬಂದಿಳಿದ ಆಕ್ಸಿಜನ್ ಕಾನ್ಸಟ್ರೇಟರ್ಸ್ ಶೀಘ್ರದಲ್ಲೇ ಹಂಚಿಕೆಯಾಗಲಿದೆ. ದೆಹಲಿ, ರಾಷ್ಟ್ರ ರಾಜಧಾನಿ ವಲಯ ಹಾಗೂ ಉತ್ತರ ಭಾರತದಲ್ಲಿ ಎದ್ದಿರುವ ತೀವ್ರ ಆಕ್ಸಿಜನ್ ಕೊರತೆಗೆ ಚೀನಾದಿಂದ ಆಗಮಿಸಿರುವ 100 ಟನ್ ಆಕ್ಸಿಜನ್ ಉತ್ತರ ನೀಡಲಿದೆ.

ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಎಲ್ಲಾ ರಾಜ್ಯಗಳು ಆಕ್ಸಿಜನ್ ಕೊರತೆ ಎದುರಿಸಿದೆ. ವಿದೇಶಗಳಿಂದ ಟನ್‌ಗಟ್ಟಲೇ ಆಕ್ಸಿಜನ್ ಆಮದು ಮಾಡಿಕೊಂಡು ಹಂಚಲಾಗುತ್ತಿದೆ. ಇದರ ಜೊತೆಗೆ ಭಾರತದಲ್ಲೂ ಆಕ್ಸಿಜನ್ ಉತ್ಪಾದನೆ ಮಾಡಲಾಗುತ್ತಿದೆ. ಆದರೂ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗಲೂ ವಿದೇಶದಿಂದ ಆಕ್ಸಿಜನ್ ಆಮದು ಮಾಡಿಕೊಳ್ಳಲಾಗುತ್ತಿದೆ.

Follow Us:
Download App:
  • android
  • ios